ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ವ್ಯಕ್ತಿಯೂ ಕೂಡ ಸ್ವಂತವಾದ ಮನೆಯನ್ನು ಕಟ್ಟಬೇಕೆಂದು ಕನಸನ್ನು ಹೊಂದಿರುತ್ತಾನೆ. ಆದರೆ ಇತ್ತೀಚಿನ ಬೆಲೆ ಏರಿಕೆಯಿಂದಾಗಿ ಮನೆ ಕಟ್ಟಲು ಬೇಕಾಗಿರುವ ವಸ್ತುಗಳಿಗೂ ಬಹಳಷ್ಟು ಬೆಲೆ ಏರಿಕೆ ಆಗಿರುವುದನ್ನು ನೋಡಬಹುದು. ಹೀಗಾಗಿ ಸ್ವಂತ ಮನೆ ಕಟ್ಟುವುದು ಬಡವರ್ಗದ ಜನತೆಗೆ ಬಹಳ ಕಷ್ಟವಾಗಿದೆ ಈಗಾಗಲೇ ಪ್ರಧಾನಮಂತ್ರಿ ಆವಾಸ್ ಯೋಜನೆ ಬಡವರ್ಗದ ಜನತೆಗೆ ಆರಂಭವಾಗಿದ್ದು ಇದರ ಸದುಪಯೋಗವನ್ನು ಹೆಚ್ಚು ಜನರು ಪಡೆದುಕೊಂಡಿದ್ದಾರೆ. ಗೃಹ ನಿರ್ಮಾಣ ಮಾಡುವ ಕನಸು ನನಸನ್ನು ಈ ಯೋಜನೆಯ ಮೂಲಕ ಮಾಡಬಹುದಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ :
ಎಲ್ಲ ಬಡವರಿಗೆ 2020ರ ಸಂದರ್ಭದಲ್ಲಿ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ದೇಶದ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಈ ಯೋಜನೆಯ ಅನ್ವಯವಾಗಿದ್ದು ಸದುಪಯೋಗವನ್ನು ಈ ಯೋಜನೆಯಿಂದ ಪಡೆಯಬಹುದಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯ ಸಹಾಯಧನ :
3.5 ಲಕ್ಷ ಮೊತ್ತವನ್ನು ಸ್ವಂತ ಮನೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ ಅದೇ ರೀತಿ 3 ಲಕ್ಷ ರೂಪಾಯಿಗಳನ್ನು ರಾಜ್ಯ ಸರ್ಕಾರದಿಂದ ಈ ಯೋಜನೆಗೆ ನೀಡಲಾಗುತ್ತಿದ್ದು ಬಡವರ್ಗದ ಜನತೆಗೆ ಇದು ಸಾಕಷ್ಟು ಸಹಾಯವಾಗಲಿದೆ. ಅದೇ ರೀತಿ ಶೇಕಡ 6.50 ಬಡ್ಡಿ ದರದಲ್ಲಿ ಈ ಯೋಜನೆ ಮೂಲಕ ವಾರ್ಷಿಕ 2.67 ಲಕ್ಷದವರೆಗೆ ಸಾಲವನ್ನು ಒದಗಿಸಲಾಗುತ್ತದೆ. ಆದಾಯ ವರ್ಗದ ಆಧಾರದ ಮೇಲೆ ನಿರ್ದಿಷ್ಟತೆಯನ್ನು ಅವರಿಗೆ ನಿರ್ಧರಿಸಲಾಗುತ್ತದೆ.
ಇದನ್ನು ಓದಿ : ಮಕ್ಕಳಿಗೆ ತಾಯಿಯ ತವರು ಮನೆಯಿಂದ ಆಸ್ತಿ ಸಿಗುತ್ತದೆಯಾ ? ಕಾನೂನು ಏನು ಹೇಳುತ್ತದೆ ?
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು :
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://ashraya.karnataka.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ಆವಾಸ್ ಯೋಜನೆಯ ಅರ್ಜಿಗೆ ಮಹಿಳೆಯರು ಮಾತ್ರ ಅರ್ಹರಾಗಿದ್ದು 2011ರ ಆರ್ಥಿಕ ಮತ್ತು ಸಾಮಾಜಿಕ ಜನಗಣತಿ ಸರ್ಕಾರದ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರತಿಯೊಬ್ಬರು ಸ್ವಂತ ಮನೆಯನ್ನು ಹೊಂದುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಗ್ರಾಮೀಣ ಹಾಗೂ ನಗರದ ವಾಸಿಗಳು ಪಡೆಯಬಹುದು. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರಿಗೆ ಪ್ರದಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸಹಾಯಧನ ಲಭ್ಯವಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ನಿಮ್ಮ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಇಲ್ವಾ….? ಚಿಂತಿಸಬೇಡಿ ಕೇವಲ 10 ನಿಮಿಷದಲ್ಲಿ ಸಿಗುತ್ತೆ
- ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಲು ಗಡುಗು ವಿಸ್ತರಣೆ : ಕೊನೆ ದಿನಾಂಕ ಯಾವಾಗ .?