ನಮಸ್ಕಾರ ಸ್ನೇಹಿತರೆ ಎರಡೇ ದಿನಗಳು ಮಾತ್ರ ಇನ್ನೇನು ಹೊಸ ವರ್ಷಕ್ಕೆ ಬಾಕಿ ಉಳಿದಿದ್ದು ಈ ಹಿನ್ನೆಲೆಯಲ್ಲಿ ಡಿಸೆಂಬರ್ 30 31 ಮತ್ತು ಜನವರಿ ಒಂದರವರಿಗೆ ಮೂರು ದಿನಗಳ ಕಾಲ ಬೆಂಗಳೂರು ಗ್ರಾಮಾಂತರ ಪೊಲೀಸರು ಅಲರ್ಟ್ ಆಗಿದ್ದು ಸಾರ್ವಜನಿಕರಿಗೆ ಬೆಟ್ಟಗಳ ಪ್ರವೇಶಕ್ಕೆ ನಿರ್ಬಂಧವನ್ನು ವಿಧಿಸಲಾಗಿದೆ. ಹಾಗಾಗಿ ಈ ಮೂರು ದಿನಗಳ ಕಾಲ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ಬೆಟ್ಟಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ಪೊಲೀಸರ ಹದ್ದಿನ ಕಣ್ಣು :
ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶಿವಗಂಗೆ ಕುಂತಿ ಬೆಟ್ಟ ಸಿದ್ದರಾಮಯ್ಯ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣು ಇಡಲಾಗಿದ್ದು ಈ ಬೆಟ್ಟಗಳಿಗೆ ರಾತ್ರಿ ಸಾರ್ವಜನಿಕರಿಗೆ ಪ್ರವೇಶ ಇಲ್ಲದಂತೆ ತೀರ್ಮಾನ ಕೈಗೊಳ್ಳಲಾಗಿದೆ. ಪಾರ್ಟಿ ಡ್ಯಾನ್ಸ್ ಡಿಜೆ ಡ್ಯಾನ್ಸ್ ಮೇಲೆ ನಗರದ ಹೊರಗಡೆ ನಡೆಯುತ್ತಿದ್ದು ಇವುಗಳ ಮೇಲೆ ನಿಗಾ ಇಡಲು ಮುಂದಾಗಿದ್ದು ನಂದಿ ಹಿಲ್ಸ್ ರಸ್ತೆಯಲ್ಲಿ ಪರಿಶೀಲನೆ ಮಾಡಲಾಗುತ್ತದೆ.
ಸಾರ್ವಜನಿಕರಿಗೆ ಬೆಟ್ಟಗಳ ಪ್ರವೇಶಕ್ಕೆ ಡಿಸೆಂಬರ್ 30 31 ಮತ್ತು ಜನವರಿ ಒಂದರವರಿಗೆ ಮೂರು ದಿನಗಳ ಕಾಲ ನಿರ್ಬಂಧ ಹೇರಲಾಗಿದ್ದು ಈ ಮೂರು ದಿನ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೆಟ್ಟಗಳಿಗೆ ಪ್ರವೇಶವಿರುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಮೋದಿ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ : ಕೂಡಲೇ ಪಡೆದುಕೊಳ್ಳಿ ಪ್ರಯೋಜನ
ಕಟ್ಟುನಿಟ್ಟಿನ ಕ್ರಮ :
ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎಂಜಿ ರೋಡ್ ಚರ್ಚಿ ಸ್ಟ್ರೀಟ್ ಪ್ರೆಸಿಡೆನ್ಸಿ ರೋಡ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಹೊಸ ವರ್ಷದ ಪಾರ್ಟಿ ಮಾಡಲು ಸಾಕಷ್ಟು ಜನರು ಬರುತ್ತಾರೆ ಹೀಗಾಗಿ ಪೊಲೀಸರು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಹೊಸ ವರ್ಷದ ಸಂದರ್ಭದಲ್ಲಿ ನಡೆದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು ರಾತ್ರಿ ಒಂದು ಗಂಟೆಗೆ ಎಲ್ಲಾ ಪಾರ್ಟಿಗಳು ಬಂದ್ ಆಗಬೇಕೆಂದು ತಿಳಿಸಲಾಗಿದೆ.
ರಾತ್ರಿ ಒಂದು ಗಂಟೆಯವರೆಗೆ ಮಾತ್ರ ಹೋಟೆಲ್ ಪಬ್ ಕ್ಲಬ್ ಸೇರಿದಂತೆ ಎಲ್ಲಾ ಪಾರ್ಟಿಗೂ ಅವಕಾಶ ನೀಡಲಾಗಿದ್ದು ಗ್ರಾಹಕರು ಹೊಸ ವರ್ಷದ ಸಂಭ್ರಮಾಚರಣೆಗೆ ಬರುವಾಗ ಆಧಾರ್ ಕಾರ್ಡ್ ಅಡ್ರಸ್ ಪ್ರೂಫ್ ಪಡೆದು ಪಾಸ್ ನೀಡಲು ರೆಸ್ಟೋರೆಂಟ್ ಪಬ್ ಕ್ಲಬ್ ಮಾಲೀಕರು ಮುಂದಾಗಿದ್ದಾರೆ. ಹಾಗೆಯೇ ಬೆಂಗಳೂರಿನ ಅತ್ಯಂತ 6000ಕ್ಕೂ ಅಧಿಕ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದ್ದು ಸುರಕ್ಷತೆಗಾಗಿ ಡ್ರೋನ್ ಕ್ಯಾಮರವನ್ನು ಸಹ ಅಳವಡಿಸಲಾಗಿದೆ.
ಹೀಗೆ ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮವನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಮಾಡುತ್ತಿದ್ದು ಈ ಬಗ್ಗೆ ಹೊಸ ವರ್ಷವನ್ನು ಮಾಡಲು ನಿಮ್ಮ ಸ್ನೇಹಿತರು ಯಾರಾದರೂ ಬೆಂಗಳೂರಿಗೆ ಹೋಗಲು ಹೊರಟಿದ್ದಾರೆ ಅವರಿಗೆ ಈ ಎಲ್ಲಾ ನಿಯಮಗಳ ಬಗ್ಗೆ ತಿಳಿದುಕೊಳ್ಳುವಂತೆ ಹೇಳಿ ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಹಣ ಬರದೆ ಇರುವವರಿಗೆ ,ಕೇವಲ 3 ದಿನದಲ್ಲಿ ಮನೆ ಬಾಗಿಲಿಗೆ ಬರುತ್ತೆ ಹಣ ನೋಡಿ
- ಗ್ಯಾರಂಟಿ 8000 ರೂ ವಿದ್ಯಾರ್ಥಿವೇತನ ಸಿಗುತ್ತೆ ,ಈ ದಾಖಲೆ ಬೇಕು ನೋಡಿ
- ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು