ನಮಸ್ಕಾರ ಸ್ನೇಹಿತರೆ ಸರ್ಕಾರಗಳು ಪಡಿತರ ಚೀಟಿಗಳನ್ನು ವಿತರಣೆ ಮಾಡಿದ್ದು ಆಯಾ ವರ್ಗದ ಜನತೆಗೆ ಮೂರು ವಿಭಾಗಗಳಾಗಿ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗಿದೆ ಅವುಗಳೆಂದರೆ ಅಂತಿಯೋದಯ ಕಾರ್ಡ್ ಬಿಪಿಎಲ್ ಕಾರ್ಡ್ ಹಾಗೂ ಎಪಿಎಲ್ ಕಾರ್ಡ್. ಆದರೆ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿನವರು ಹೊಂದಿರುವುದಕ್ಕಿಂತಲೂ ಉಳ್ಳವರು ಈ ಪಡಿತರ ಕಾರ್ಡ್ ಅನ್ನು ಹೊಂದಿರುವುದೇ ಹೆಚ್ಚಾಗಿರುವ ಕಾರಣ ಇದರ ವಿರುದ್ಧ ಸರ್ಕಾರವು ಗಂಭೀರ ಕ್ರಮವನ್ನು ಕೈಗೊಳ್ಳಲು ನಿರ್ಧರಿಸಿದೆ.
ಸರ್ಕಾರದ ಮಾನದಂಡಗಳು :
ಸರ್ಕಾರದಿಂದ ಪಡಿತರ ಚೀಟಿ ಇರುವವರು ಉಚಿತಪಡಿತರ ವಸ್ತುಗಳನ್ನು ಪಡೆದುಕೊಳ್ಳಬಹುದು ಅದರ ಜೊತೆಗೆ ಸರ್ಕಾರವು ಜಾರಿಗೊಳಿಸುವಂತಹ ಹಲವು ಯೋಜನೆಗಳ ಸೌಲಭ್ಯಗಳನ್ನು ಕೂಡ ಸುಲಭವಾಗಿ ತಮ್ಮದಾಗಿಸಿಕೊಳ್ಳಬಹುದಾಗಿದೆ. ಆದರೆ ಪಡಿತರ ನಿಜವಾಗಿ ಯಾರಿಗೆ ಸಲ್ಲಬೇಕು ಎಂಬುದರ ಬಗ್ಗೆ ಸರ್ಕಾರವು ಕೆಲವೊಂದು ಮಾನದಂಡಗಳನ್ನು ನಿಗದಿಪಡಿಸಿದ್ದು ಈ ಮಾನದಂಡ ಒಳಗೆ ಬರದವರೇ ಪಡಿತರ ಚೀಟಿ ಹೆಚ್ಚಾಗಿ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಈ ನಿಟ್ಟಿನಲ್ಲಿ ಸರ್ಕಾರವು ಡಿಸೆಂಬರ್ 31 2023ರ ಒಳಗೆ ಅನರ್ಹರು ತಮ್ಮ ಪಡಿತರ ಚೀಟಿಯನ್ನು ಆಹಾರ ಇಲಾಖೆಗೆ ಹಿಂದಿರುಗಿಸಬೇಕೆಂಬ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದೆ. ಇಲ್ಲದಿದ್ದರೆ ಅವರ ವಿರುದ್ಧ ಸರ್ಕಾರವು ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಣೆ ಮಾಡಿದೆ.
ಇದನ್ನು ಓದಿ : 2024ರಲ್ಲಿ ಯಾವ ರಾಶಿಯವರಿಗೆ ಶುಭ ..? ಯಾರಿಗೆ ಅಶುಭ ನೋಡಿ
ಅನರ್ಹರು ಪಡಿತರ ಚೀಟಿಯನ್ನು ಎಲ್ಲಿ ನೀಡಬೇಕು :
ಪಡಿತರ ಚೀಟಿಯ ಅಗತ್ಯ ಯಾರಿಗೆ ಇಲ್ಲವೋ ಪಡಿತರದ ಬದಲಾಗಿ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಕೇವಲ ಅವರು ಪಡೆದುಕೊಳ್ಳುತ್ತಿದ್ದಾರೋ ಸ್ವಯಂ ಪ್ರೇರಿತವಾಗಿ ಅಂತವರು ತಮ್ಮ ಪಡಿತರ ಕಾರ್ಡುಗಳನ್ನು ತಕ್ಷಣವೇ ಸೆರೆಂಡರ್ ಮಾಡಬೇಕಾಗುತ್ತದೆ. ಪಡಿತರ ಕಾರ್ಡನ್ನು ಬ್ಲಾಕ್ ಪೂರೈಕೆ ಅಧಿಕಾರಿ ಮಾರುಕಟ್ಟೆ ಅಧಿಕಾರಿ ಜಿಲ್ಲಾ ಸರಬರಾಜು ಕಚೇರಿ ರಾಂಚಿ ಇಲ್ಲಿಗೆ ಅನರ್ಹರು ಹಿಂತಿರುಗಿಸಬೇಕೆಂದು ತಿಳಿಸಲಾಗಿದೆ. ಕೇವಲ ರಂಚಿ ಮಾತ್ರವಲ್ಲದೆ ಅನರ್ಹರು ಕರ್ನಾಟಕ ರಾಜ್ಯದಲ್ಲಿಯೂ ಕೂಡ ಸಾಕಷ್ಟು ಜನರು ಪಡಿತರ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವುದರಿಂದ ವಿರುದ್ಧ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಹೀಗೆ ರಾಜ್ಯ ಸರ್ಕಾರವು ಅನರ್ಹರು ಪಡಿತರ ಚೀಟಿಯನ್ನು ಹೊಂದಿದ್ದರೆ ತಕ್ಷಣವೇ ಸೆರೆಂಡರ್ ಮಾಡಬೇಕೆಂದು ರಾಜ್ಯದ ಜನತೆಗೆ ತಿಳಿಸಿದ್ದು ಇಲ್ಲದಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂಬ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಅಂಚೆ ಇಲಾಖೆಯಲ್ಲಿ SSLC ಆದವರಿಗೆ ಉದ್ಯೋಗ : ಸಂಬಳ 63,000 ಸಿಗುತ್ತೆ, ನಿಮ್ಮ ಊರಿನಲ್ಲಿ ಕೆಲಸ
- ಅನುಶ್ರೀ 35 ವರ್ಷ ಆದರೂ ಮದುವೆಯಾಗದೆ ಇರಲು ಕಾರಣ? ಕೊನೆಗೂ ಸತ್ಯ ಬಾಯಿ ಬಿಟ್ಟರು