ನಮಸ್ಕಾರ ಸ್ನೇಹಿತರೇ 2024ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರವು ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬಾರಿ ಕಡಿತ ಮಾಡಲು ಹೊರಟಿದೆ. ಅಂದರೆ ರೂ.10ವರೆಗೆ ಪ್ರತಿ ಲೀಟರ್ಗೆ ಕಡಿತ ಮಾಡಬಹುದೆಂದು ಕೆಲವೊಂದು ವರದಿಗಳು ತಿಳಿಸಿದೆ ಇದರಿಂದಾಗಿ ಜನಸಾಮಾನ್ಯರಿಗೆ ಬಿಗ್ ರಿಲೀಫ್ ನೀಡಿದಂತಾಗುತ್ತದೆ.
ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ :
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತ ಮಾಡಲು ಕೇಂದ್ರ ಸರ್ಕಾರ ಯೋಚಿಸುತ್ತಿದ್ದು ಕೆಲವೊಂದು ಮಾಧ್ಯಮಗಳ ವರದಿ ಪ್ರಕಾರ ಲೋಕಸಭೆ ಚುನಾವಣೆಯು 2024ರಲ್ಲಿ ನಡೆಯುತ್ತಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಜನಸಾಮಾನ್ಯರಿಗೆ ಸರ್ಕಾರವು ಬಿಗ್ ರಿಲೀಫ್ ನೀಡಲು ಮುಂದಾಗಿದೆ. ಪ್ರತಿ ಲೀಟರ್ ಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸರ್ಕಾರವು 8 ರಿಂದ 10 ರೂಪಾಯಿ ಕಡಿತ ಮಾಡಲು ಘೋಷಣೆ ಹೊರಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇಂದಿನ ಬೆಲೆ ಇಳಿಕೆಯ ಪ್ರಕಟಣೆ ಹೊಸ ವರ್ಷದ ಆರಂಭದಲ್ಲೇ ಮಾಡಬಹುದು ಎಂಬ ನಿರೀಕ್ಷೆ ಇದೆ. ಪೆಟ್ರೋಲಿಯಂ ಸಚಿವಾಲಯ ಪ್ರತಿ ಲೀಟರ್ಗೆ ಇಂಧನ ಬೆಲೆಯಲ್ಲಿ 8 ರಿಂದ 10 ರೂಪಾಯಿಗಳಷ್ಟು ಕಡಿತ ಮಾಡುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು ಇದೀಗ ಪ್ರಧಾನಿ ಅವರ ಅನುಮೋದನೆಗಾಗಿ ಈ ಪ್ರಸ್ತಾವನೆ ಕಾಯುತ್ತಿದೆ ಎಂದು ಕೆಲವೊಂದು ಮೂಲಗಳು ತಿಳಿಸಿವೆ.
ಸರ್ಕಾರಿ ತೈಲ ಕಂಪನಿಗಳು ಭರ್ಜರಿ ಲಾಭಗಳಿಸಿವೆ :
ಸರ್ಕಾರಿ ತೈಲ ಕಂಪನಿಗಳಿಂದ 2022ರ ಏಪ್ರಿಲ್ ಆರರಿಂದ ಇಂಧನದ ಪೂರ್ವ ಸಂಸ್ಕಾರಣ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಚ್ಚಾ ತೈಲಬೆಲೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಇಳಿಕೆಯಾದ ಕಾರಣ 3 ಸರ್ಕಾರಿ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಪಾರ್ಕ್ ಭಾರತ್ ಪೆಟ್ರೋಲಿಯಂ ಕಾರ್ಕ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಹೆಚ್ಚಿನ ಲಾಭಗಳಿಸಿವೆ. ಐ ಓ ಸಿ , ಬಿಪಿಸಿಎಲ್ ಮತ್ತು ಎಚ್ ಪಿ ಸಿ ಎಲ್ ಜಂಟಿಯಾಗಿ 58198 ಕೋಟಿ ರೂಪಾಯಿಗಳು ಲಾಭವನ್ನು ಈ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಗಳಿಸಿವೆ.
ಇದನ್ನು ಓದಿ : ಮೋದಿ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ : ಕೂಡಲೇ ಪಡೆದುಕೊಳ್ಳಿ ಪ್ರಯೋಜನ
ಪ್ರಸ್ತುತ ಪೆಟ್ರೋಲ್ ಬೆಲೆ :
ಪ್ರಸ್ತುತ ಪೆಟ್ರೋಲ್ ಬೆಲೆಯನ್ನು ನೋಡುವುದಾದರೆ 96.72 ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 109.34 ರಾಜಸ್ಥಾನದಲ್ಲಿ 97.31 ಹರಿಯಾಣದಲ್ಲಿ 97.05 ಯುಪಿಯಲ್ಲಿ ಹಾಗೂ 98.45 ಪಂಜಾಬ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ನಿಗದಿಪಡಿಸಲಾಗಿದೆ. ಅದೇ ರೀತಿ ಡೀಸೆಲ್ ಬೆಲೆಯನ್ನು ನೋಡುವುದಾದರೆ 89.62 ರೂಪಾಯಿ ದೆಹಲಿಯಲ್ಲಿ 90.16 ಯುಪಿಯಲ್ಲಿ 88.57 ಪಂಜಾಬ್ ನಲ್ಲಿ ಹಾಗೂ 90.16 ಹರಿಯಾಣದಲ್ಲಿ ಪ್ರಸ್ತುತ ಡೀಸೆಲ್ ಬೆಲೆಯನ್ನು ನೋಡಬಹುದಾಗಿದೆ.
ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೆಲವೊಂದು ಮೂಲಗಳು ತಿಳಿಸುತ್ತಿದ್ದು ಈ ರೀತಿ ಇವುಗಳ ಬೆಲೆಯಲ್ಲಿ ಇಳಿಕೆಯಾದರೆ ಜನಸಾಮಾನ್ಯರು ಹೆಚ್ಚು ಖುಷಿ ಪಡುತ್ತಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಬಹುದು ಎಂಬ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಹಣ ಬರದೆ ಇರುವವರಿಗೆ ,ಕೇವಲ 3 ದಿನದಲ್ಲಿ ಮನೆ ಬಾಗಿಲಿಗೆ ಬರುತ್ತೆ ಹಣ ನೋಡಿ
- ಗ್ಯಾರಂಟಿ 8000 ರೂ ವಿದ್ಯಾರ್ಥಿವೇತನ ಸಿಗುತ್ತೆ ,ಈ ದಾಖಲೆ ಬೇಕು ನೋಡಿ
- ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು