ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯದ ಯುವನಿಧಿ ಯೋಜನೆಗೆ ಸಂಬಂಧಿಸಿ ದಂತೆ ರಾಜ್ಯ ಸರ್ಕಾರವು ಸಾಕಷ್ಟು ಮಾಹಿತಿಯನ್ನು ನೀಡುತ್ತಿದೆ. 2024 ಜನವರಿ ಒಂದರಿಂದ ಯುವನಿಧಿ ಯೋಜನೆ ಎಂದು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದ್ದು ಈ ಬಗ್ಗೆ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಸಚಿವರಾದ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ರವರು ತಿಳಿಸಿದ್ದಾರೆ.
ಯುವನಿಧಿ ಯೋಜನೆಯ ನೋಂದಣಿ ಪ್ರಾರಂಭ :
ರಾಜ್ಯ ಸರ್ಕಾರವು ಡಿಸೆಂಬರ್ 26 ರಿಂದ ಯುವನಿಧಿ ಯೋಜನೆಯ ನೋಂದಣಿಯನ್ನು ಪ್ರಾರಂಭ ಮಾಡಲು ನಿರ್ಧರಿಸಿದ್ದು ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ನ ಮೂಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದರಂತೆ ಈ ಬಗ್ಗೆ ಮಾತನಾಡಿದಂತಹ ಪಾಟೀಲ್ ರವರು ನಾವು ಜನವರಿ ಒಂದು 2024 ರಂದು ಈ ಯೋಜನೆಯನ್ನು ಪ್ರಾರಂಭಿಸುತ್ತೇವೆ ಡಿಸೆಂಬರ್ 26ರಂದು ನೋಂದಣಿ ಪ್ರಾರಂಭವಾಗುತ್ತದೆ ಎಂದು ಹೇಳಿದರು. ಪದವಿ ಪಡೆದ ಆರು ತಿಂಗಳು ಪೂರೈಸಿದವರು 2022 23ನೇ ಶೈಕ್ಷಣಿಕ ವರ್ಷದಲ್ಲಿ ಮತ್ತು ಉನ್ನತ ಶಿಕ್ಷಣಕ್ಕೆ ಸೇರಿದ ಯಾವುದೇ ಉದ್ಯೋಗವನ್ನು ತೆಗೆದುಕೊಳ್ಳದೆ ಇರುವಂತಹ ಅಭ್ಯರ್ಥಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಸಹಾಯಧನ :
ಪದವೀಧರ ನಿರುದ್ಯೋಗ ಯೋಗ ಯುವತಿಯರಿಗೆ 3000 ರೂಪಾಯಿಗಳನ್ನು ತಿಂಗಳಿಗೆ ಆರ್ಥಿಕ ಸಹಾಯವನ್ನಾಗಿ ಹಾಗೂ ಡಿಪ್ಲೋಮೋ ಹೊಂದಿರುವವರಿಗೆ 1500 ರೂಪಾಯಿಗಳನ್ನು ರಾಜ್ಯ ಸರ್ಕಾರವು ಈ ಯೋಜನೆಯಡಿಯಲ್ಲಿ ಸಹಾಯಧನವಾಗಿ ನೀಡುತ್ತದೆ ಈ ಸಹಾಯಧನವು ಕೇವಲ ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸಲಾಗುತ್ತದೆ.
ಇದನ್ನು ಓದಿ :ಸರ್ಕಾರದ ಭೂಮಿ ಒತ್ತುವರಿ ಮಾಡಿದವರಿಗೆ ಕಠಿಣ ಕ್ರಮ ಜಾರಿ : ಕೂಡಲೇ ಈ ಕೆಲಸ ಮಾಡಿ
ನಿರುದ್ಯೋಗ ಪ್ರಮಾಣ ಪತ್ರ ಪಡೆಯುವ ವಿಧಾನ :
ನೀವೇನಾದರೂ ರಾಜ್ಯ ಸರ್ಕಾರದ ಈ ಯೋಜನೆಗೆ ಸಂಬಂಧಿಸಿ ದಂತೆ ನಿರುದ್ಯೋಗ ಪ್ರಮಾಣ ಪತ್ರವನ್ನು ಪಡೆಯಬೇಕಾದರೆ, https://nadakacheri.karnataka.gov.in/Online_service/loginpage.aspx ನಿರುದ್ಯೋಗ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ನಿರುದ್ಯೋಗ ಯುವಕರಿಗಾಗಿಯೇ ಯೋಜನೆಗಳ ಈ ಯೋಜನೆಯ ಪ್ರಯೋಜನವನ್ನು ಅಂದಾಜು 5 ಲಕ್ಷ ಫಲಾನುಭವಿಗಳು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ರಾಜ್ಯ ಸರ್ಕಾರದಿಂದ ನಿರುದ್ಯೋಗ ಯುವಕ ಯುವತಿಯರು ಎರಡು ವರ್ಷಗಳ ಅವಧಿಗೆ ಆರ್ಥಿಕ ನೆರವನ್ನು ಈ ಯೋಜನೆಯ ಮೂಲಕ ಪಡೆಯಬಹುದು ಎಂಬುದರ ಮಾಹಿತಿ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರೆ ಎಚ್ಚರಿಕೆ.! ದಂಡ ಕಟ್ಟಬೇಕು
- ಸುಮಾರು 75 ಸಾವಿರ ರೂಪಾಯಿಗಳು ಈ ವಿದ್ಯಾರ್ಥಿಗಳಿಗೆ ಸಿಗಲಿದೆ : ಈ ಲಿಂಕ್ ಬಳಸಿ ಅಪ್ಲೈ ಮಾಡಿ