ನಮಸ್ಕಾರ ಸ್ನೇಹಿತರೆ ಬಹಳಷ್ಟು ಜನರಿಗೆ ಮೂಲಭೂತ ಅವಶ್ಯಕತೆಗಳ ಕೊರತೆಯಿದ್ದು ಅದರಲ್ಲಿಯೂ ಬಡವರ್ಗದ ಜನತೆಗೆ ದಿನನಿತ್ಯದ ವಸ್ತುಗಳ ಬೆಲೆಯಲ್ಲಿ ಬಹಳಷ್ಟು ಹೆಚ್ಚಾಗಿರುವ ಕಾರಣ ಜೀವನ ಸಾಗಿಸಲು ಬಹಳ ಕಷ್ಟವಾಗಿದೆ ಎಂದು ಹೇಳಬಹುದು. ಅದರಲ್ಲಿಯೂ ಮುಖ್ಯವಾಗಿ ಗ್ಯಾಸ್ ಸಿಲಿಂಡರ್ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ ಇದೀಗ ಸರ್ಕಾರವು ಸಬ್ಸಿಡಿ ಸೌಲಭ್ಯವನ್ನು ನೀಡುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರದ ಸಬ್ಸಿಡಿ ಹಣವನ್ನು ಪಡೆಯಬೇಕಾದರೆ ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಕೇಂದ್ರದಿಂದ ಸಬ್ಸಿಡಿ ಹಣ :
, ಈಗಾಗಲೇ ಕೇಂದ್ರ ಸರ್ಕಾರವು ಇನ್ನೂರು ರೂಪಾಯಿಗಳ ಸಬ್ಸಿಡಿ ಹಣವನ್ನು ನೀಡಲು ಮುಂದಾಗಿತ್ತು ಅದರಂತೆ ಇದೀಗ ಇನ್ನೂರು ರೂಪಾಯಿ ಪಡೆಯುತ್ತಿದ್ದ ಗ್ರಾಹಕರಿಗೆ ಉಜ್ವಲ ಯೋಜನೆಯ ಮೂಲಕ ಗ್ಯಾಸ್ ಸಿಲೆಂಡರ್ ಸಬ್ಸಿಡಿಯ ಬೆಲೆಯನ್ನು 300 ಏರಿಕೆ ಮಾಡಿದೆ.
ಇದನ್ನು ಓದಿ : ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದಿದ್ದರೆ ದಂಡ ವಿಧಿಸಲಾಗುತ್ತಿದೆ : ಕಟ್ಟುನಿಟ್ಟಿನ ಆದೇಶ
75 ಲಕ್ಷ ಮಹಿಳೆಯರಿಗೆ ಗ್ಯಾಸ್ ಸಂಪರ್ಕ :
ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲವನ್ನು ಬಡವರ್ಗದ ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದ ಗ್ರಾಮೀಣ ಮನೆಗಳಿಗೆ ಪ್ರಯೋಜನವನ್ನು ನೀಡುತ್ತಿದ್ದು ಈ ಯೋಜನೆಯ ಪ್ರಯೋಜನವನ್ನು ಬಿಪಿಎಲ್ ಅಂತ್ಯೋದಯ ಹಾಗೂ ಅರಣ್ಯವಾಸಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದ್ದು, ಕೇಂದ್ರ ಸರ್ಕಾರವು ಸುಮಾರು 75 ಲಕ್ಷ ಮಹಿಳೆಯರಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ಅನುಮೋದನೆಯನ್ನು ಸಹ ನೀಡಿದೆ.
ಈ ಕೆವೈಸಿ ಕಡ್ಡಾಯ :
ಸರ್ಕಾರದ ಈ ಯೋಜನೆಯನ್ನು ಪಡೆಯಬೇಕಾದರೆ ಈಕೆ ವೈಸಿ ಮಾಡಿಸುವುದು ಕಡ್ಡಾಯವಾಗಿದ್ದು ಡಿಸೆಂಬರ್ 31ನೇ ತಾರೀಕು ಕೊನೆಯ ದಿನಾಂಕವಾಗಿದ್ದು ಈ ದಿನಾಂಕದ ಒಳಗಾಗಿ ಈಕೆವೈಸಿ ಮಾಡಿಸಿಕೊಂಡು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಹಣ ಬಂದಿರುವುದರ ಬಗ್ಗೆ ನೀವೇನಾದರೂ ಚೆಕ್ ಮಾಡಬೇಕಾದರೆ ಈ ಲಿಂಕ್ ನ ಮೂಲಕ ತಿಳಿದುಕೊಳ್ಳಬಹುದಾಗಿದೆ. https://www.mylpg.in ಈ ಲಿಂಕ್ ನ ಮೂಲಕ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಸಬ್ಸಿಡಿ ಹಣ ಹೆಚ್ಚಿಗೆಯಾಗಿದ್ದು ಹಾಗೂ ಹಣ ಖಾತೆಗೆ ಬಂದಿದೆಯ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಹೀಗೆ ಕೇಂದ್ರ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಜನರಿಗಾಗಿ ಈ ಯೋಜನೆಯ ಪ್ರಯೋಜನವನ್ನು ನೀಡುತ್ತಿದ್ದು ಈ ಬಗ್ಗೆ ಎಲ್ಲರೂ ತಿಳಿದುಕೊಂಡು ಕೇಂದ್ರ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ ಹಾಗೂ 300 ರೂಪಾಯಿಗಳ ಸಬ್ಸಿಡಿಯನ್ನು ಪಡೆದು ಗ್ಯಾಸ್ ಸಿಲಿಂಡರ್ ಖರೀದಿ ಮಾಡಬಹುದಾಗಿದೆ. ಹಾಗಾಗಿ ಈ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ಹಣ ಹೆಚ್ಚಾಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಹೊಸ ವರ್ಷದಿಂದ ಈ ಮೂರು ರಾಶಿಯವರ ಹಣ ಕಾಸು ಜೀವನ ವೃದ್ಧಿಯಾಗಲಿದೆ
- ಯುವನಿಧಿ ಯೋಜನೆಯ ಜಾರಿ ಯಾವ ದಾಖಲೆ ಬೇಕು ತಿಳಿದುಕೊಳ್ಳಿ ತಿಂಗಳಿಗೆ -3000