ನಮಸ್ಕಾರ ಸ್ನೇಹಿತರೇ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ನಾಲ್ಕು ಗ್ಯಾರೆಂಟಿ ಯೋಜನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅದರಂತೆ ಗೃಹಜೋತಿ ಯೋಜನೆಯ ಮೂಲಕ ರಾಜ್ಯದ ಬಹುತೇಕ ಕುಟುಂಬಗಳು ಈಗ ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆದುಕೊಂಡಿದೆ ಆದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಸಹ ಸಾಕಷ್ಟು ಜನರಿಗೆ ಕರೆಂಟ್ ಬಿಲ್ ಬರಲು ಪ್ರಾರಂಭಿಸಿದೆ. ಇದಕ್ಕೆ ಕಾರಣ ಏನಿರಬಹುದು ಹಾಗೂ ಈ ಕರೆಂಟ್ ಬಿಲ್ ಬರದೇ ಇರಲು ಏನು ಮಾಡಬೇಕು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಮಿತವಾಗಿ ವಿದ್ಯುತ್ ಬಳಸಬೇಕು :
ನೀವೇನಾದರೂ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕಾದರೆ ಅಂದರೆ ಉಚಿತ ವಿದ್ಯುತ್ ಸೌಲಭ್ಯವನ್ನು ಅಥವಾ ಜೀರೋ ವಿದ್ಯುತ್ ನಿಮಗೆ ಬರಬೇಕಾದರೆ ನೀವು ವಿದ್ಯುತ್ತನ್ನು ಮಿತವಾಗಿ ಬಳಸಬೇಕು. ಅಲ್ಲದೆ ಅದಕ್ಕಾಗಿ ಕೆಲವೊಂದು ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾದರೆ ಮಿತ ವಿದ್ಯುತ್ತನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬುದರ ಬಗ್ಗೆ ನೋಡುವುದಾದರೆ,
ವಿದ್ಯುತ್ ಇಲ್ಲ ಬರದಂತೆ ನೋಡಿಕೊಳ್ಳಬೇಕು :
ಈಗಂತೂ ಚಳಿಗಾಲ ಆರಂಭವಾಗಿದ್ದು ವಿದ್ಯುತ್ ಬಿಲ್ ಇನ್ನು ಮುಂದೆ ಹೆಚ್ಚು ಬರುವ ಸಾಧ್ಯತೆ ಇರುತ್ತದೆ ಏಕೆಂದರೆ ಚಳಿಗಾಲದಲ್ಲಿ ನಾವು ಹೆಚ್ಚಾಗಿ ಗೀಸರ್ ಹೀಟರ್ ಮೊದಲಾದವುಗಳನ್ನು ಬಳಕೆ ಮಾಡುತ್ತೇವೆ ಹಾಗೂ ಈ ಉಪಕರಣಗಳಿಗೆ ಹೆಚ್ಚು ಯೂನಿಟ್ ವಿದ್ಯುತ್ ಬೇಕಾಗುತ್ತದೆ. ಹಾಗಾಗಿ ಕೆಲವು ಪ್ರಮುಖ ಬದಲಾವಣೆಗಳನ್ನು ನಿಮ್ಮ ಬಜೆಟ್ ಕೊಂಡಿರಿ ವಿದ್ಯುತ್ ಬಿಲ್ ಬಾರದಂತೆ ತಡೆಗಟ್ಟಲು ನೀವು ಮನೆಯಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ವಿದ್ಯೆ ನಿರೀಕ್ಷೆಗೂ ಮೀರಿ ನೀವು ಉಳಿತಾಯ ಮಾಡಬಹುದಾಗಿದೆ.
ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡುವುದು :
ಕೇವಲ ಟಿವಿಯನ್ನು ಮಾತ್ರ ರಿಮೋಟ್ ಮೂಲಕ ಬಳಸುವುದಲ್ಲದೆ ಫ್ಯಾನ್ ಎಸಿ ಮೊದಲಾದವಗಳಿಗೂ ಸಹ ನಾವು ಮಾಡಿಕೊಂಡಿರುತ್ತೇವೆ ಇದರಿಂದಾಗಿ ಬೇಡವಾದ ಸಮಯದಲ್ಲಿ ಆ ಉಪಕರಣಗಳನ್ನು ರಿಮೋಟ್ ಬಟನ್ ಒತ್ತುವುದರ ಮೂಲಕ ನಿಲ್ಲಿಸುತ್ತೇವೆ. ಆದರೆ ಸ್ಟ್ಯಾಂಡ್ ಬೈ ಮೋಡ್ ನಲ್ಲಿ ಹೀಗೆ ಉಪಕರಣ ಆಫ್ ಮಾಡಿದರೆ ಅದು ವಿದ್ಯುತ್ ಬಳಕೆ ಮಾಡಿಕೊಳ್ಳುತ್ತದೆ ಎನ್ನುವುದು ನಮಗೆ ಗೊತ್ತಿರುವುದಿಲ್ಲ ಹೌದು ಸ್ಟ್ಯಾಂಡ್ ಬೈ ಮೂಡ್ ನಲ್ಲಿ ನಾವೇನಾದರೂ ಉಪಕರಣಗಳನ್ನು ಆಫ್ ಮಾಡಿದರೆ ಅದು ವಿದ್ಯುತ್ ಬಳಕೆ ಮಾಡಿಕೊಳ್ಳುತ್ತದೆ ಹಾಗಾಗಿ ಆದರೂ ಯಾವುದೇ ಉಪಕರಣಗಳನ್ನು ಬೇಡ ಎನಿಸಿದರೆ ಆ ಉಪಕರಣಗಳನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡುವುದು, ಉತ್ತಮವಾಗಿದೆ ಇದರಿಂದ ನಿಮ್ಮ ವಿದ್ಯುತ್ ಬಿಲ್ ಸಹ ಕಡಿಮೆ ಬರುತ್ತದೆ.
ಫೈವ್ ಸ್ಟಾರ್ ರೇಟಿಂಗ್ ಉಪಕರಣಗಳನ್ನು ಖರೀದಿ ಮಾಡಿದರೆ :
ಹೆಚ್ಚಾಗಿ ನಾವು ಗೃಹ ಉಪಯೋಗಿ ಉಪಕರಣಗಳನ್ನು ಸ್ಟಾರ್ ರೇಟಿಂಗ್ ಮೇಲೆ ತೆಗೆದುಕೊಳ್ಳುತ್ತೇವೆ ಅಂದರೆ ಯಾವುದೇ ಗೃಹ ಉಪಯೋಗಿ ಉಪಕರಣಗಳಾದ ಮನೆಗೆ ಫ್ರಿಜ್ ವಾಷಿಂಗ್ ಮಷೀನ್ ಎಸಿ ಹೀಗೆ ಈ ರೀತಿಯ ಉಪಕರಣಗಳನ್ನು ನಾವು ಸ್ಟಾರ್ ರೇಟಿಂಗ್ ಆಧಾರದ ಮೇಲೆ ಖರೀದಿ ಮಾಡುವಾಗ ಅದರ ಸ್ಟಾರ್ ರೇಟಿಂಗ್ ಎಷ್ಟಿದೆ ಎಂಬುದನ್ನು ನೋಡಬೇಕು. ನೀವು ಗೃಹ ಉಪಯೋಗಿ ಉಪಕರಣಗಳು ಹೆಚ್ಚು ಸ್ಟಾರ್ ರೇಟಿಂಗ್ ಅನ್ನು ಹೊಂದಿದ್ದರೆ ಆ ಉಪಕರಣದ ದಕ್ಷತೆಯು ಸಹ ಹೆಚ್ಚಿರುತ್ತದೆ. ಇದರಿಂದ ನೀವು ಹೆಚ್ಚಿನ ವಿದ್ಯುತ್ತನ್ನು ಬಳಕೆ ಮಾಡಬೇಕಾಗುತ್ತದೆ ಆದ್ದರಿಂದ ನೀವೇನಾದರೂ ಸ್ಟಾರ್ ರೇಟಿಂಗ್ ಉಪಕರಣಗಳನ್ನು ಖರೀದಿ ಮಾಡಿದರೆ ನಾಲ್ಕು ಐದು ಸ್ಟಾರ್ ರೇಟಿಂಗ್ ಉಪಕರಣಗಳು ನಿಮಗೆ ತುಸುದುಬಾರಿ ಎನಿಸಿದರು ಕೂಡ ಅದು ಬಳಸುವಂತಹ ವಿದ್ಯುತ್ ಬಹಳ ಕಡಿಮೆ ಇರುತ್ತದೆ. ಹಾಗಾಗಿ ತಿಂಗಳಲ್ಲಿ ಬರುವಂತಹ ವಿದ್ಯುತ್ ಬಿಲ್ ಕೂಡ ಕಡಿಮೆ ಇರುತ್ತದೆ.
ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಕ್ಯಾಶ್ ಬ್ಯಾಕ್ ಯೋಜನೆ : ಹೆಚ್ಚಿನ ಮಾಹಿತಿಗಾಗಿ ಓದಿ
ಅನಗತ್ಯ ಸಂದರ್ಭದಲ್ಲಿ ಲೈಟ್ ಫ್ಯಾನ್ ಆಫ್ ಮಾಡುವುದು :
ಸಾಮಾನ್ಯವಾಗಿ ನಾವೆಲ್ಲರೂ ಸಹ ಹಗಲಿನ ಸಮಯದಲ್ಲಿಯೂ ಹೆಚ್ಚಾಗಿ ಫ್ಯಾನ್ ಹಾಗೂ ಲೇಟ್ಗಳನ್ನು ಬಳಕೆ ಮಾಡುತ್ತೇವೆ. ಆದಷ್ಟು ನಾವು ನಮ್ಮ ಮನೆಯ ಕಿಟಕಿ ತೆರೆದಿದ್ದರೆ ನಮಗೆ ಗಾಳಿ ಬೆಳಕು ಒಳಗೆ ಬರುತ್ತದೆ ಇದರಿಂದ ನಾವು ಹೆಚ್ಚು ನೈಸರ್ಗಿಕ ಗಾಳಿ ಬೆಳಕನ್ನು ಪಡೆದುಕೊಳ್ಳಬಹುದಾಗಿತ್ತು ವಿದ್ಯುತ್ ಬಿಲ್ಲನ್ನು ಸಹ ಉಳಿತಾಯ ಮಾಡಬಹುದಾಗಿದೆ. ಇದಷ್ಟೇ ಅಲ್ಲದೆ ಫ್ಯಾನ್ ಹಾಗೂ ಲೈಫ್ ನಂತಹ ಉಪಕರಣಗಳು ನಾವು ಯಾವುದೇ ಸಂದರ್ಭದಲ್ಲಿ ರೂಮ್ ನಿಂದ ಹೊರಗೆ ಹೋಗಬೇಕಾದರೆ ಉರಿಯುತ್ತಿದ್ದರೆ ಅದನ್ನು ಮರೆಯದೆ ಸ್ವಿಚ್ ಆಫ್ ಮಾಡುವುದರ ಮೂಲಕ ವಿದ್ಯುತ್ ಬಿಲ್ಲನ್ನು ಉಳಿಸಬಹುದಾಗಿದೆ. ಏನಾದರೂ ನಿರ್ಲಕ್ಷವಹಿಸಿ ಹಾಗೆ ಬಿಟ್ಟು ಬಂದರೆ ಸಹಜವಾಗಿ ನಮ್ಮ ವಿದ್ಯುತ್ ಬಿಲ್ ಸಹ ಹೆಚ್ಚು ಬರುತ್ತದೆ.
ಎಲ್ಇಡಿ ಬಲ್ಬ್ ಬಳಸುವುದು :
ಇನ್ನು ಹಳೆಯ ಕಾಲದ ಬಲ್ಬ್ಗಳನ್ನು ಬಳಸುತ್ತಿದ್ದರೆ ಅಂತಹ ಬಲ್ಪ್ ಗಳನ್ನು ತಕ್ಷಣವೇ ಚೇಂಜ್ ಮಾಡಿ ಎಲ್ಇಡಿ ಬಲ್ಬ್ ಗಳನ್ನು ಬಳಸಿ ಇದರಿಂದ ವೋಲ್ಟೇಜ್ ಕಡಿಮೆ ಇರುತ್ತದೆ ಹಾಗೂ ಆ ಬೆಳಕು ಹೆಚ್ಚು ಪ್ರಕಾಶಮಾನವಾಗಿರುತ್ತದೆ. ವಿದ್ಯುತ್ ಬಿಲ್ ಸಹ ಎಲ್ಇಡಿ ಬಲ್ಬ್ ಬಳಸುವುದರಿಂದ ಕಡಿಮೆ ಬರುತ್ತದೆ.
ಹೀಗೆ ನೀವು ವರಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಸಹ ನಿಮ್ಮ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದ್ದರೆ ಎಲ್ಲಾ ಕಾರಣಗಳು ಇರುವುದರಿಂದ ಇವುಗಳ ಬಗ್ಗೆ ಗಮನವಹಿಸಿ ಸಣ್ಣ ಸಣ್ಣ ಬದಲಾವಣೆಗಳನ್ನು ಮನೆಯಲ್ಲಿ ಮಾಡುವುದರ ಮೂಲಕ ನಿಮ್ಮ ತಿಂಗಳ ವಿದ್ಯುತ್ ಬಿಲ್ಲನ್ನು ಸಾಕಷ್ಟು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಈ ಅಭ್ಯಾಸಗಳನ್ನು ಪ್ರತಿ ತಿಂಗಳು ನೀವು ಮಾಡುತ್ತಾ ಹೋದರೆ ಸುಮಾರು 80% ಗಿಂತಲೂ ಹೆಚ್ಚಿನ ವಿದ್ಯುತ್ ಉಳಿತಾಯ ಮಾಡಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರೆಲ್ಲರಿಗೂ ಶೇರ್ ಮಾಡುವುದರ ಮೂಲಕ ವಿದ್ಯುತ್ ಬಿಲ್ ಹೆಚ್ಚು ಏಕೆ ಬರುತ್ತಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ರೈತರಿಗೆ ಗುಡ್ ನ್ಯೂಸ್ : ಈ ಹೊಸ ಯೋಜನೆಯಲ್ಲಿ ರೈತರಿಗೆ ಹಣ ಸಿಗುತ್ತದೆ
ಟ್ರೂ ಕಾಲರ್ ಬಳಸುವವರು ತಪ್ಪದೆ ನೋಡಿ : ಕಾದಿದೆ ಶಾಕ್ ನಿಮ್ಮಗಾಗಿ