ನಮಸ್ಕಾರ ಸ್ನೇಹಿತರೆ ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಅತಿ ದೊಡ್ಡ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ. ಕುಟುಂಬದ ಯಜಮಾನಿ ಆಗಿರುವ ಮಹಿಳೆಯರಿಗೆ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳ ಆರ್ಥಿಕ ನೆರವು ಕರ್ನಾಟಕ ಸರ್ಕಾರ ನೀಡುತ್ತಿದೆ. ಮಹಿಳೆಯರು ಈ ನೆರವಿನಿಂದಾಗಿ ತಮ್ಮ ಕುಟುಂಬದ ನಿರ್ವಹಣೆ ಆರೋಗ್ಯ ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ.
ಆರ್ಥಿಕವಾಗಿ ಮಹಿಳೆಯರಿಗೆ ಸ್ವಾವಲಂಬನೆಯನ್ನು ಸಾಧಿಸಲು ಈ ಯೋಜನೆಯು ಸಹಾಯ ಮಾಡುತ್ತದೆ. ಈಗಾಗಲೇ ರಾಜ್ಯ ಸರ್ಕಾರ ನಾಲ್ಕು ಕಂತಿನ ಹಣವನ್ನು ಜಮಾ ಮಾಡಿದ್ದು ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯ ಸರ್ಕಾರ ಐದನೇ ಕಂತಿನ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ತಲುಪಿಸುತ್ತಿದೆ.
ಯೋಜನೆಯ 6ನೇ ಕಂತಿನ ಹಣ ಬಿಡುಗಡೆ :
ರಾಜ್ಯದ ಎಲ್ಲಾ ಜಿಲ್ಲೆಯ ಮಹಿಳೆಯರ ಬ್ಯಾಂಕ್ ಖಾತೆಗೆ ಕಳೆದ ಮೂರು ದಿನಗಳಿಂದ ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಜಮಾ ಆಗುತ್ತಿದ್ದು ಇದುವರೆಗೂ ಒಂದು ಕಂತಿನ ಹಣ ಬರದೆ ಇರುವಂತಹ ಮಹಿಳೆಯರಿಗೆ ಮತ್ತೊಮ್ಮೆ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿದ ನಂತರ 5ನೇ ಕಂತಿನ ಹಣವನ್ನು ಕೂಡ ವರ್ಗಾವಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳ ಹಣ ಸಾಮಾನ್ಯವಾಗಿ ಒಂದು ತಿಂಗಳ ತಡವಾಗಿ ತಲುಪುತ್ತಿದೆ. ಫೆಬ್ರವರಿ ತಿಂಗಳಲ್ಲಿ 6ನೇ ಕಂತಿನ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ.
ಇದನ್ನು ಓದಿ : ಜನವರಿ ತಿಂಗಳ ಅನ್ನಭಾಗ್ಯ ಹಣ ಜಮಾ ಆಗಿದೆಯಾ : ಕೂಡಲೇ ಚೆಕ್ ಮಾಡಿಕೊಳ್ಳಿ
5ನೇ ಕoತಿನ ಹಣ ಬರದೆ ಇರುವವರು ಏನು ಮಾಡಬೇಕು
ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣ ಬಂದಿಲ್ಲ ಎಂದು ಹೇಳುವ ಮಹಿಳೆಯರು ಮತ್ತೊಮ್ಮೆ ತಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಸರಿಯಾಗಿ ಸೀಡ್ ಆಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದ್ದು, ಇಲ್ಲದೆ ಹೋದರೆ ಮಹಿಳೆಯರು ತಮ್ಮ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ಒಂದು ಹೊಸ ಪೋಸ್ಟ್ ಬ್ಯಾಂಕ್ ಖಾತೆಯನ್ನು ತೆರೆದು ಹಣ ಬರುವಂತೆ ಮಾಡಿಕೊಳ್ಳಬಹುದು.
ಹೀಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು 2ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂಬ ಸಾಕಷ್ಟು ಮಹಿಳೆಯರ ಪ್ರಶ್ನೆಗೆ ಈ ಲೇಖನವೂ ಉತ್ತರವನ್ನು ನೀಡುತ್ತದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ಮಹಿಳೆಯರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು ;
- ಗೂಗಲ್ ಪೇ ಬಳಸುವವರು ತಿಂಗಳಿಗೆ 111 EMI ಕಟ್ಟಿದರೆ ನಿಮಗೆ ಸಾಲ ಸಿಗುತ್ತೆ ನೋಡಿ
- ರೈತರ ಖಾತೆಗೆ 25 ಲಕ್ಷ ಬರ ಪರಿಹಾರದ ಹಣ ಜಮ : ಸಂಪೂರ್ಣವಾಗಿ ತಿಳಿದುಕೊಳ್ಳಿ