ನಮಸ್ಕಾರ ಸ್ನೇಹಿತರೇ ಕಡೆಗೂ ರಾಜ್ಯ ಸರ್ಕಾರವು ಮೊದಲ ಕಾಂತಿನ ಬರ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲು ಅಧಿಕೃತ ತಯಾರಿಯನ್ನು ನಡೆಸುತ್ತಿದೆ. ಬರ ಪರಿಹಾರದ ಹಣವು ದುರ್ಬಳಕೆ ಆಗುವುದನ್ನು ತಡೆಯುವ ಉದ್ದೇಶದಿಂದ ಫ್ರೂಟ್ಸ್ ತಂತ್ರಾಂಶದ ಮೂಲಕ ಈ ವರ್ಷ ಪರಿಹಾರದ ಹಣವನ್ನು ನೇರವಾಗಿ ರೈತರಿಗೆ ತಲುಪಿಸಲು ಸರ್ಕಾರ ನಿರ್ಧರಿಸಿದೆ.
ಫ್ರೂಟ್ ತಂತ್ರಾಂಶ ಅಭಿವೃದ್ದಿ :
ಬರ ಪರಿಹಾರದ ಹಣವು ದುರ್ಬಳಕೆ ಆಗಬಾರದು ಎನ್ನುವ ಉದ್ದೇಶದಿಂದ ನೇರವಾಗಿ ರೈತರಿಗೆ ಹಣ ತಲುಪಬೇಕು ಎನ್ನುವ ಉದ್ದೇಶದಿಂದ ಫ್ರೂಟ್ಸ್ ತಂತ್ರಾಂಶದ ಮೂಲಕ ಹಣವನ್ನು ತಲುಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ರಾಯಚೂರಿನಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನ ಸಭೆಯನ್ನು ಜನವರಿ 16ರಂದು ನಡೆಸಿ ಮಾತನಾಡಿದ ಸಚಿವರು ಬರ ಪರಿಹಾರದ ಹಣ ವಿತರಣೆ ಮಾಡುವ ಸಂದರ್ಭದಲ್ಲಿ ಆದಂತಹ ವಿಳಂಬಕ್ಕೆ ಕಾರಣವನ್ನು ವಿವರಿಸಿದ್ದಾರೆ.
ಈ ಹಿಂದೆ ಬಿಡುಗಡೆ ಮಾಡಿದಂತಹ ಬರ ಪರಿಹಾರದ ಹಣವನ್ನು ಅಧಿಕಾರಿಗಳ ಮೂಲಕ ರೈತರಿಗೆ ತಲುಪಿಸಲಾಗುತ್ತಿತ್ತು ಆದರೆ ಇದರಿಂದ ಸಾಕಷ್ಟು ಹಣ ದುರ್ಬಳಕೆಯಾಗಿ ನಿಜವಾದ ರೈತರಿಗೆ ಪರಿಹಾರದ ಹಣ ಸಿಗದೇ ಅನ್ಯಾಯವಾಗುತ್ತಿತ್ತು. ಈ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರವು ಫ್ರೂಟ್ಸ್ ಕಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದರು.
ಇದನ್ನು ಓದಿ : ಇಶಾನಿ ಫಾಲೋವರ್ಸ್ ಗಿಂತ ಪ್ರತಾಪ್ ಫ್ಯಾನ್ಸ್ ಕಾಮೆಂಟ್ಗಳು ಹೆಚ್ಚಾಗಿದೆ ನೋಡಿ
25 ಲಕ್ಷ ಪರಿಹಾರದ ಹಣ :
ರಾಜ್ಯದ್ಯಂತ ಈಗ ರೈತರ ಒಟ್ಟು ಜಮೀನಿನ ವಿಸ್ತೀರ್ಣ ಹಾಗೂ ಬೆಳೆ ಹಾನಿ ಕುರಿತ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದ್ದು ಮೊದಲ ಕಂತಿನ ಪರಿಹಾರವನ್ನು ಯಾವುದೇ ತಾಂತ್ರಿಕ ದೋಷವಿಲ್ಲದೆ ರೈತರಿಗೆ ನೇರವಾಗಿ ತಲುಪಿಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ.
ಇನ್ನು ರಾಜ್ಯದ 25 ಲಕ್ಷ ರೈತರು ಒಂದು ವಾರದ ಒಳಗಾಗಿ ಪರಿಹಾರದ ಹಣವನ್ನು ಪಡೆಯಲಿದ್ದಾರೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು. ಶೇಕಡ 44 ರಷ್ಟು ಮಾತ್ರ ರಾಜ್ಯದಲ್ಲಿ ಸಣ್ಣ ರೈತರಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶದ ಪ್ರಕಾರ ತಿಳಿಸಲಾಗಿದೆ ಆದರೆ ನಿಜವಾಗಿಯೂ ರಾಜ್ಯದಲ್ಲಿ ಶೇಕಡ 77 ರಷ್ಟು ಸಣ್ಣ ರೈತರ ಸಂಖ್ಯೆ ಇದೆ ಎಂದು ಹೇಳಲಾಗಿದೆ .
ಇದರಿಂದಾಗಿ ರಾಜ್ಯಕ್ಕೆ ಕನಿಷ್ಠ ಮೊತ್ತದ ಬರ ಪರಿಹಾರ ಕೇಂದ್ರದ ಮಾನದಂಡದ ಪ್ರಕಾರ ಸಿಗುತ್ತಿದೆ ಹೀಗಾಗಿ ರೈತರ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿದಾಗ ಅವರ ಆರ್ ಟಿ ಸಿ ಜೊತೆಗೆ ಆಧಾರ್ ಲಿಂಕ್ ಮಾಡುವುದು ಮುಖ್ಯವಾಗುತ್ತದೆ ಇದರಿಂದ ರಾಜ್ಯದ ರೈತರ ನಿಖರವಾದ ಅಂಕಿ ಅಂಶದ ಜೊತೆಗೆ ನ್ಯಾಯಯುತವಾಗಿ ನಿಜವಾದ ರೈತರಿಗೆ ಪರಿಹಾರದ ಹಣವನ್ನು ತಲುಪಿಸಬಹುದೆಂದು ಕಂದಾಯ ಸಚಿವರು ತಿಳಿಸಿದರು.
ಒಟ್ಟಾರಿಯಾಗಿ ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ರಾಜ್ಯದ ರೈತರಿಗೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು ಸುಮಾರು 25 ಲಕ್ಷ ರೈತರು ಈ ಹಣವನ್ನು ಪಡೆಯಲಿದ್ದಾರೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲ ರೈತರಿಗೆ ಶೇರ್ ಮಾಡುವ ಮೂಲಕ ಇನ್ನೇನು ಶೀಘ್ರದಲ್ಲಿಯೇ ಪರಿಹಾರದ ಹಣವನ್ನು 25 ಲಕ್ಷ ಪಡೆಯಲಿದ್ದಾರೆ ಎಂಬುದನ್ನು ತಿಳಿಸಿ, ಧನ್ಯವಾದಗಳು.
ಇತರೆ ವಿಷಯಗಳು :
- ಚಿನ್ನದ ಬೆಲೆ ಭಾರಿ ಇಳಿಕೆ : ಇದೆ ಬೆಸ್ಟ್ ಟೈಮ್ ಖರೀದಿಸಲು ಬೆಲೆಯ ಮಾಹಿತಿ ನೋಡಿ.!!
- Breaking News : ಎಲ್ಲಾ ರೈತರ ಸಾಲ ಒಂದೇ ಬಾರಿಗೆ ಮನ್ನಾ! ಹೆಚ್ಚಿನ ಮಾಹಿತಿ ಇಲ್ಲಿದೆ