News

ಸರ್ಕಾರವೇ ಮನೆಯಿಲ್ಲದವರಿಗೆ ಮನೆ ನೀಡುತ್ತದೆ ಕೂಡಲೇ ಈ ವಿಷಯ ತಿಳಿದುಕೊಳ್ಳಿ

It is the government that gives houses to the homeless

ನಮಸ್ಕಾರ ಸ್ನೇಹಿತರೆ ನಮ್ಮ ಕುಟುಂಬದವರ ಜೊತೆ ಮನೆ ನಿರ್ಮಾಣ ಮಾಡಿಕೊಂಡು ನಿಮ್ಮಲ್ಲಿಯ ಜೀವನ ಸಾಗಿಸಬೇಕೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕೆಲಸ ಆಗಿರುತ್ತದೆ. ಈ ಆರ್ಥಿಕ ಸಮಸ್ಯೆಗಳಿಂದಾಗಿ ನಾವು ನಮ್ಮ ಸ್ವಂತ ಮನೆಯಲ್ಲಿ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಣ ಇರುವವರು ಹಾಗೂ ಸರ್ಕಾರಿ ನೌಕರರು ಅದು ಹೇಗೋ ಹಣವನ್ನು ಪಡೆದು ಮನೆಯನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಂದಿಷ್ಟು ಜನರಿಗೆ ಈ ಹೋಂ ಲೋನ್ ಸೌಲಭ್ಯ ಸಿಗುವುದಿಲ್ಲ. ಜನರಿಗಾಗಿ ಇದೀಗ ರಾಜ್ಯ ಸರ್ಕಾರವು ಮನೆ ನಿರ್ಮಾಣ ಮಾಡಿಕೊಡಲು ವಸತಿ ರಹಿತರಿಗೆ ಮುಂದಾಗಿದೆ.

It is the government that gives houses to the homeless
It is the government that gives houses to the homeless

ವಸತಿ ಯೋಜನೆ :

ರಾಜ್ಯ ಸರ್ಕಾರದ ಮುಖ್ಯ ಜವಾಬ್ದಾರಿ ಎಂದರೆ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಮೂಲಸೌಕರ್ಯ ಒದಗಿಸುವುದಾಗಿರುತ್ತದೆ. ಈ ಮೂಲ ಸೌಕರ್ಯದಲ್ಲಿ ಮುಖ್ಯವಾಗಿ ವಸತಿ ಸೌಲಭ್ಯವು ಒಂದಾಗಿದೆ. ರಾಜ್ಯ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ಬಸವ ವಸತಿ ಯೋಜನೆ ಅಡಿಯಲ್ಲಿ ಸಾವಿರಕ್ಕೂ ಅಧಿಕ ಮನೆ ನಿರ್ಮಾಣಕ್ಕೆ ಮುಂದಾಗಿರುವ ವಿಚಾರವನ್ನು ಈಗಾಗಲೇ ನಾವು ನೋಡಿದ್ದೇವೆ.

ಅದರಂತೆ ಇದೀಗ ಸ್ಲಂ ನಿವಾಸಿಗಳು ಬೆಂಗಳೂರಿನಲ್ಲಿ ವಾಸಿಸುತ್ತಿರುವವರು ಹಾಗೂ ವಸತಿ ರಹಿತರಿಗೆ ರಾಜ್ಯ ಸರ್ಕಾರ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಗುರುವಾರ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದಾರೆ. ಹಾಗಾದರೆ ಈ ಮುಖ್ಯಮಂತ್ರಿ ಬಹು ಮಹಡಿ ವಸತಿ ಯೋಜನೆಯ ಅಡಿಯಲ್ಲಿ ಯಾರೆಲ್ಲ ಮನೆಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ನೋಡುವುದಾದರೆ.

ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು :

ವಸತಿ ಯೋಜನೆಗೆ ಅರ್ಜಿ ಸಲ್ಲಿಸಿ ಅದರ ಫಲಾನುಭವಿಗಳಾಗಲು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಅವುಗಳೆಂದರೆ , ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕಾಗುತ್ತದೆ ಅರ್ಜಿದಾರರು. ಈ ಯೋಜನೆಗೆ ಅರ್ಜಿಯನ್ನು ಬಡತನ ರೇಖೆಗಿಂತ ಕೆಳಗಿರುವವರು ಹಾಗೂ ಬಿಪಿಎಲ್ ಕಾರ್ಡ್ದಾರರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 87,000ಗಳಿಗಿಂತ ಕುಟುಂಬದ ವಾರ್ಷಿಕ ಆದಾಯವು ಹೆಚ್ಚಿರಬಾರದು. ಕನಿಷ್ಠ 5 ವರ್ಷಗಳಿಗಿಂತ ಹೆಚ್ಚಿನ ಕಾಲ ಬೆಂಗಳೂರಿನಲ್ಲಿ ಅರ್ಜಿದಾರರು ವಾಸವಿರಬೇಕು. ಎಲ್ಲಿಯೂ ಸಹ ಸ್ವಂತ ಮನೆ ಅರ್ಜಿದಾರರ ಹೆಸರಿನಲ್ಲಿ ಇರಬಾರದು.


ವಸತಿ ಯೋಜನೆಗೆ ಅಗತ್ಯವಿರುವ ದಾಖಲೆಗಳು :

ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಕೆಲವೊಂದು ಅಗತ್ಯದ ಕಲೆಗಳನ್ನು ಹೊಂದಿರಬೇಕು ಅವುಗಳೆಂದರೆ ವಾಸ ಸ್ಥಳ ಪ್ರಮಾಣ ಪತ್ರ ಬಿಪಿಎಲ್ ಪಡಿತರ ಚೀಟಿ ಆದಾಯ ಪ್ರಮಾಣ ಪತ್ರ ಪಾನ್ ಕಾರ್ಡ್ ಪಾಸ್ಪೋರ್ಟ್ ಸೈಜ್ ಫೋಟೋ ಬ್ಯಾಂಕ್ ಖಾತೆಯ ವಿವರಗಳು ಹೀಗೆ ಕೆಲವೊಂದು ಅಗತ್ಯ ದಾಖಲೆಗಳು ಹೊಂದಿರುವುದು ಮುಖ್ಯವಾಗಿರುತ್ತದೆ.

ಇದನ್ನು ಓದಿ : Amazon ವತಿಯಿಂದ ವಿದ್ಯಾರ್ಥಿ ವೇತನ : ಸುಮಾರು 50 ಸಾವಿರ ರೂಪಾಯಿ ಸಿಗುತ್ತೆ

ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

ರಾಜ್ಯ ಸರ್ಕಾರದ ಯೋಜನೆಯಾದ ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಮುಖ್ಯಮಂತ್ರಿ ಬಹು ಮಹಡಿ ವಸತಿ ಯೋಜನೆಯ ಅಧಿಕೃತ ವೆಬ್ಸೈಟ್ ಆದ https://ashraya.karnataka.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಮನೆಯನ್ನು ಯಾರೆಲ್ಲ ಖರೀದಿಸಲು ಯೋಚಿಸುತ್ತಿರುತ್ತಾರೋ ಅವರು ಸರ್ಕಾರದ ನೆರವಿನಿಂದ ಖರೀದಿಸಬಹುದಾಗಿದ್ದು ಸರ್ಕಾರದ ನೆರವಿನಿಂದ ಖರೀದಿಸುವವರಿಗೆ ರಿಯಾಯಿತಿ ದರದಲ್ಲಿ ಸರ್ಕಾರವು ಮನೆಯನ್ನು ನೀಡುತ್ತದೆ. ಅಲ್ಲದೆ ಸರ್ಕಾರಿ ಅನುದಾನವು ಹಾಗೂ ಮನೆಗೆ ಬೇಕಾದಂತಹ ಸಾಲ ಸೌಲಭ್ಯವನ್ನು ಸಹ ಸರ್ಕಾರವೇ ನೀಡುತ್ತದೆ. ಹಾಗಾಗಿ ಸ್ವಂತ ಮನೆಯನ್ನು ಹೊಂದುವ ಕನಸು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಹೊಂದಿದ್ದರೆ ಅವರಿಗೆ ಸರ್ಕಾರದಿಂದ ಸಹಾಯಧನ ಲಭ್ಯವಿದೆ ಎಂಬುದರ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...