ನಮಸ್ಕಾರ ಸ್ನೇಹಿತರೆ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳನ್ನು ಜಾರಿ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. 202324ನೇ ಸಾಲಿನಲ್ಲಿ ಹೊಸಪೇಟೆ ತಾಲೂಕಿನ ತೋಟಗಾರಿಕೆ ಇಲಾಖೆಯಿಂದ ಯೋಜನೆಗಳ ಅಡಿಯಲ್ಲಿ ಆಸಕ್ತ ರೈತರಿಂದ ಸೌಲಭ್ಯಕ್ಕಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
ಸಣ್ಣ ರೈತರಿಗೆ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ರೈತರಿಗೆ ಸೌಲಭ್ಯಗಳು :
ವಿವಿಧ ಕಾಮಗಾರಿಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಇತರೆ ಸಣ್ಣ ಅತಿ ಸಣ್ಣ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ರೈತರಿಗೆ ಹೊಸಪೇಟೆ ತಾಲೂಕಿನ ತೋಟಗಾರಿಕೆ ಇಲಾಖೆಯಿಂದ ವಿವಿಧ ಬಗೆಯ ಹಣ್ಣಿನ ಬೆಳೆಗಳಾದ ಬಾಳೆ ದಾಳಿಂಬೆ ಡ್ರಾಗನ್ ಫ್ರೂಟ್ ಹಾಗೂ ಇನ್ನಿತರ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯ ಮೂಲಕ ತೋಟಗಾರಿಕೆಗೆ ಸಂಬಂಧಿಸಿದಂತೆ ಬೆಳೆಗಳನ್ನು ರೈತರಿಗೆ ಹೊಸಪೇಟೆ ತಾಲೂಕಿನ ತೋಟಗಾರಿಕೆ ಇಲಾಖೆಯ ಅವಕಾಶ ಕಲ್ಪಿಸುತ್ತಿದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ :
ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆ ಕೃಷಿ ಚಟುವಟಿಕೆಗಳಿಗೆ ಹಿಂದುಪಕರಣಗಳ ಖರೀದಿ ತೋಟಗಾರಿಕೆ ಬೆಳೆಗಳ ಸಂಸ್ಕರಣ ಘಟಕಗಳು ಸ್ಥಾಪನೆ ಹೀಗೆ ಕೆಲವೊಂದು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಕರ್ನಾಟಕ KAS : 504 ಹುದ್ದೆಗಳಿಗೆ ಅರ್ಜಿ ಆಹ್ವಾನ ಯಾವ ಹುದ್ದೆ ಖಾಲಿ ಇದೆ ನೋಡಿ
ಹೆಚ್ಚಿನ ಮಾಹಿತಿಗಾಗಿ :
ಹೊಸಪೇಟೆ ತಾಲೂಕಿನ ತೋಟಗಾರಿಕೆ ಇಲಾಖೆಯ 202324ನೇ ಸಾಲಿನಲ್ಲಿ ವಿವಿಧ ಯೋಜನೆಗಳನ್ನು ರೈತರಿಗಾಗಿ ಜಾರಿಗೆ ತರುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಹೊಸಪೇಟೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರಮೇಶ್ ಕೆಎಂಎಸ್ ರವರ ಮೊಬೈಲ್ ನಂಬರ್ ಅದ 8310291867 ಈ ಸಂಖ್ಯೆಗೆ, ಹೋಬಳಿ ಮಟ್ಟದಲ್ಲಿ ಅಧಿಕಾರಿಗಳಾದಂತಹ ರೈತ ಸಂಘದ ಕೇಂದ್ರ ಹೊಸಪೇಟೆ ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಸುಧಾಕರ 9739027284, ರೈತ ಸಂಘ ೇಂದ್ರ ಸಹಾಯಕ ತೋಟಗಾರಿಕೆ ಅಧಿಕಾರಿ ಕಮಲಾಪುರ ವೀರೇಶ ಎಸ್ಎಂ 8123465548, ರೈತ ಸಂಘ ಕೇಂದ್ರ ಸಹಾಯಕ ತೋಟಗಾರಿಕೆ ಅಧಿಕಾರಿ ಮರಿಯಮ್ಮನಹಳ್ಳಿ, ರಾಹುಲ್ ಕೆ 8073719905 ಇವರ ಸಹಾಯವಾಣಿಗೆ ಸಂಪರ್ಕಿಸುವುದರ ಮೂಲಕ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಹೀಗೆ ಹೊಸಪೇಟೆ ತಾಲೂಕಿನ ತೋಟಗಾರಿಕೆ ಇಲಾಖೆ ತೋಟಗಾರಿಕೆ ಯಂತ್ರಗಳ ಖರೀದಿ ಬೆಳೆ ಸಂಸ್ಕರಣ ಘಟಕಕ್ಕೆ ಸಹಾಯಧನ ನೀಡುತ್ತಿರುವುದರ ಬಗ್ಗೆ ಈ ಮಾಹಿತಿಯನ್ನು ನಿಮಗೆ ತಿಳಿದಿರುವಂತಹ ಸ್ನೇಹಿತರಿಗೆ ಶೇರ್ ಮಾಡುವುದರ ಮೂಲಕ ಅಲ್ಲಿನ ಜನರು ಸುಲಭವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಇಲಾಖೆಯು ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂಬುದರ ಬಗ್ಗೆ ತಿಳಿಸಿ, ಧನ್ಯವಾದಗಳು
ಇತರೆ ವಿಷಯಗಳು :
- ಕೇಂದ್ರ ಸರ್ಕಾರದಿಂದ ಮನೆ ಇಲ್ಲದವರಿಗೆ ಸ್ವಂತ ಮನೆ ಕಟ್ಟಲು ಸಹಾಯಧನ ನೀಡಲಾಗುತ್ತಿದೆ
- ಭಾರತದ ಯಾವ ಸ್ಥಳವನ್ನು ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ ?