News

ಆಧಾರ್ ಕಾರ್ಡ್ ನಿಯಮದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಭಾರಿ ಬದಲಾವಣೆ : ಇದರ ಬಗ್ಗೆ ತಿಳಿದುಕೊಳ್ಳಿ

Major change in Aadhaar card rules for above 18 years

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ನಮ್ಮ ದೇಶದಲ್ಲಿರುವವರು ಕೆಲವೊಂದಿಷ್ಟು ದಾಖಲೆಗಳನ್ನು ಹೊಂದಿರುವುದು ಮುಖ್ಯವಾಗಿರುತ್ತದೆ ಅದರಲ್ಲಿಯೂ ಅದರ ಆಧಾರದ ಮೇಲೆಯೇ ನಮ್ಮ ದೇಶದ ಪ್ರಜೆ ಎಂದು ಆ ವ್ಯಕ್ತಿಯನ್ನು ನಾವು ಗುರುತಿಸಲಾಗುತ್ತದೆ. ವೋಟರ್ ಐಡಿ ಪಾಸ್ಪೋರ್ಟ್ ಪಾನ್ ಕಾರ್ಡ್ ಪಡಿತರ ಚೀಟಿ ಹೀಗೆ ಕೆಲವೊಂದು ಮುಖ್ಯ ದಾಖಲೆಯಾಗಿ ನಮ್ಮ ದೇಶದಲ್ಲಿ ನೋಡಬಹುದು ಇವುಗಳೆಲ್ಲದಕ್ಕಿಂತಲೂ ಹೆಚ್ಚಿನದಾಗಿ ಇವತ್ತಿನ ದಿನಗಳಲ್ಲಿ ಆಧಾರ್ ಕಾರ್ಡ್ ಮಹತ್ವದ ದಾಖಲೆಯಾಗಿ ಹೊರಹೊಮ್ಮಿದೆ. ಈ ದಾಖಲೆಯಿಲ್ಲದೆ ಯಾವುದೇ ಸೌಲಭ್ಯವನ್ನು ಸರ್ಕಾರದಿಂದ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬರು ಹೊಂದಿರುವುದು ಅವಶ್ಯಕವಾಗಿದೆ. ಅದರಂತೆ ಭಾರತೀಯರ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಹೊಸ ಆದೇಶವನ್ನು ಆಧಾರ್ ಕಾರ್ಡ್ ಮಾಡಿಸುವವರಿಗೆ ನೀಡಿದೆ.

Major change in Aadhaar card rules for above 18 years
Major change in Aadhaar card rules for above 18 years

ಆಧಾರ್ ಕಾರ್ಡ್ ವೆರಿಫಿಕೇಶನ್ ನಲ್ಲಿ ಹೊಸ ಬದಲಾವಣೆ :

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆಧಾರ್ ಕಾರ್ಡನ್ನು ಹೊಸದಾಗಿ ಮಾಡಿಸುವವರಿಗೆ ಹೊಸ ಆದೇಶವನ್ನು ನೀಡಿದ್ದು ಅದರ ಪ್ರಕಾರ ವೆರಿಫಿಕೇಶನ್ ಅನ್ನು ಪಾಸ್ಪೋರ್ಟ್ ಮಾದರಿಯಲ್ಲಿ ಮಾಡಲಾಗುತ್ತದೆ. ಈಗಾಗಲೇ ಆಧಾರ್ ಅಪ್ಡೇಟ್ ಮಾಡುವಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಸೂಚನೆ ನೀಡಿದ್ದು ಆಧಾರ್ ಕಾರ್ಡ್ ಗಳನ್ನು 10 ವರ್ಷಕ್ಕೂ ಮೇಲ್ಪಟ್ಟವರು ಅಪ್ಡೇಟ್ ಮಾಡಬೇಕಾಗಿದೆ. ಅಲ್ಲದೆ ಕಾಲಕಾಲಕ್ಕೆ ಪ್ರಾಧಿಕಾರವು ನೀಡುವ ಸೂಚನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕಾಗುತ್ತದೆ.

