ನಮ್ಮ ರಾಜ್ಯ ರಸ್ತೆ ಸಾರಿಗೆ ಎಲ್ಲಾ ನಿಗಮಗಳಲ್ಲಿ ಪ್ರತಿಯೊಬ್ಬ ಮಹಿಳೆಯರಿಗೆ ಹಾಗೂ 6 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಮಕ್ಕಳಿಗೆ ಉಚಿತ ಟಿಕೆಟ್ ಇರುವುದರಿಂದ ಅವರ ವಯಸ್ಸನ್ನು ಕಂಡಕ್ಟರ್ ತಿಳಿದುಕೊLಳುವುದು ಕಷ್ಟವಾಗುತ್ತಿತ್ತು. ಆ ಕಾರಣದಿಂದ ಇಲಾಖೆ ಹೊಸ ಆದೇಶ ಒಂದನ್ನು ಜಾರಿಗೊಳಿಸಿದೆ.
ಮೊದಲು ಅಳತೆಕೋಲುಗಳಿಂದ ಮಕ್ಕಳ ವಯಸ್ಸನ್ನು ಪತ್ತೆ ಮಾಡುತ್ತಿದ್ದರು, ಇದರಿಂದ ಸಾಕಷ್ಟು ಗೊಂದಲ ಉಂಟಾಗುತ್ತಿತ್ತು. ಹೆಚ್ಚು ವಯಸ್ಸಿನ ಮಕ್ಕಳು ಕೂಡ ಕುಳ್ಳಗೆ ಇರುವುದರಿಂದ ನಿರ್ವಾಹಕರಿಗೆ ಗೊಂದಲವಾಗುತ್ತಿತ್ತು. ಈ ಕಾರಣದಿಂದ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಸಾಕಷ್ಟು ಜಗಳಗಳುಂಟಾಗುತ್ತಿದ್ದವು.
ಇಂತಹ ಗೊಂದಲಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸಾರಿಗೆ ನಿಗಮ ವ್ಯವಸ್ಥೆಯನ್ನು ಬದಲಾಯಿಸಿವೆ. 6 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗುವಾಗ ಗುರುತಿನ ಚೀಟಿ ತರುವುದುನ್ನು ನಿಗಮ ಕಡ್ಡಾಯಗೊಳಿಸಿತು.
ಇನ್ನು ತಮ್ಮ ಮಕ್ಕಳ ಅಧಿಕೃತ ವಯಸ್ಸನ್ನು ಪೋಷಕರು ಹೇಳಿದರೆ ಅಳತೆಗೋಲನ್ನು ಬಳಸುವಂತಿಲ್ಲ. ಪ್ರಯಾಣಿಕರು ಮತ್ತು ಬಸ್ ನಿರ್ವಾಹಕರ ನಡುವೆ ಯಾವುದೇ ಭಿನ್ನಾಭಿಪ್ರಾಯ ಬರುವುದಿಲ್ಲ. ಪ್ರತಿಯೊಬ್ಬ ಮಕ್ಕಳಿಗೂ ಅಳತೆ ಕೋಲನ್ನು ಬಳಸುವ ಅವಶ್ಯಕತೆ ಇರುವುದಿಲ್ಲ ಎಂದು ಆದೇಶಿಸಲಾಗಿದೆ.
ವಯಸ್ಸಿಗೆ ಸಂಬಂಧಿಸಿದ ದೂರುಗಳು ಬರದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. LKG, UKG, ಮತ್ತು 1 ನೇ ತರಗತಿಯ ವಿದ್ಯಾರ್ಥಿಗಳ ಶಾಲೆಗಳ ID ಕಾರ್ಡ್, ಆಧಾರ್ ಕಾರ್ಡ್, ಅಥವಾ ಜನನ ಪ್ರಮಾಣ ಪತ್ರ ಸೇರಿದಂತೆ ಇತರೆ ಗುರುತಿನ ಚೀಟಿಯನ್ನು ತೋರಿಸಬಹುದಾಗಿದೆ.
ಇತರೆ ವಿಷಯಗಳು
ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ 1ಲಕ್ಷ ಪಡೆಯಬಹುದು : ಈ ಒಂದು ದಾಖಲೆ ಇದ್ದರೆ ಸಾಕು
ಬರೀ ₹1500 ಹಾಕಿದ್ರೆ 35 ಲಕ್ಷ ಸಿಗುತ್ತೆ, ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಗೆ ಜನರ ದಂಡು
ಪ್ರತಿ ರೈತರಿಗೆ ರಾಜ್ಯ ಸರ್ಕಾರದಿಂದ ಉಚಿತ ಜಮೀನು ಸಿಗಲಿದೆ : ಈ ಕೂಡಲೇ ಅರ್ಜಿ ಸಲ್ಲಿಸಿ