ನಮಸ್ಕಾರ ಸ್ನೇಹಿತರೇ .ನಿಮಗೆಲ್ಲರಿಗೂ ಒಂದು ಅಗತ್ಯ ಬಹುಮುಖ್ಯ ಮಾಹಿತಿಯನ್ನು ತಿಳಿಸಲಿದ್ದೇವೆ. ಅದೇನೆಂದರೆ ಗೃಹಲಕ್ಷ್ಮಿ ಯೋಜನೆ ಮೂರನೇ ಕಂತಿನ ಹಣ ಈಗಾಗಲೇ ಬಿಡುಗಡೆಯಾಗಿದ್ದು ಮಹಿಳೆಯರು ಅರ್ಜಿ ಸಲ್ಲಿಸಿದ್ದು ಬಹುತೇಕ ಎಲ್ಲರಿಗೂ ಹಣ ನೀಡಲು ಸರ್ಕಾರ ಯಶಸ್ವಿಯಾಗಿದೆ. ಆದರೆ ಇದೀಗ ಬಹು ಮುಖ್ಯ ಮಾಹಿತಿ ಒಂದು ಹೊರ ಬರುತ್ತಿದೆ ಮೂಲ ಜಿಲ್ಲದೆ ಕೆಲವೊಂದು ಮಹಿಳೆಯರ ಈ ಸೌಲಭ್ಯವನ್ನು ಕ್ಯಾನ್ಸಲ್ ಮಾಡಲಾಗುತ್ತಿದೆ. ಯಾರ ಅರ್ಜಿಯನ್ನು ಕ್ಯಾನ್ಸಲ್ ಮಾಡಲಾಗುತ್ತಿದೆ .?ಯಾಕೆ ಕ್ಯಾನ್ಸಲ್ ಮಾಡಲಾಗುತ್ತಿದೆ.? ಅನ್ನುವುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.
ಗೃಹಲಕ್ಷ್ಮಿ ಯೋಜನೆಯ ಮೂರನೇ ಬಿಡುಗಡೆಯಾಗಿ ಕೋಟ್ಯಂತರ ಮಹಿಳೆಯರು ಖುಷಿಪಟ್ಟಿದ್ದಾರೆ .ಇನ್ನು ಕೆಲವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರಬೇಕಾಗಿದೆ ಅದಕ್ಕಾಗಿ ಕಾಯುತ್ತಿದ್ದಾರೆ.
ಸರ್ಕಾರದ ಅಂಕಿ ಅಂಶಗಳ ಪ್ರಕಾರ ಸುಮಾರು ನಾಲ್ಕರಿಂದ ಐದು ಲಕ್ಷ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಇದಕ್ಕೂ ಕೂಡ ಸೂಕ್ತ ಕ್ರಮ ಕೈಗೊಳ್ಳಲು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುವಂತೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಕೆಲವೊಂದು ಮಹಿಳೆಯರಿಗೆ ಶಾಕ್ ಸಹ ನೀಡಿದೆ.
ಒಂದು ಕಡೆ ಅರ್ಜಿ ಸಲ್ಲಿಸಿದ ಮಹಿಳೆಯರು 2000 ಪ್ರತಿ ತಿಂಗಳು ಹಣ ಪಡೆದುಕೊಳ್ಳುವಲ್ಲಿ ಯಶಸ್ವಿ .ಆದರೆ ಇನ್ನೊಂದು ಕಡೆ ಒಂದಿಷ್ಟು ಮಹಿಳೆಯರು ಅರ್ಜಿಯನ್ನು ಸರ್ಕಾರ ತಿರಸ್ಕಾರ ಮಾಡಿದೆ ಯಾಕೆ.? ಎಂದು ತಿಳಿಯೋಣ.
ಅರ್ಜಿಗಳನ್ನು ಈಗಾಗಲೇ ತಿರಸ್ಕಾರ ಮಾಡಲಾಗಿದೆ
ಗೃಹಲಕ್ಷ್ಮಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಕೆಲವೊಂದು ನಿರ್ಬಂಧಗಳನ್ನು ಸರ್ಕಾರ ಹೇಳಿದ್ದು ಅದರಲ್ಲಿ ಮುಖ್ಯವಾಗಿ ಯಾವುದೇ ಅರ್ಜಿದಾರ ಮಹಿಳೆ ಅಥವಾ ಆಕೆಯ ಪತ್ನಿ ತೆರಿಗೆಯನ್ನು ಪಾವತಿ ಮಾಡುವವರಾಗಿದ್ದರೆ ಅಂತಹ ಅರ್ಜಿಯನ್ನು ಸರ್ಕಾರ ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಆದರೆ ಕೆಲವೊಬ್ಬರು ಅಂತಹ ವ್ಯವಸ್ಥೆಯಲ್ಲಿದ್ದರೂ ಸಹ ಅರ್ಜಿ ಸಲ್ಲಿಸಿದ್ದರು ಮಾಡಲಾಗಿದೆ ಹಾಗೂ ಸಾಕಷ್ಟು ಜನರು ತೆರಿಗೆ ಪಾವತಿ ಮಾಡುವ ಮಹಿಳೆಯರು ಕೂಡ ಅರ್ಜಿ ಸಲ್ಲಿಸಿದ್ದಾರೆ ಇದೀಗ ಇಂತಹ ಅರ್ಜಿಗಳನ್ನು 50,000 ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ.
ಅರ್ಜಿಯನ್ನು ಹೇಗೆ ಪತ್ತೆ ಮಾಡಲಾಗುತ್ತಿದೆ:
ಗೃಹಲಕ್ಷ್ಮಿ ಯೋಜನೆಗೆ ಬಿಪಿಎಲ್ ಮತ್ತು ಎಪಿಎಲ್ ಕಾರ್ಡು ದಾರು ಕೂಡ ಅರ್ಜಿ ಸಲ್ಲಿಸಬಹುದಾಗಿತ್ತು. ಇಲ್ಲಿ ಸಾಕಷ್ಟು ಎಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಪತ್ನಿ ಆದಾಯ 7 ಲಕ್ಷಕ್ಕಿಂತ ಅಧಿಕವಿದ್ದು ವಾರ್ಷಿಕವಾಗಿ ತೆರಿಗೆ ಪಾವತಿ ಮಾಡುತ್ತಿರುತ್ತಾರೆ ಕಂಡು ಬಂದಿದೆ.
ಬ್ಯಾಂಕ್ ಕಾರ್ಡ್ ಪರಿಶೀಲನೆ ಮಾಡಿದಾಗ ತೆರಿಗೆ ಪಾವತಿ ಮಾಡುತ್ತಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆ .ಈ ಹಿನ್ನೆಲೆಯಲ್ಲಿ ಅಂತಹ ಮಹಿಳೆಯರ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ತಿಳಿಸಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್.
ಗೃಹಲಕ್ಷ್ಮಿ ಅದೋಲತ್ ಪ್ರಾರಂಭ:
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಅದಾಲತ್ ಅನ್ನು ಪ್ರಾರಂಭಿಸಲಾಗಿದೆ .ಒಂದು ವಾರದ ಒಳಗಾಗಿ ಯಾವ ಮಹಿಳೆ ಖಾತೆಗೆ ಹಣ ವರ್ಗಾವಣೆ ಆಗಿಲ್ಲ ಎಂಬುದನ್ನು ಖುದ್ದಾಗಿ ಗ್ರಾಮ ಪಂಚಾಯಿತಿ ಸದಸ್ಯರು ಅಂತಹ ವರ್ಗಾವಣೆ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.
ಒಂದು ಕೋಟಿ 10 ಲಕ್ಷ ಮಹಿಳೆಯರ ಖಾತೆಗೆ ಈಗಾಗಲೇ ಹಣ ತಲುಪಿದೆ ಇನ್ನುಳಿದಂತಹ ನಗರ ವ್ಯಾಪ್ತಿಯಲ್ಲಿ ಬರುವ ಮಹಿಳೆಯರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಹಿಳೆಯರ ಖಾತೆಗೆ ಹಣ ಜಮಾ ಆಗಬೇಕಾಗಿದೆ. ಎಂದು ತಿಳಿಸಲಾಗಿದೆ.
ಇದನ್ನು ಓದಿ : ಈ ಕೆಲಸ ಮಾಡದಿದ್ದರೆ ಮದುವೆ ಅಮಾನ್ಯ ಎನಿಸಿಕೊಳ್ಳುತ್ತದೆ, ಹೊಸ ರೂಲ್ಸ್ ಜಾರಿ
ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಹಣ:
ಹೌದು ಡಿಸೆಂಬರ್ ಅಂತ್ಯದೊಳಗೆ ಪ್ರತಿಯೊಂದು ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರಲಿದೆ. ಅದಕ್ಕಾಗಿ ಸರ್ಕಾರ ಚಿಂತನೆ ನಡೆಸಿದ್ದು ಸಾಕಷ್ಟು ತಯಾರಿಯನ್ನು ನಡೆಸಿಕೊಂಡಿದೆ .ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಫಲಾನುಭವಿಗಳಿಗೆ ಅಗತ್ಯವಾದ ಸೌಲಭ್ಯವನ್ನು ಒದಗಿಸಿಕೊಡುವಲು ಮುಂದಾಗಿದ್ದಾರೆ.
ಈ ಮೇಲ್ಕಂಡ ಮಾಹಿತಿಯು ನಿಮಗೆಲ್ಲರಿಗೂ ಉಪಯೋಗಕರವಾಗಲಿಂದು ಇಂತಹ ಮಾಹಿತಿ ಬೇಕಾದರೆ ಪದೇ ಪದೇ ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ. ಇಂತಹ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ಸಹ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ನಿಮ್ಮ ಮಕ್ಕಳ ಹೆಸರಿನಲ್ಲಿ 10,000 ಹೂಡಿಕೆ ಮಾಡಿದರೆ ಸಿಗಲಿದೆ 2 ಕೋಟಿ
ಲಕ್ಷಾಂತರ ರೇಷನ್ ಕಾರ್ಡ್ ಅರ್ಜಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ..!