ನಮಸ್ಕಾರ ಸ್ನೇಹಿತರೆ ಇನ್ನೇನು ನಾವು 2023ರ ಕೊನೆಯ ತಿಂಗಳಿನಲ್ಲಿ ಇದ್ದು 24ರ ಹೊಸ ವರ್ಷಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ. ನಾವು ಸಾಕಷ್ಟು ರಾಶಿ ಭವಿಷ್ಯವನ್ನು ನೋಡುವುದು ಸರ್ವೆ ಸಾಮಾನ್ಯವಾಗಿದೆ. ಅದರಂತೆ 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯವರು ಜನಿಸಿದವರು ತಮ್ಮ ರಾಶಿ ಭವಿಷ್ಯವನ್ನು ಪ್ರತಿ ವರ್ಷ ಪ್ರತಿ ತಿಂಗಳು ಬದಲಾಗುವುದನ್ನು ನೋಡಲು ಅಷ್ಟೇ ಕಾತುರದಿಂದ ಕಾಯುತ್ತಿರುತ್ತಾರೆ ಹಾಗಾದರೆ ಇವತ್ತಿನ ಲೇಖನದಲ್ಲಿ 2024ರ ಜನವರಿ ತಿಂಗಳಿನ ವೃಷಭ ರಾಶಿಯವರ ರಾಶಿ ಭವಿಷ್ಯವನ್ನು ನೋಡುವುದಾದರೆ,
2024ರಲ್ಲಿ ವೃಷಭ ರಾಶಿಯವರ ರಾಶಿ ಭವಿಷ್ಯ :
ವೃಷಭ ರಾಶಿಯವರಿಗೆ 20204ರ ಜನವರಿ ತಿಂಗಳಿನಲ್ಲಿ ರವಿ ಬಲ ಕುಜ ಬಲ ಬರಲಿದ್ದು ರಾಹು ಒಳ್ಳೆಯದನ್ನು ಇವರಿಗೆ ಮಾಡುತ್ತಾನೆ. ಈ ತಿಂಗಳಿನಲ್ಲಿ ವೃಷಭ ರಾಶಿಯವರ ಕೆಲಸ ಕಾರ್ಯಗಳು ವಿಳಂಬವಾಗುತ್ತದೆ ಗರ್ಭಿಣಿ ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಗರ್ಭಿಣಿ ಸ್ತ್ರೀಯರು ಸಂಜೆಯ ಸಮಯದಲ್ಲಿ ಹೊರಗಡೆ ಓಡಾಡುವುದನ್ನು ಮಾಡಬಾರದು ಏಕೆಂದರೆ ಬಾವಲಿಗಳು ಹಾರಾಡುವ ಸಮಯದಲ್ಲಿ ಯಾರು ಕೂಡ ಓಡಾಡಬಾರದು ಬಾವಲಿ ನಕಾರಾತ್ಮಕ ಶಕ್ತಿಯನ್ನು ಹರಡುವುದರಿಂದ ಸಂಜೆಯ ಹೊತ್ತಿನಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಇದನ್ನು ಓದಿ : ರೈತರ ಬಡ್ಡಿ ಮನ್ನ ಮಾತ್ರವಲ್ಲದೆ ಸಾಲವು ಕೂಡ ಮನ್ನ ಆಗಲಿದೆ : ಇಲ್ಲಿದೆ ನೋಡಿ ಲಿಂಕ್
ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಹಿತಿ :
ಜನವರಿ ತಿಂಗಳಿನಲ್ಲಿ ವ್ಯಾಪಾರ ವ್ಯವಹಾರದಲ್ಲಿ ವೃಷಭ ರಾಶಿಯವರಿಗೆ ನಷ್ಟವಾಗಬಹುದು. ಅತಿಯಾಗಿ ಸಿಟ್ಟು ಇವರಿಗೆ ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಮಾತಿನ ಬಗ್ಗೆ ಇವರು ಎಚ್ಚರಿಕೆಯನ್ನು ವಹಿಸಬೇಕು. ಈ ತಿಂಗಳಿನಲ್ಲಿ ವಾತ ಪಿತ್ತಕ್ಕೆ ಸಂಬಂಧಿಸಿದಂತೆ ಡಯಾಬಿಟಿಸ್ ಅಸ್ತಮಾ ಶ್ವಾಸಕೋಶಕ್ಕೆ ಸಂಬಂಧಿಸಿದಂತೆ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವೃಷಭ ರಾಶಿಯವರು ವೈದ್ಯರ ಸಲಹೆಗಳನ್ನು ಪಡೆಯುವುದು ಉತ್ತಮ. ವೃಷಭ ರಾಶಿಯವರು ಪ್ರಕೃತಿಯನ್ನು ಹಾಳು ಮಾಡುವಂತಹ ಯಾವುದೇ ಕೆಲಸವನ್ನು ಮಾಡಬಾರದು ವೃಷಭ ರಾಶಿಯವರು ಮರಗಿಡಗಳನ್ನು ಬೆಳೆಸಬೇಕು ಇದರಿಂದ ದೇವರು ಆಶೀರ್ವಾದ ಮಾಡುತ್ತಾರೆ.
ಒಂದು ಪಾತ್ರೆಯಲ್ಲಿ ಮನೆಯ ಟೆರೇಸ್ ಅಥವಾ ಇನ್ಯಾವುದೇ ಜಾಗದಲ್ಲಿ ನೀರನ್ನು ಹಾಕಿ ಇಟ್ಟರೆ ಪ್ರಾಣಿ ಪಕ್ಷಿಗಳು ನೀರನ್ನು ಕುಡಿಯುತ್ತವೆ. ನಕ್ಷತ್ರದಲ್ಲಿ ಹುಟ್ಟಿದವರು ಶಂಕರಾಚಾರ್ಯರು ಬರೆದ ದಶಾವತಾರ ಸ್ತೋತ್ರವನ್ನು ಕೃತಿಕ ನಕ್ಷತ್ರದಲ್ಲಿ ಹುಟ್ಟಿದರೆ ಧನಲಕ್ಷ್ಮಿ ಸ್ತೋತ್ರವನ್ನು ಪಠಿಸಬೇಕಾಗುತ್ತದೆ. ಅದೇ ರೀತಿ ಶ್ರೀನಿವಾಸ ಮಂಗಳ ಸ್ತೋತ್ರವನ್ನು ಮೃಗಶಿರ ನಕ್ಷತ್ರದಲ್ಲಿ ಜನಿಸಿದವರು ಪಠಿಸಬೇಕು ಇದರಿಂದ ಒಳ್ಳೆಯದಾಗುತ್ತದೆ.
ಹೀಗೆ ವೃಷಭ ರಾಶಿಯವರು 2024ರ ಜನವರಿಯಲ್ಲಿ ತಮ್ಮ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ವೃಷಭ ರಾಶಿಯವರ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಪಿಎಂ ವಿಶ್ವಕರ್ಮ ಯೋಜನೆಯಲ್ಲಿ15 ಸಾವಿರ ಉಚಿತ ಹಾಗು 3 ಲಕ್ಷ ಸಾಲ ಸೌಲಭ್ಯ
- 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರು ತಕ್ಷಣವೇ ಈ ಕೆಲಸ ಮಾಡಬೇಕು