News

ಕೇಂದ್ರ ಸರ್ಕಾರದಿಂದ ಮನೆ ಇಲ್ಲದವರಿಗೆ ಸ್ವಂತ ಮನೆ ಕಟ್ಟಲು ಸಹಾಯಧನ ನೀಡಲಾಗುತ್ತಿದೆ

Subsidy is being given to the homeless to build their own houses

ನಮಸ್ಕಾರ ಸ್ನೇಹಿತರೆ ಮನುಷ್ಯನ ಮೂಲಭೂತ ಅವಶ್ಯಕತೆ ಎಂದರೆ ಅದು ಮನೆಯಾಗಿರುತ್ತದೆ ಆದರೆ ಸಂಪೂರ್ಣವಾಗಿ ಎಲ್ಲರಿಗೂ ಕೂಡ ಭಾರತದಲ್ಲಿ ಸ್ವಂತ ಸೂರಿನಲ್ಲಿ ವಾಸಿಸುವಂತಹ ಯಾವುದೇ ಅನುಕೂಲ ಇಲ್ಲ ಹಾಗಾಗಿ ಆದಷ್ಟು ಶೀಘ್ರವಾಗಿ ಕೇಂದ್ರ ಸರ್ಕಾರವು ಕೂಡ ಪ್ರಯತ್ನಿಸುತ್ತಿದ್ದು ಇದಕ್ಕಾಗಿ ವಸತಿ ಯೋಜನೆಗಳನ್ನು ಸಹ ಕೇಂದ್ರ ಸರ್ಕಾರವು ರೂಪಿಸಿ ಸಹಾಯಧನವನ್ನು ನೀಡುತ್ತಿದೆ.

Subsidy is being given to the homeless to build their own houses
Subsidy is being given to the homeless to build their own houses

ಪ್ರಧಾನ ಮಂತ್ರಿ ಆವಾಸ್ ಯೋಜನೆ :

ಹೀಗಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯನ್ನು ಈವರೆಗೂ 2016ರಲ್ಲಿ ಇಂದಿರಾಗಾಂಧಿ ವಸತಿ ಯೋಜನೆಯನ್ನು ಇದೀಗ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಎನ್ನುವ ಹೆಸರಿಗೆ ಬದಲಾವಣೆ ಮಾಡಿದೆ. ಸುಮಾರು 2.6 ಕೋಟಿ ಮನೆಗಳನ್ನು ಇಂದಿರಾಗಾಂಧಿ ವಸತಿ ಯೋಜನೆಯಡಿಯಲ್ಲಿ ಜಾರಿಗೊಳಿಸಲಾಗಿದ್ದು ಈಗ 2.5 ಕೋಟಿ ಮನೆಗಳು ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಜಾರಿಯಾಗಿವೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿ ದಂತೆ ಸಹಾಯಧನ :

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಮನೆಯನ್ನು ಪಡೆದುಕೊಳ್ಳಬೇಕಾದರೆ ಗ್ರಾಮ ಪಂಚಾಯಿತಿಗಳಿಗೆ ಈ ಯೋಜನೆ ವತಿಯಿಂದ ಅನುದಾನ ಮಂಜೂರಾಗುತ್ತದೆ. 1.2 ಲಕ್ಷ ಸಹಾಯಧನವನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲು ಹಾಗೂ 1.3 ಲಕ್ಷ ಹಣವನ್ನು ಗುಡ್ಡಗಾಡು ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ನೀಡಲಾಗುತ್ತದೆ. ಬಡವರು ತಮ್ಮ ಶಕ್ತಿಯನುಸಾರ ಈ ಮೊತ್ತವನ್ನು ಪಡೆದುಕೊಂಡು ಮನೆಗಳನ್ನು ಕಟ್ಟಿಕೊಳ್ಳಬೇಕು.

ಇದನ್ನು ಓದಿ : NSP ಸ್ಕಾಲರ್ಶಿಪ್ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಿ ಇಲ್ಲಿದೆ ಲಿಂಕ್


ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಕೆಲವೊಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. https://pmaymis.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಅದರಂತೆ ಈ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ನೀವೇನಾದರೂ ಪಡೆದುಕೊಳ್ಳಲು ಯೋಚಿಸುತ್ತಿದ್ದರೆ ಸಹಾಯವಾಣಿ ಸಂಖ್ಯೆಯಾದ 011 2306 3285,011 2306 0484 ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಹೀಗೆ ಕೇಂದ್ರ ಸರ್ಕಾರವು ಸ್ವಂತ ಮನೆ ಇಲ್ಲದವರಿಗೆ ಸ್ವಂತ ಮನೆಯನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ವಸತಿ ಯೋಜನೆಗಳಲ್ಲಿ ಮುಖ್ಯವಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಸುಮಾರು ಒಂದು ಪಾಯಿಂಟ್ ಮೂರು ಲಕ್ಷದವರೆಗೆ ಸಹಾಯಧನವನ್ನು ನೀಡುತ್ತಿದ್ದು ಈ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...