ಆಧಾರ್ ವೆರಿಫಿಕೇಶನ್ ನಲ್ಲಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಬದಲಾವಣೆ ಮಾಡಿದ್ದು ಎಲ್ಲರೂ ಕೂಡ ಈ ನಿಯಮವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಆಧಾರ್ ವೆರಿಫಿಕೇಶನ್ ನಲ್ಲಿ ನಿಯಮಗಳನ್ನು ಬಿಗಿಗೊಳಿಸಲಾಗಿದ್ದು ಇನ್ನು ಮುಂದೆ ಆಧಾರ್ ವೆರಿಫಿಕೇಶನ್ ಅನ್ನು ಪಾಸ್ಪೋರ್ಟ್ ಯಾವ ರೀತಿ ವೆರಿಫಿಕೇಶನ್ ಮಾಡಲಾಗುತ್ತದೆಯೋ ಆ ರೀತಿ ಮಾಡಲಾಗುತ್ತದೆ. ಬಾಲ ಆಧಾರ್ ಕಾರ್ಡನ್ನು ಹದಿನೆಂಟು ವರ್ಷ ಒಳಗಿನವರಿಗೆ ನೀಡಿದರೆ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡನ್ನು ನೀಡಲಾಗುತ್ತದೆ.

ಇದನ್ನು ಓದಿ : ರೈತರಿಗೆ ಬಂಪರ್‌ ಸುದ್ದಿ.. ಸರ್ಕಾರದ ಹೊಸ ಯೋಜನೆಯಡಿ ಅತೀ ಕಡಿಮೆ ಬಡ್ಡಿಯಲ್ಲಿ 3 ಲಕ್ಷ ಸಾಲ

18 ವರ್ಷ ಮೇಲ್ಪಟ್ಟವರಿಗೆ ಹೊಸ ನಿಯಮ :


ವರ್ಷ ಮೇಲ್ಪಟ್ಟವರು ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಬೇಕಾದರೆ ಭೌತಿಕ ಪರಿಶೀಲನೆ ಕಡ್ಡಾಯ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆದೇಶ ಹೊರಡಿಸಿದೆ. ಹಾಗಾಗಿ ಆಧಾರ್ ಕಾರ್ಡ್ ಬೇಕೆಂದು 18 ವರ್ಷ ಮೇಲ್ಪಟ್ಟವರು ಹೊಸದಾಗಿ ಅರ್ಜಿ ಸಲ್ಲಿಸಿದರೆ ಅವರಿಗೆ ಪಾಸ್ಪೋರ್ಟ್ ಮಾದರಿಯಲ್ಲಿ ವೆರಿಫಿಕೇಶನ್ ಇರುತ್ತದೆ. ಆಧಾರ್ ಕಾರ್ಡ್ ಗಾಗಿ ಒಂದು ಬಾರಿ ಅರ್ಜಿ ಸಲ್ಲಿಸಿದರೆ 180 ದಿನಗಳಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಆಧಾರ್ ಕಾರ್ಡ್ ಅನ್ನು ನೀಡಲಾಗುತ್ತದೆ.

ಹೀಗೆ ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಪ್ರಾಧಿಕಾರವು ಸಾಕಷ್ಟು ನಿಯಮಗಳನ್ನು ಬದಲಾವಣೆ ಮಾಡಿದೆ. ಅದರಲ್ಲಿಯೂ ಮುಖ್ಯವಾಗಿ ಆಧಾರ್ ವೆರಿಫಿಕೇಶನ್ ಗೆ ಸಂಬಂಧಿಸಿದಂತೆ ಪಾಸ್ಪೋರ್ಟ್ ಮಾದರಿಯಲ್ಲಿ ವೆರಿಫಿಕೇಶನ್ ಮಾಡುವುದರ ಮೂಲಕ ಸುಮಾರು 185 ದಿನಗಳವರೆಗೆ ಕಾಲಾವಕಾಶವನ್ನು ಆಧಾರ್ ಕಾರ್ಡ್ ಒಬ್ಬ ವ್ಯಕ್ತಿಗೆ ನೀಡಲು ತೆಗೆದುಕೊಳ್ಳುತ್ತಿದೆ. ನಿಮ್ಮ ಸ್ನೇಹಿತರ ಅಥವಾ ಬಂದು ಮಿತ್ರರು ಯಾರಾದರೂ ಆಧಾರ್ ಕಾರ್ಡ್ ಮಾಡಿಸಲು ಯೋಚಿಸುತ್ತಿದ್ದಾರೆ ಅವರಿಗೆ ಆಧಾರ್ ಕಾರ್ಡ್ ನಲ್ಲಿರುವ ಈ ನಿಯಮಗಳ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...