ನಮಸ್ಕಾರ ಸ್ನೇಹಿತರೆ ರಾಷ್ಟ್ರಧ ಜನತೆಗಾಗಿ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಿವೆ. ಅದರಲ್ಲಿ ಮುಖ್ಯವಾಗಿ ಹಿರಿಯ ನಾಗರಿಕರಿಗಾಗಿ ಹಾಗೂ ಹೆಣ್ಣು ಮಕ್ಕಳಿಗಾಗಿಯೇ ವಿಶೇಷವಾಗಿ ಕೆಲವು ಯೋಜನೆಗಳನ್ನು ಏರ್ಪಡಿಸಲಾಗಿದ್ದು ಅದನ್ನು ಅವುಗಳಿಗೆ ಹೊರತುಪಡಿಸಿ ಎಲ್ಲರಿಗೂ ಅನ್ವಯವಾಗುವಂತಹ ಯೋಜನೆಗಳನ್ನು ಸಹ ಕೇಂದ್ರ ಸರ್ಕಾರವು ಜಾರಿಗೆ ತರುತ್ತದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಬೆಸ್ಟ್ ಸ್ಕೀಮ್ ಗಳಲ್ಲಿ ಒಂದಾಗಿರುವ ಯೋಜನೆಯನ್ನು ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ರಾಷ್ಟ್ರೀಯ ಪಿಂಚಣಿ ಯೋಜನೆ :
ಕೇಂದ್ರ ಸರ್ಕಾರವು ಇದೇ ನಾಗರಿಕರಿಗಾಗಿಯೇ ಪಿಂಚಣಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅದರಲ್ಲಿ ಮುಖ್ಯವಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯ ಕೂಡ ಒಂದಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನೀವು 80 ಸಿಸಿ ವಿನಾಯಿತಿಗಿಂತ ಆದಾಯ ತೆರಿಗೆ ಮಿತಿಯಲ್ಲಿ ಹೆಚ್ಚಿನ ಅನುಕೂಲತೆಯನ್ನು ಪಡೆದುಕೊಳ್ಳಬಹುದು. ಎಷ್ಟೇ ಯೋಜನೆಗಳಲ್ಲಿ ಹೂಡಿಕೆ ಮಾಡಿದರು ಸಹ 80 ಸಿಸಿ ಆದಾಯ ತೆರಿಗೆ ನೀತಿ ಅಡಿಯಲ್ಲಿ ಒಂದುವರೆ ಲಕ್ಷದವರೆಗೆ ಮಾತ್ರ ವಿನಾಯಿತಿಯನ್ನು ಪಡೆಯುತ್ತೇವೆ ಆದರೆ ಹೆಚ್ಚುವರಿಯಾಗಿ 50,000 ವಿನಾಯಿತಿಯು ರಾಷ್ಟ್ರೀಯ ಪಿಂಚಣಿ ಯೋಜನೆಯ ಮೂಲಕ ಸಾಧ್ಯವಾಗುತ್ತದೆ.
ಒಂದುವರೆ ಲಕ್ಷದ ಮಿತಿಯನ್ನು ಸೆಕ್ಷನ್ 80 ಸಿಸಿ ಅಡಿಯಲ್ಲಿ ಈಗಾಗಲೇ ಮೀರಿದವರು ಸಹ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೆಚ್ಚುವರಿಯಾಗಿ 50 ಸಾವಿರದವರೆಗೆ ಹಣವನ್ನು ಉಳಿಸಬಹುದಾಗಿತ್ತು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿಸಿಡಿ ಅಡಿಯಲ್ಲಿ ಈ ಹೆಚ್ಚುವರಿ ತೆರಿಗೆ ವಿನಾಯಿತಿಯು ಸಾಧ್ಯವಿದೆ.
