News

ಪ್ರತಿ ತಿಂಗಳು 5000 ಪಿಂಚಣಿಯನ್ನು ಕೇವಲ 7 ರೂಪಾಯಿ ಹೂಡಿಕೆ ಪಡೆದುಕೊಳ್ಳಿ

5000 pension every month at just 7 rupees

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯೂ ಸಹ ತಾನೇ ದುಡಿದಂತಹ ಹಣವನ್ನು ತನ್ನ ಸಂಸಾರಕ್ಕಾಗಿ ಹಾಗೂ ತಮ್ಮ ಜೀವನಕ್ಕಾಗಿ ಹೂಡಿಕೆ ಮಾಡಲು ಬಯಸುತ್ತಾನೆ. ಅಲ್ಲದೆ ಸದಾ ಕಾಲ ತನ್ನ ಸಂಸಾರ ನೆಮ್ಮದಿಯಿಂದ ಇರಬೇಕೆನ್ನುವ ಉದ್ದೇಶದಿಂದ ಹಗಲು ರಾತ್ರಿ ಕಷ್ಟಪಡುತ್ತಾನೆ ಹೀಗೆ ದುಡಿದಂತಹ ಹಣದಲ್ಲಿ ಉಳಿತಾಯ ಮಾಡಬೇಕೆಂದು ಯೋಚಿಸುತ್ತಾನೆ.

ಉತ್ತಮ ಜಾಗದಲ್ಲಿ ಉಳಿತಾಯ ಮಾಡಿದಂತಹ ಹಣವನ್ನು ಹೂಡಿಕೆ ಮಾಡಿದರೆ ಆತ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ತಕ್ಕ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಅದರಂತೆ ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಕಷ್ಟು ಯೋಜನೆಗಳನ್ನು ನೋಡಬಹುದಾಗಿದ್ದು ಅದರಲ್ಲಿಯೂ ಮುಖ್ಯವಾಗಿ ಇವತ್ತಿನ ಲೇಖನದಲ್ಲಿ ನಿಮಗೆ ಹೂಡಿಕೆಗೆ ಸಂಬಂಧಿಸಿದಂತೆ ಸರ್ಕಾರದ ಯೋಜನೆಯಾದ ಅಟಲ್ ಪಿಂಚಣಿ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದೆ.

5000 pension every month at just 7 rupees
5000 pension every month at just 7 rupees

ಅಟಲ್ ಪಿಂಚಣಿ ಯೋಜನೆ :

ನಿವೃತ್ತಿಯ ನಂತರ ನಾವು ಜೀವನವನ್ನು ಸುಖಮಯವಾಗಿ ಕಳೆಯಲು ಮೊದಲೇ ಹೂಡಿಕೆಯನ್ನು ಆರಂಭಿಸಿದರೆ ಮಾತ್ರ ಸಾಧ್ಯವಾಗುತ್ತದೆ. ಅಲ್ಲದೆ ಹೂಡಿಕೆ ಮಾಡುವುದರಿಂದ ನಿವೃತ್ತಿಯ ನಂತರವೂ ಸ್ವಾಭಿಮಾನಿಯಾಗಿ ಬದುಕಬಹುದಾಗಿದೆ. ಹಾಗಾಗಿ ನಾವೆಲ್ಲಾ ಸಣ್ಣ ವಯಸ್ಸಿನಿಂದಲೇ ಹೂಡಿಕೆ ಮಾಡುವುದು. ಹೀಗೆ ನಾವು ಹೂಡಿಕೆ ಮಾಡಲು ಸರ್ಕಾರಿ ಯೋಜನೆಗಳನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ನಮ್ಮ ಹಣ ಸುರಕ್ಷಿತವಾಗಿರುತ್ತದೆ. ಅದರಂತೆ ದಿನವೊಂದಕ್ಕೆ ರೂ.7 ಗಳನ್ನು ಅಟಲ್ ಪಿಂಚಣಿ ಯೋಜನೆಯಲ್ಲಿ ನಾವು ಹೂಡಿಕೆ ಮಾಡಿದರೆ ಸುಮಾರು 5000ಗಳನ್ನು ನಿವೃತ್ತಿಯ ನಂತರ ಪ್ರತಿ ತಿಂಗಳು ಪಡೆದುಕೊಳ್ಳಬಹುದಾಗಿದೆ.

ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ವಿಧಾನ :

18 ರಿಂದ 40 ವರ್ಷದೊಳಗಿನ ತೆರಿಗೆ ಪಾವತಿದಾರರಲ್ಲದ ಎಲ್ಲರೂ ಕೂಡ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಕೇಂದ್ರ ಸರ್ಕಾರವು ಅವಕಾಶ ಕಲ್ಪಿಸಿದೆ. ಈ ಯೋಜನೆಯಲ್ಲಿ ಪ್ರತಿದಿನ ನಾವು ಏಳು ರುಪಾಯಿಗಳನ್ನು ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಿವೃತ್ತಿಯ ನಂತರ ಪಡೆಯಬಹುದಾಗಿದೆ. ನಾವೇನಾದರೂ ಈ ಯೋಜನೆಯಲ್ಲಿ 18ನೇ ವಯಸ್ಸಿನಿಂದ ಹೂಡಿಕೆಯನ್ನು ಮಾಡಲು ಪ್ರಾರಂಭಿಸಿದರೆ 5000ಗಳನ್ನು ಅರವತ್ತನೆ ವಯಸ್ಸಿನಲ್ಲಿ ಪಡೆದುಕೊಳ್ಳಬಹುದಾಗಿದೆ ಇದಕ್ಕಾಗಿ 210ಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡಬೇಕು.


ಇದನ್ನು ಓದಿ : ಸರ್ಕಾರದ ಭೂಮಿ ಒತ್ತುವರಿ ಮಾಡಿದವರಿಗೆ ಕಠಿಣ ಕ್ರಮ ಜಾರಿ : ಕೂಡಲೇ ಈ ಕೆಲಸ ಮಾಡಿ

ಎಷ್ಟು ವಯಸ್ಸಿನವರು ಎಷ್ಟು ಹೂಡಿಕೆ ಮಾಡಬೇಕು :

ಅಟಲ್ ಪಿಂಚಣಿ ಯೋಜನೆಯಲ್ಲಿ 18 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಸುಮಾರು 210ಗಳನ್ನು ತಿಂಗಳಿಗೆ ಹೂಡಿಕೆ ಮಾಡಬೇಕು. ಅದೇ ರೀತಿ 19ನೇ ವಯಸ್ಸಿನಲ್ಲಿ ನಾವೇನಾದರೂ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಪ್ರತಿ ತಿಂಗಳು 228 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. 21 ವರ್ಷದವರು 269 ರೂಪಾಯಿಗಳನ್ನು, 20 ವರ್ಷದವರು 248 ರೂಪಾಯಿಗಳನ್ನು, 22 ವರ್ಷದವರು 292 ರೂಪಾಯಿಗಳು, 24 ವರ್ಷದವರು 318, 40ವರ್ಷದವರು 1454 ರೂಪಾಯಿಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡಬೇಕು. ಹೀಗೆ ನೀವು ಯಾವ ವರ್ಷದಿಂದ ಹೂಡಿಕೆ ಮಾಡಲು ಪ್ರಾರಂಭಿಸುತ್ತಿರೋ ಆ ತಿಂಗಳು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

ಹೀಗೆ ಉಳಿತಾಯ ಮಾಡಲು ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ನಿವೃತ್ತಿಯ ನಂತರ ಸುಮಾರು 5,000ಗಳನ್ನು ಪ್ರತಿ ತಿಂಗಳು ಪಡೆಯಬಹುದು. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ತಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡಲು ಬಯಸುತ್ತಿದ್ದರೆ ಅವರಿಗೆ ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...