ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರವು 25 ಲಕ್ಷವನ್ನು ಸಹಾಯಧನ ಮತ್ತು ಸಾಲ ಸೌಲಭ್ಯ ವನ್ನೂ ಕೃಷಿ ಭೂಮಿ ಖರೀದಿ ಮಾಡಲು ನೀಡುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಪ್ರಯೋಜನವನ್ನು ಪಡೆಯಬೇಕಾದರೆ ಏನೆಲ್ಲ ದಾಖಲೆಗಳು ಹೊಂದಿರಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಸಲಾಗುತ್ತಿದೆ.
ಕೃಷಿ ಭೂಮಿ ಖರೀದಿಸಲು ಇಪ್ಪತೈದು ಲಕ್ಷ :
ಒಂದು ವೇಳೆ ಕೃಷಿ ಭೂಮಿಯನ್ನು ಖರೀದಿಸಲು ಇಷ್ಟಪಡುತ್ತಿದ್ದರೆ ಈ ಒಂದು ಯೋಜನೆ ನಿಮಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಹೌದು ಭೂಮಿಯನ್ನು ಖರೀದಿಸಲು 25 ಲಕ್ಷಗಳನ್ನು ಕರ್ನಾಟಕ ಸರ್ಕಾರದ ವತಿಯಿಂದ ಸಬ್ಸಿಡಿ ಮತ್ತು ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ.
ಯಾರು ನೀವು ಜೋಗದಲ್ಲಿ ಮಹಿಳಾ ಕೃಷಿ ಕಾರ್ಮಿಕರು ಮತ್ತು ರೈತರು ಇರುವುದು ಬೇಡ ಎಂಬ ಅರ್ಥದಿಂದ ಅದರ ಬದಲಾಗಿ ಸ್ವಂತ ಉದ್ಯೋಗವನ್ನು ಕೃಷಿ ಭೂಮಿ ಖರೀದಿ ಮಾಡಿ ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ತಮ್ಮ ವಾಸ ಸ್ಥಳದಿಂದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ 10 ಕಿಲೋಮೀಟರ್ ವ್ಯಾಪ್ತಿಯೊಳಗೆ 2 ಎಕರೆ ಯೋಗ್ಯವಾದ ಕುಷ್ಕ ಅಥವಾ ಒಂದು ಎಕರೆ ತರಿ ಜಮೀನು ಖರೀದಿ ಮಾಡಲು ರಾಜ್ಯ ಸರ್ಕಾರವು ಸಹಾಯಧನ ಮತ್ತು ಸಾಲ ಸೌಲಭ್ಯವನ್ನು ನೀಡುತ್ತಿದೆ.
ಭೂ ಒಡೆತನ ಯೋಜನೆ :
25 ಲಕ್ಷ ರೂಪಾಯಿಗಳನ್ನು ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಾಗೂ 20 ಲಕ್ಷ ರೂಪಾಯಿಗಳನ್ನು ಇನ್ನುಳಿದ ಜಿಲ್ಲೆಗಳಿಗೆ ನೀಡಲಾಗುತ್ತದೆ. ಇದರಲ್ಲಿ ಶೇಕಡ 50ರಷ್ಟು ಸಹಾಯಧನ ಹಾಗೂ ಶೇಕಡ 50ರಷ್ಟು ಸಾಲವನ್ನು ನೀಡಲಾಗುತ್ತದೆ.
ಇದನ್ನು ಓದಿ : Amazon ವತಿಯಿಂದ ವಿದ್ಯಾರ್ಥಿ ವೇತನ : ಸುಮಾರು 50 ಸಾವಿರ ರೂಪಾಯಿ ಸಿಗುತ್ತೆ
ಭೂ ಒಡೆತನ ಯೋಜನೆಗೆ ಅಗತ್ಯವಿರುವ ದಾಖಲೆಗಳು :
ಭೂಮಿಯನ್ನು ಖರೀದಿ ಮಾಡಲು ಕೆಲವೊಂದು ಮುಖ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಪಾಸ್ಪೋರ್ಟ್ ಸೈಜ್ ಫೋಟೋ ಜಾತಿ ಪ್ರಮಾಣ ಪತ್ರ ಆಧಾರ್ ಕಾರ್ಡ್ ಕೃಷಿ ಕಾರ್ಮಿಕರ ದೃಢೀಕರಣ ಪತ್ರ ಆದಾಯ ಪ್ರಮಾಣ ಪತ್ರ ಹೀಗೆ ಕೆಲವೊಂದು ದಾಖಲೆಗಳನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ :
ಭೂ ಒಡೆತನ ಯೋಜನೆ ಅಡಿಯಲ್ಲಿ ಭೂಮಿಯನ್ನು ಖರೀದಿ ಮಾಡಲು ಸಹಾಯಧನವನ್ನು ರಾಜ್ಯ ಸರ್ಕಾರದಿಂದ ಪಡೆದುಕೊಳ್ಳಬೇಕಾದರೆ ಭೂ ಒಡೆತನ ಯೋಜನೆಗೆ ಆನ್ಲೈನ್ ಮೂಲಕ 15-12-2023 ಈ ದಿನಾಂಕ ದೊಳಗಾಗಿ https://sevasindhu.karnataka.gov.in ಈ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಯನ್ನು ಸಲ್ಲಿಸಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಭೂ ರಹಿತ ಕಾರ್ಮಿಕರಿಗೆ ಹಾಗೂ ಮಹಿಳಾ ರೈತರಿಗೆ ಭೂಮಿಯನ್ನು ಖರೀದಿ ಮಾಡಲು ಸುಮಾರು 25 ಲಕ್ಷ ರೂಪಾಯಿಗಳ ವರೆಗೆ ಸಹಾಯಧನವನ್ನು ನೀಡಲು ನಿರ್ಧರಿಸಿದೆ. ಹಾಗಾಗಿ ರಾಜ್ಯ ಸರ್ಕಾರದ ಈ ಭೂ ಒಡೆತನ ಯೋಜನೆಯ ಬಗ್ಗೆ ಮಾಹಿತಿಯನ್ನು ಕರ್ನಾಟಕದಲ್ಲಿರುವ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರ ಕೃಷಿ ಸಾಲ ಮನ್ನಾ ಆಗುತ್ತಿದೆ : ಈ 2 ಜಿಲ್ಲೆಯ ರೈತರಿಗೆ ಮಾತ್ರ ಸಿಹಿ ಸುದ್ದಿ
- ಕೋವಿಡ್ ಆತಂಕ : ಸಂಪುಟ ಸಚಿವ ಉಪಸಮಿತಿ ಕರ್ನಾಟಕದಲ್ಲಿ ರಚನೆ