News

15 ಲಕ್ಷ ಸಾಲ ಸ್ವಂತ ಉದ್ಯೋಗಕ್ಕಾಗಿ : ಅರ್ಧ ಹಣ ಸರ್ಕಾರ ಕಟ್ಟುತ್ತೆ ತಕ್ಷಣ ಅರ್ಜಿ ಸಲ್ಲಿಸಿ

15 lakh loan for own employment half of the money will be paid by the government

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಸ್ವಂತ ಉದ್ಯೋಗವನ್ನು ರೈತರು ಮತ್ತು ಮಹಿಳೆಯರು ಮಾಡಲು ಸಾಲು ಸೌಲಭ್ಯವನ್ನು ಹಾಗೂ ಸಹಾಯಧನವನ್ನು ಪಡೆಯಬಹುದಾಗಿದೆ. ಸುಮಾರು 15 ಲಕ್ಷ ರೂಪಾಯಿಗಳವರೆಗೆ ಸಾಲ ಹಾಗೂ 7.5 ಲಕ್ಷ ರೂಪಾಯಿಗಳ ವರೆಗೆ ಸಹಾಯಧನವನ್ನು ರೈತರು ಮತ್ತು ಮಹಿಳೆಯರು ಸ್ವಯಂ ಉದ್ಯೋಗ ಸ್ಥಾಪಿಸಲು ಈ ಯೋಜನೆಯ ಮೂಲಕ ಪಡೆಯಬಹುದಾಗಿದೆ. ಹಾಗಾದರೆ ಆ ಯೋಜನೆ ಯಾವುದೆಂದು ನೋಡುವುದಾದರೆ.

15 lakh loan for own employment half of the money will be paid by the government
15 lakh loan for own employment half of the money will be paid by the government

ಪಿಎo ಎಫ್ಎಂಇ ಯೋಜನೆ :

ಶೇಕಡ 50ರಷ್ಟು ಸಬ್ಸಿಡಿಯಲ್ಲಿ ಗರಿಷ್ಠ 15 ಲಕ್ಷದವರೆಗೆ ಪಿಎಂ ಎಫ್ಎಂಇ ಯೋಜನೆಯ ಅಡಿಯಲ್ಲಿ ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯ ರೈತರಿಗೆ ರೈತ ಮಹಿಳೆಯರಿಗೆ ವರದಾನವಾಗಿದ್ದು ಈ ಯೋಜನೆಯ ಪ್ರಯೋಜನವನ್ನು ರಾಜ್ಯದಲ್ಲಿ ಸಾವಿರಾರು ಫಲಾನುಭವಿಗಳು ಪಡೆಯಬಹುದು.
ರಾಜ್ಯ ಸರ್ಕಾರದ ಪಾಲುದಾರಿಕೆಯೊಂದಿಗೆ ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ಆಹಾರ ಸಂಸ್ಕರಣೆ ಕೈಗಾರಿಕೆಗಳ ಮಂತ್ರಾಲಯವು ಹಣಕಾಸಿನ ನೆರವು ತಾಂತ್ರಿಕ ಹಾಗೂ ವ್ಯಾಪಾರ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಪ್ರಧಾನಮಂತ್ರಿಗಳ ಕೇಂದ್ರ ಪ್ರಾಯೋಜಿತ ಯೋಜನೆಗೆ ಚಾಲನೆ ನೀಡಲಾಗಿದೆ.

ಎಷ್ಟು ಸಹಾಯಧನ ಸಿಗಲಿದೆ :

ಈ ಯೋಜನೆಯ ಅಡಿಯಲ್ಲಿ 15 ಲಕ್ಷ ರೂಪಾಯಿಗಳವರೆಗೆ ಕಿರು ಉದ್ದಿಮೆಗಳ ಬೆನ್ನಿಗೆ ನಿಂತು ಕೆಲಸ ಮಾಡುತ್ತಿರುವವರಿಗೆ ಸಾಲ ಸೌಲಭ್ಯವಾಗುತ್ತಿದೆ. ಅರ್ಧಕರ್ಧ ಅಂದರೆ 7.5 ಲಕ್ಷ ರೂಪಾಯಿಗಳವರೆಗೆ ಈ ಯೋಜನೆ ಅಡಿಯಲ್ಲಿ ಸಬ್ಸಿಡಿ ಹಣ ನೀಡಲಾಗುತ್ತಿದ್ದು ಕೇಂದ್ರ ಸರ್ಕಾರವು ಶೇಕಡ 35 ರಷ್ಟು ಹಾಗೂ ರಾಜ್ಯ ಸರ್ಕಾರವು ಶೇಕಡಾ 15 ರಷ್ಟು ಸಬ್ಸಿಡಿ ನೀಡುವ ಮೂಲಕ ಕಿರು ಉದ್ದಿಮೆಗಳನ್ನು ಪ್ರೋತ್ಸಾಹಿಸುತ್ತಿದೆ.

ಇದನ್ನು ಓದಿ : ಕೋವಿಡ್ ಆತಂಕ : ಸಂಪುಟ ಸಚಿವ ಉಪಸಮಿತಿ ಕರ್ನಾಟಕದಲ್ಲಿ ರಚನೆ


ಈ ಉದ್ಯಮಗಳಿಗೆ ಪ್ರೋತ್ಸಾಹ ಧನ :

ಶಾವಿಗೆ ತಯಾರಿಕೆ ಹಪ್ಪಳ ತಯಾರಿಕೆ ಬೇಕರಿ ಪದಾರ್ಥಗಳು ಚಪಾತಿ ತಯಾರಿಕೆ ಸಿರಿಧಾನ್ಯ ಸಂಸ್ಕರಣೆ ಅಡುಗೆ ಎಣ್ಣೆ ತಯಾರಿಕೆ ಖಾರಪುಡಿ ತಯಾರಿಕೆ ಮಸಾಲೆ ಖಾರ ತಯಾರಿಕೆ ಅರಿಶಿಣ ಪುಡಿ ಉದ್ಯಮ ಬೆಲ್ಲಾ ತಯಾರಿಕೆ ಹೀಗೆ ಅನೇಕ ರೀತಿಯ ಉದ್ಯಮಗಳ ಸ್ಥಾಪನೆಗೆ ಸಬ್ಸಿಡಿ ಹಾಗೂ ಸಾಲವನ್ನು ಈ ಯೋಜನೆಯಿಂದ ಸುಲಭವಾಗಿ ಪಡೆಯಬಹುದು. ಈ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು +91 82772 15712 ಈ ಸಂಖ್ಯೆಗೆ ಕರೆ ಮಾಡುವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ.

ರೈತರಿಗೆ ಹಾಗೂ ಮಹಿಳೆಯರಿಗೆ ಈ ಒಂದು ಯೋಜನೆಯ ಅಡಿಯಲ್ಲಿ ಕಿರು ಜನವನ್ನು ಸ್ಥಾಪನೆ ನೀಡಲು ಸುಮಾರು 15 ಲಕ್ಷ ರೂಪಾಯಿಗಳವರೆಗೆ ಸಹಾಯಧನ ಲಭ್ಯವಿದೆ. ಹಾಗಾಗಿ ಈ ಯೋಜನೆಯ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಸ್ವಂತ ಉದ್ಯೋಗವನ್ನು ಮಾಡಲು ಬಯಸುತ್ತಿದ್ದರೆ ಅವರಿಗೆ ಸಹಾಯಧನ ಈ ಯೋಜನೆಯಡಿಯಲ್ಲಿ ಲಭ್ಯವಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...