ಇದನ್ನು ಓದಿ : ರೈತನಿಗೆ ಭರ್ಜರಿ ಗಿಫ್ಟ್ : ಸರ್ಕಾರದಿಂದ ಸಬ್ಸಿಡಿ ಎಲ್ಲ ರೈತರಿಗೂ ದೊರೆಯುತ್ತೆ
ರಾಷ್ಟ್ರೀಯ ಪಿಂಚಣಿ ಯೋಜನೆಯ ಪ್ರಯೋಜನಗಳು :
ಗ್ರಾಹಕನು ಠೇವಣಿ ಮಾಡಿದ ಕೆಲಮುತ್ತದ ಹಣವನ್ನು ಈಕ್ವಿಟಿ ಮತ್ತು ಸಾಲ ನಿಧಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೋಗುತ್ತದೆ. ಸಾಲಕ್ಕೆ ಎಷ್ಟು ಪರ್ಸೆಂಟ್ ಮತ್ತು ಇಕ್ವಿಟಿ ಹಣ ಹೋಗಬೇಕೆಂಬುದು ಗ್ರಾಹಕನೇ ನಿರ್ಧಾರ ಮಾಡುವುದರಿಂದ ಸ್ಟ್ಯಾಂಡರ್ಡ್ ಆಪ್ಶನ್ 75 : 25 ,50:50 , 40:60 ಆಯ್ಕೆಗಳಲ್ಲಿ ಇರುತ್ತದೆ. ಗ್ರಾಹಕರ ಇಚ್ಛೆಯ ಹಾಗೂ ಅಪಾಯದ ಪ್ರೊಫೈಲ್ ಗೆ ಅನುಗುಣವಾಗಿ ಇದನ್ನು ಆಯ್ಕೆ ಮಾಡಬಹುದಾಗಿತ್ತು ಆಯ್ಕೆ ಮಾಡಿದ ಆಪ್ಷನ್ಗೆ ಆಧಾರದ ಮೇಲೆ ಅನ್ವಯವಾಗುವುದರಿಂದ ಅವಲಂಬಿಸಿ ಲಾಭ ನಿರ್ಧಾರವಾಗುತ್ತದೆ ಮತ್ತು ನಿಮ್ಮ ಆದಾಯವು ಸಹ ಅದರ ಮೂಲಕ ಬದಲಾಗುತ್ತದೆ. ದೀರ್ಘಾವಧಿಯ ಉಳಿತಾಯವು ಈ ಯೋಜನೆಯಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ ಮತ್ತು ಈ ದೀರ್ಘಾವಧಿಯ ಉಳಿತಾಯವು ನಮ್ಮ ದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.
ಪ್ರತಿ ತಿಂಗಳು ಐವತ್ತು ಸಾವಿರದಿಂದ ಒಂದು ಲಕ್ಷ :
ರಾಷ್ಟ್ರೀಯ ಪಿಂಚಣಿ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಅವರಿಗೆ ಅರವತ್ತು ವರ್ಷದವರೆಗೆ ಪ್ರತಿ ತಿಂಗಳು ನಾಲ್ಕು ಸಾವಿರದಂತೆ ಹಣ ಬರುತ್ತದೆ ಹಾಗೂ 40 ಲಕ್ಷಗಳನ್ನು ಹಿಂತೆಗೆದುಕೊಳ್ಳಬಹುದು ಜೊತೆಗೆ ಎಂಟು ಪರ್ಸೆಂಟ್ ಬಡ್ಡಿ ದರದಲ್ಲಿ 75 ಲಕ್ಷ ಗಳನ್ನು ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 50,000 ಗಳವರೆಗೆ ಪಿಂಚಣಿ ಸಿಗುತ್ತದೆ. ನೀವೇನಾದರೂ ಈ ಯೋಜನೆಯಲ್ಲಿ ಹಣವನ್ನು ಹಿಂಪಡೆಯದೆ ಸಂಪೂರ್ಣವಾಗಿ ಹೂಡಿಕೆ ಮಾಡುತ್ತಿದ್ದರೆ ನಿಮಗೆ 77,000 ವರೆಗೂ ಪ್ರತಿ ತಿಂಗಳು ಪಿಂಚಣಿ ಸಿಗುತ್ತದೆ.
ಹೀಗೆ ರಾಷ್ಟ್ರೀಯ ಪಿಂಚಣಿ ಯೋಜನೆಯ ವೃದ್ಯಾಪ್ಯದಲ್ಲಿ ಪಿಂಚಣಿ ಪಡೆಯಲು ಬಯಸುವಂಥವರಿಗೆ ಈ ಯೋಜನೆ ಹೆಚ್ಚು ಸೂಕ್ತವಾಗಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ಪಿಂಚಣಿ ಯೋಜನೆಯು ಯಾವುದು ಉತ್ತಮವಾಗಿದೆ ಎಂದು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಯೋಚಿಸುತ್ತಿದ್ದರೆ ಅವರಿಗೆ ಈ ಪಿಂಚಣಿ ಯೋಜನೆಯ ಬಗ್ಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ರೇಷನ್ ಕಾರ್ಡ್ ಇಲ್ಲದಿದ್ದರೂ ಜನರಿಗೆ ಉಚಿತ ರೇಷನ್ : ಲೋಕಸಭೆ ಚುನಾವಣೆ ಪ್ರಭಾವ
ಭೂಮಿ ಖರೀದಿಸಲು ಸರ್ಕಾರ ನೀಡುತ್ತಿದೆ 25 ಲಕ್ಷ ರೂ; ಅರ್ಜಿ ಫಾರಂ ಇಲ್ಲಿದೆ