ನಮಸ್ಕಾರ ಸ್ನೇಹಿತರೆ ಚಿನ್ನದ ಬೆಲೆ ಭಾರೀ ಪ್ರೀತಿ ಭಾರತೀಯರಲ್ಲಿ ಇದೆ. ಅದೇ ರೀತಿ ಭಾರತೀಯರು ಮದುವೆಗಳಷ್ಟೇ ಅಲ್ಲದೆ ಹಬ್ಬದ ದಿನಗಳಲ್ಲಿ ಕೂಡ ಚಿನ್ನಭರಣವನ್ನು ಖರೀದಿಸುತ್ತಾರೆ. ಇದೀಗ ಹಬ್ಬದ ಸೀಸನ್ ಮುಗಿದಿದ್ದು ಮದುವೆ ಸೀಸನ್ ಆರಂಭವಾಗಿದೆ ಎಂದು ಹೇಳಬಹುದು ಅದೇ ರೀತಿ ಚಿನ್ನವನ್ನು ಮದುವೆಗೆ ಖರೀದಿ ಮಾಡಲು ಯೋಚಿಸುತ್ತಿದ್ದರೆ ಅದಕ್ಕೂ ಮೊದಲು ಈ ಕೆಲವೊಂದು ಸಲಹೆಗಳನ್ನು ತಿಳಿದುಕೊಳ್ಳುವುದು ಉತ್ತಮ.
ಚಿನ್ನ ಖರೀದಿ ಮಾಡಲು ಉತ್ತಮ ಟಿಪ್ಸ್ :
ಹಬ್ಬದ ಸೀಸನ್ ದೀಪಾವಳಿಯೊಂದಿಗೆ ಮುಗಿದಿದ್ದು ಇದೀಗ ಮದುವೆ ಸೀಸನ್ ಆರಂಭವಾಗಿದೆ, ಮದುವೆ ಸೀಸನ್ ಏಪ್ರಿಲ್ ವರೆಗೂ ಮುಂದುವರೆಯಲಿದ್ದು ಒಂದು ಅಂದಾಜಿನ ಪ್ರಕಾರ ಸುಮಾರು 40 ಲಕ್ಷ ಮದುವೆಗಳು ಈ ಋತುವಿನಲ್ಲಿ ದೇಶದಾದ್ಯಂತ ನಡೆಯುತ್ತವೆ ಎಂದು ತಿಳಿಸಲಾಗಿದೆ. ಈ ಮದುವೆಯ ಸಂದರ್ಭದಲ್ಲಿ ಸಾಕಷ್ಟು ಚಿನ್ನ ಮಾರಾಟವಾಗಲಿದ್ದು, ಮದುವೆಗಳಲ್ಲಿ ಚಿನ್ನ ಖರೀದಿ ಮಾಡುವುದು ಮುಖ್ಯ ಖರೀದಿಯಾಗಿದೆ ಅದರಲ್ಲಿಯೂ ಚಿನ್ನವೆಂದರೆ ಭಾರತೀಯರಿಗೆ ಭಾರಿ ವ್ಯಾಮೋಹ.
ಆದ್ದರಿಂದ ಮದುವೆಗಳನ್ನು ಚಿನ್ನವಿಲ್ಲದೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಈ ಮದುವೆಯ ಸೀಸನ್ ಗಳಲ್ಲಿ ನೀವೇನಾದರೂ ಚಿನ್ನವನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ಅದಕ್ಕೂ ಮೊದಲು ಕೆಲವೊಂದು ಟಿಪ್ಸ್ ಗಳನ್ನು ತಿಳಿಯುವುದು ಮುಖ್ಯವಾಗಿರುತ್ತದೆ ಇದರಿಂದ ಉತ್ತಮ ಚಿನ್ನದ ಆಭರಣವನ್ನು ಉತ್ತಮ ದರದಲ್ಲಿ ಖರೀದಿಸಲು ಅನುಕೂಲವಾಗುತ್ತದೆ.
ಹೇಗೆ ಚಿನ್ನದ ಶುದ್ಧತೆಯನ್ನು ನಿರ್ಧರಿಸುವುದು :
ಕ್ಯಾರೆಟ್ ನಲ್ಲಿ ಚಿನ್ನದ ಶುದ್ಧತೆಯನ್ನು ಅಳೆಯಲಾಗುತ್ತದೆ ಶುದ್ಧ ಚಿನ್ನ 24 ಕ್ಯಾರೆಕ್ಟರ್ ಆಗಿರುತ್ತದೆ ಆದರೆ ಚಿನ್ನವು ಬೃದುಲೋಹ ಆಗಿರುವ ಕಾರಣ 24 ಕ್ಯಾರೆಟ್ ಚಿನ್ನದಿಂದ ಆಭರಣವನ್ನು ತಯಾರಿಸಲು ಸಾಧ್ಯವಿಲ್ಲ 22 ಕ್ಯಾರೆಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದಲ್ಲದೆ ಸಾಕಷ್ಟು ಜನರು 20 18 ಮತ್ತು 14 ಕ್ಯಾರೆಟ್ ಚಿನ್ನವನ್ನು ಬಳಸಲು ಯೋಚಿಸುತ್ತಾರೆ. ಚಿನ್ನದ ದರವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ಕ್ಯಾರೆಟ್ ವಹಿಸುತ್ತದೆ. ಕ್ಯಾರೆಟ್ ಕಡಿಮೆಯಾದಂತೆಲ್ಲ ಬೆಲೆ ಕೂಡ ಕಡಿಮೆಯಾಗುತ್ತದೆ.
