ನಮಸ್ಕಾರ ಸ್ನೇಹಿತರೆ ಈಗಾಗಲೇ ಬಿ ವೈ ಪಿ ಎಲ್ ಸ್ಕಾಲರ್ಶಿಪ್ ಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಅಲ್ಲದೆ ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು ಮಾನವಿಕ ವಿಭಾಗಗಳ ಪದವಿ ಬಿಇ ಬಿ ಟೆಕ್ ಬಿ ಸಿ ಎ ಬಿ ಎಸ್ ಸಿ ಹೀಗೆ ಯಾವುದೇ ಪದವಿಗಳ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಬಿ ವೈ ಪಿ ಎಲ್ ಸ್ಕಾಲರ್ಶಿಪ್ :
ಯಾವುದೇ ಆರ್ಥಿಕ ಪರಿಸ್ಥಿತಿಯನ್ನು ಹಿಂದುಳಿದ ವಿದ್ಯಾರ್ಥಿಗಳು ಎದುರಿಸದೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಪಡೆದುಕೊಳ್ಳಬೇಕೆ ಎನ್ನುವುದು ಸ್ಕಾಲರ್ಶಿಪ್ನ ಮುಖ್ಯ ಉದ್ದೇಶವಾಗಿದೆ. ಬಿಎಸ್ಇಎಸ್ ಯಮುನಾ ಪವರ್ ಲಿಮಿಟೆಡ್ ವಿದ್ಯಾರ್ಥಿ ವೇತನವನ್ನು ಈ ಒಂದು ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿಯೇ ನೀಡಲಾಗುತ್ತಿದೆ. ಅಂತಿಮ ವರ್ಷದಲ್ಲಿ ಯಾವುದೇ ಪದವಿ ಕೋರ್ಸ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಬಿ ವೈ ಪಿ ಎಲ್ ಸ್ಕಾಲರ್ಶಿಪ್ ಮೊತ್ತ :
ಒಂದು ವರ್ಷಕ್ಕೆ ಈ ಸ್ಕಾಲರ್ಶಿಪ್ ನ ಮೂಲಕ ಹಣಕಾಸು ಸೌಲಭ್ಯವನ್ನು 30,000ಗಳವರೆಗೆ ನೀಡಲಾಗುತ್ತದೆ. ಪ್ರತಿವರ್ಷ ಅಮೆಜಾನ್ ವತಿಯಿಂದ ಬಿಇ ಬಿ ಟೆಕ್ ಓದುತ್ತಿರುವ ವಿದ್ಯಾರ್ಥಿಗಳಿಗೆ 50,000 ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಈ ಒಂದು ಸ್ಕಾಲರ್ಶಿಪ್ ಪ್ರಯೋಜನವನ್ನು ಅರ್ಹ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು.
ಈ ವಿದ್ಯಾರ್ಥಿ ವೇತನ ಪಡೆಯಲು ಇರುವ ಅರ್ಹತೆಗಳು :
ಬಿ ವೈ ಪಿ ಎಲ್ ಸ್ಕಾಲರ್ಶಿಪ್ ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು ಅವುಗಳೆಂದರೆ ಭಾರತೀಯ ಪ್ರಜೆಯಾಗಿರಬೇಕು. ವಿದ್ಯಾರ್ಥಿಗಳು ದೆಹಲಿ ವ್ಯಾಪ್ತಿಯಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಪದವಿಯ ಅಂತಿಮ ವರ್ಷದಲ್ಲಿ ವಿದ್ಯಾರ್ಥಿಗಳು ಓದುತ್ತಿರಬೇಕು. ಶೇಕಡ 55 ರಷ್ಟು ಅಂಕಗಳನ್ನು ಕೊನೆಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಪಡೆದಿರಬೇಕು. ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 6 ಲಕ್ಷ ರೂಪಾಯಿ ಮೀರಿರಬಾರದು.
ಇದನ್ನು ಓದಿ : ವಿದ್ಯಾರ್ಥಿಗಳು 75,000 ವಿದ್ಯಾರ್ಥಿ ವೇತನವನ್ನು ಪಡೆಯಲು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ
ಬಿ ವೈ ಪೀ ಎಲ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ :
ಬಿ ವೈ ಪಿ ಎಲ್ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿತ್ತು ಅಧಿಕೃತ ವೆಬ್ಸೈಟ್ ಎಂದರೇ https://www.buddy4study.com/page/bypl-sashakt-scholarship ಈ ವೆಬ್ಸೈಟ್ಗೆ ಭೇಟಿ ನೀಡಿ 07-01-2024 ಈ ದಿನಾಂಕದೊಳಗೆ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಒಟ್ಟಾರೆಯಾಗಿ ಹಲವಾರು ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಕಟ್ಟಿಕೊಳ್ಳಲು ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ಇದೀಗ ಬಿ ವೈ ಪಿ ಎಲ್ ಸ್ಕಾಲರ್ಶಿಪ್ ಅನ್ನು ಸಹ ನೀಡಲಾಗುತ್ತದೆ ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಸುಮಾರು 30 ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ ಧನ್ಯವಾದಗಳು.
ಇತರೆ ವಿಷಯಗಳು :
- Amazon ವತಿಯಿಂದ ವಿದ್ಯಾರ್ಥಿ ವೇತನ : ಸುಮಾರು 50 ಸಾವಿರ ರೂಪಾಯಿ ಸಿಗುತ್ತೆ
- ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಘೋಷಣೆ : ಭತ್ತ ರಾಗಿ ಜೋಳ ಖರೀದಿಗೆ ನೋಂದಣಿ ಆಹ್ವಾನ