ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರವು ರಾಜ್ಯದ ಶಾಲಾ ಮಕ್ಕಳಿಗೆ ಹೊಸ ಮಾರ್ಗಸೂಚಿ ಪ್ರಕಟ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಇಡೀ ವಿಶ್ವವಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಎನ್ನುವ ಮಹಾಮಾರಿ ಎಷ್ಟರಮಟ್ಟಿಗೆ ಕಂಗಾಲಾಗಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಅದರಲ್ಲಿಯೂ ಸಾಕಷ್ಟು ಸಮಸ್ಯೆಗಳನ್ನು ಭಾರತದಲ್ಲಿಯೂ ಉಂಟು ಮಾಡಿತ್ತು ಲಕ್ಷಾಂತರ ಸಾವು ನೋವುಗಳು ಭಾರತದಲ್ಲಿ ಸಂಭವಿಸಿದವು. ಅದೆಷ್ಟೋ ಜನರು ಕೆಲಸಗಳನ್ನು ಕಳೆದುಕೊಂಡು ಬೀದಿಗೆ ಬರುವಂತೆ ಆಯ್ತು ಆದರೆ ಇನ್ನೇನು ಸ್ವಲ್ಪ ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವಷ್ಟರಲ್ಲಿ ಈಗ ಮತ್ತೆ ಕೋವಿಡ್ ಎನ್ನುವ ಮಹಾಮಾರಿ ದೇಶವನ್ನೆಲ್ಲ ಪ್ರವೇಶಿಸಿದೆ.
ಸರ್ಕಾರದಿಂದ ಕೋವಿಡ್ ಸುರಕ್ಷತೆ ಕ್ರಮಗಳ ಬಗ್ಗೆ ಆದೇಶ :
ಹೌದು ಮತ್ತೆ ಇದೀಗ ಭಾರತ ದೇಶದಲ್ಲಿ ಕೋವಿಡ್ ಎನ್ನುವ ಸೋಂಕು ಜನರನ್ನು ಆವರಿಸುತ್ತಿದ್ದು ಹಲವಾರು ಕೇಸ್ಗಳು ಈಗಾಗಲೇ ಪತ್ತೆಯಾಗಿದ್ದು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯೂ ಸಹ ಅವುಗಳಿಗೆ ನಡೆಯುತ್ತಿದೆ. ಆರೋಗ್ಯ ಇಲಾಖೆ ಶಾಲಾ ಮಕ್ಕಳಿಗೆ ಕೋವಿಡ್ 19 ಸೋಂಕು ಗುಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾರ್ಗ ಸೂಚಿಯ ಬಗ್ಗೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮಧು ಬಂಗಾರಪ್ಪ ಮಾಹಿತಿ :
ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ಅವರು ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಇಲಾಖೆಯು ಹೊರಡಿಸಿರುವ ಮಾರ್ಗಸೂಚಿಯನ್ನು ಪರಿಗಣಿಸಲಾಗುತ್ತದೆ ಅಲ್ಲದೆ ಶಾಲಾ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ಕ್ರಮಗಳನ್ನು ಸರ್ಕಾರವು ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತದೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಸುಧೀರ್ಘ ಚರ್ಚೆ ನಡೆಸಲಾಗಿದ್ದು ಇನ್ನಷ್ಟು ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಶಾಲಾ ಮಕ್ಕಳ ಪಠ್ಯ ಪರಿಷ್ಕರಣಿ ವಿಚಾರವಾಗಿಯೂ ಇದೇ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದು ತಜ್ಞರ ಮಾಹಿತಿಯನ್ನು ಮೈಸೂರು ಟಿಪ್ಪು ಸುಲ್ತಾನ್ ರವರ ಕುರಿತು ಪಠ್ಯಕ್ರಮದಲ್ಲಿ ಸೇರಿಸುವ ಕುರಿತು ಪಡೆದುಕೊಳ್ಳಲಾಗುತ್ತದೆ ಹಾಗೂ ಯಾವುದೇ ಕಾರಣಕ್ಕೂ ಪಠ್ಯ ತಿರಿಸುವ ಪ್ರಯತ್ನವನ್ನು ಮಾಡುವುದಿಲ್ಲ ಎಂದು ಮಾಹಿತಿ ನೀಡಿದರು.
ಇದನ್ನು ಓದಿ : ವಿದ್ಯಾರ್ಥಿಗಳು 75,000 ವಿದ್ಯಾರ್ಥಿ ವೇತನವನ್ನು ಪಡೆಯಲು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ
ಸರ್ಕಾರದಿಂದ ಸಾರ್ವಜನಿಕರಲ್ಲಿ ವಿನಂತಿ :
ಬಸ್ ಹಾಗು ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಾಸ್ ಧರಿಸುವುದು ಕಡ್ಡಾಯ ಅದರಲ್ಲಿಯೂ ಮುಖ್ಯವಾಗಿ ಅರವತ್ತು ವರ್ಷ ಮೀರಿದಂತಹ ಜನರು ಬಸ್ಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಎಂದು ಸರ್ಕಾರವು ತಿಳಿಸಿದ್ದು ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಆ ಪರಿಸ್ಥಿತಿ ಎದುರು ಬಂದರೆ ಮಾಸ್ಕ್ ಧರಿಸಿ ಹಾಗೂ ಸ್ಯಾನಿಟೈಝೆರಿಯನ್ನು ಬಳಸುವುದನ್ನು ಮರೆಯಬೇಡಿ ಎಂದು ಸರ್ಕಾರವು ತಿಳಿಸಿತು. ಮನೆಯಿಂದ ಅನಗತ್ಯ ಕಾರಣಗಳಿಗಾಗಿ ಹೊರಗಡೆ ಸುತ್ತಾಡಬೇಡಿ ಎಂದು ಸರ್ಕಾರವು ಕ್ರಮವಾಗಿ ಸುತ್ತೋಲೆಯನ್ನು ಹೊರಡಿಸಿದೆ.
ಹೀಗೆ ರಾಜ್ಯ ಸರ್ಕಾರವು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು ಶಾಲಾ ಮಕ್ಕಳಿಗೂ ಸಹ ಇದರಲ್ಲಿ ಹೆಚ್ಚಿನ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರುವುದರಿಂದ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- Amazon ವತಿಯಿಂದ ವಿದ್ಯಾರ್ಥಿ ವೇತನ : ಸುಮಾರು 50 ಸಾವಿರ ರೂಪಾಯಿ ಸಿಗುತ್ತೆ
- ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಘೋಷಣೆ : ಭತ್ತ ರಾಗಿ ಜೋಳ ಖರೀದಿಗೆ ನೋಂದಣಿ ಆಹ್ವಾನ