ಇದನ್ನು : ಓದಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ : ಕೂಡಲೇ ಪಡೆದುಕೊಳ್ಳಿ ಪ್ರಯೋಜನ
ಕ್ಯಾರೆಟ್ ಗೆ ಸಂಬಂಧಿಸಿದಂತೆ ಚಿನ್ನದ ಬೆಲೆ :
ಚಿನ್ನದ ಬೆಲೆಗೆ ಕಬ್ಬನ ಕೊಡುವುದು ಬಹಳ ಮುಖ್ಯವಾಗಿದ್ದು 24 ಕ್ಯಾರೆಟ್ ಚಿನ್ನದ 10 ಗ್ರಾಂ ನ ಬೆಲೆಯು ಡಿಸೆಂಬರ್ 3 ಭಾನುವಾರದಂದು ಅರವತ್ತು ಮೂರು ಸಾವಿರದ ಏಳುನೂರ ಅರವತ್ತು ರೂಪಾಯಿಗಳು ಅದೇ ಸಮಯದಲ್ಲಿ 22 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆಯು 58450ಗಳು. ಮತ್ತು 10 ಗ್ರಾಂ ಗೆ 18 ಕ್ಯಾರೆಟ್ ನ ಚಿನ್ನದ ಬೆಲೆಯು 42820 ರೂಪಾಯಿಗಳು. ಹೀಗೆ ಕ್ಯಾರೆಟ್ ಬದಲಿಸಿದ ಮಾತ್ರಕ್ಕೆ ಚಿನ್ನದ ಬೆಲೆಯು ಖುಸಿಯುತ್ತದೆ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ ಆದ್ದರಿಂದ ಆಭರಣಗಳನ್ನು ಖರೀದಿಸುವ ದಿನದ ದರವನ್ನು ನೀವು ಗಮನಿಸುವುದು ಮುಖ್ಯವಾಗಿರುತ್ತದೆ. ಪ್ರತಿ ದಿನ ಚಿನ್ನದ ಬೆಲೆಯಲ್ಲಿ ಏರಿಳಿತಗೊಳ್ಳುತ್ತದೆ ಹಾಗಾಗಿ 22 ಕ್ಯಾರೆಟ್ ಆಭರಣಗಳಿಗೆ ನೀವು 24 ಕ್ಯಾರೆಟ್ ದರವನ್ನು ಪಾವತಿಸುವ ಅಗತ್ಯವಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿರುತ್ತದೆ.
ಹೀಗೆ ಚಿನ್ನವನ್ನು ಖರೀದಿ ಮಾಡಲು ಸಾಕಷ್ಟು ಮಾರ್ಗಗಳಿದ್ದು ಇವುಗಳಿಗೆ ಸಂಬಂಧಿಸಿದಂತೆ ಆಭರಣವನ್ನು ಮೊದಲು ತೂಕವನ್ನು ಲೆಕ್ಕ ಮಾಡುತ್ತಾರೆ ನಂತರ ಚಿನ್ನದ ದರ ಬೆಲೆಯೊಂದಿಗೆ ಅಂತಿಮ ಬೆಲೆಯನ್ನು ಜಿ ಎಸ್ ಟಿ ಮಾರ್ಕೆಟಿಂಗ್ ಚಾರ್ಜ್ ಸೇರಿಸಿ ಹೇಳಲಾಗುತ್ತದೆ. ಮೂರರಷ್ಟು ಜಿಎಸ್ಟಿ ಅನ್ನು ಆಭರಣಗಳ ಮೇಲೆ ಅನ್ವಯಿಸಲಾಗಿದ್ದು ಬಹಳಷ್ಟೂ ಹಣವನ್ನು ಎಚ್ಚರಿಕೆವಹಿಸಿ ಆಭರಣವನ್ನು ಖರೀದಿಸುವ ಸಂದರ್ಭದಲ್ಲಿ ಉಳಿಸಬಹುದಾಗಿದೆ. ಏಕೆಂದರೆ ಮೇಕಿಂಗ್ ಚಾರ್ಜ್ ಪ್ರತಿ ಆಭರಣ ವ್ಯಾಪಾರಿಯ ಬಳಿ ವಿಭಿನ್ನವಾಗಿರುತ್ತದೆ. ಹಾಗಾಗಿ ಚಿನ್ನ ಖರೀದಿ ಮಾಡುವವರು ಕೆಲವೊಂದು ಸಲಹೆಗಳನ್ನು ತಿಳಿದು ಮಾಡುವುದು ಮುಖ್ಯವಾಗಿರುತ್ತದೆ. ಹಾಗಾಗಿ ಚಿನ್ನ ಖರೀದಿ ಮಾಡುವವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಹಣ ಬರದೆ ಇರುವವರಿಗೆ ,ಕೇವಲ 3 ದಿನದಲ್ಲಿ ಮನೆ ಬಾಗಿಲಿಗೆ ಬರುತ್ತೆ ಹಣ ನೋಡಿ
- ಗ್ಯಾರಂಟಿ 8000 ರೂ ವಿದ್ಯಾರ್ಥಿವೇತನ ಸಿಗುತ್ತೆ ,ಈ ದಾಖಲೆ ಬೇಕು ನೋಡಿ
- ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು