ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ರಾಶಿಗೂ ದ್ವಾದಶ ರಾಶಿಗಳಲ್ಲಿ ತನ್ನದೇ ಆದ ಸ್ಥಾನವಿದ್ದು ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮ ಗ್ರಹಗತಿ ಆಧಾರದ ಮೇಲೆ ಕಷ್ಟ ಸುಖಗಳನ್ನು ಅನುಭವಿಸುತ್ತಾರೆ. ಅದರಂತೆ ಇವತ್ತಿನ ಲೇಖನದಲ್ಲಿ ಕನ್ಯಾ ರಾಶಿಯವರ ಆರೋಗ್ಯ ವೃತ್ತಿಜೀವನ ಕೌಟುಂಬಿಕ ಜೀವನ ಉದ್ಯೋಗ ಮೊದಲಾದ ವಿಷಯಗಳಲ್ಲಿ 2024ರಲ್ಲಿ ಯಾವ ರೀತಿಯ ಫಲ ಅವರಿಗೆ ದೊರೆಯಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀಗ ನೀವು ತಿಳಿದುಕೊಳ್ಳಬಹುದು.
ಕನ್ಯಾ ರಾಶಿಯವರ ರಾಶಿ ಭವಿಷ್ಯ :
ಕನ್ಯಾ ರಾಶಿಯವರಿಗೆ ಗುರು ಗ್ರಹದ ಸಂಚಾರದಿಂದ 2024ರಲ್ಲಿ ಒಳ್ಳೆಯದಾಗುತ್ತದೆ. ಕನ್ಯಾ ರಾಶಿಯವರಿಗೆ ರಾಹು ಹಾಗೂ ಕೇತುವಿನಿಂದ ಸ್ವಲ್ಪ ತೊಂದರೆಯಾದರು ಕೂಡ ಶನಿಯಿಂದ ಕನ್ಯಾ ರಾಶಿಯವರಿಗೆ ಹಲವು ವಿಷಯಗಳಲ್ಲಿ ಯೋಗ ಲಭ್ಯವಿದೆ. ವೃತ್ತಿ ಕ್ಷೇತ್ರದಲ್ಲಿ ಕೋರ್ಟು ಕಚೇರಿ ವ್ಯಾಜ್ಯ ಮದುವೆಯ ವಿಷಯದಲ್ಲಾಗಲಿ ಹೆಚ್ಚಿನ ಸಮಸ್ಯೆಯನ್ನು 2024ರಲ್ಲಿ ಕನ್ಯಾ ರಾಶಿಯವರು ಎದುರಿಸುವುದಿಲ್ಲ. 2024ರಲ್ಲಿ ಈ ರಾಶಿಯ ವಿದ್ಯಾರ್ಥಿಗಳಿಗೆ ಓದಲು ಆಸಕ್ತಿ ಇರುತ್ತದೆ ಹಾಗೂ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ.
ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿ ಹೊಂದಿರುವವರು ಯಶಸ್ಸನ್ನು ಕಾಣುತ್ತಾರೆ ಜೊತೆಗೆ ಸರ್ಕಾರಿ ಕೆಲಸಗಳಿಗೆ ಪ್ರಯತ್ನಿಸುವವರು ಕಠಿಣ ಪರಿಶ್ರಮದಿಂದ ಯಶಸ್ಸನ್ನು ಕಾಣಬಹುದಾಗಿದೆ ಅಲ್ಲದೆ ಈ ರಾಶಿಯವರಿಗೆ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚಿನದಾಗಿದೆ.
ಇದನ್ನು ಓದಿ : ರೈತರಿಗೆ ಬಂಪರ್ ಸುದ್ದಿ.. ಸರ್ಕಾರದ ಹೊಸ ಯೋಜನೆಯಡಿ ಅತೀ ಕಡಿಮೆ ಬಡ್ಡಿಯಲ್ಲಿ 3 ಲಕ್ಷ ಸಾಲ
ಕನ್ಯಾ ರಾಶಿಯವರಿಗೆ ಕೆಲವೊಂದು ಸಲಹೆಗಳು :
ಕನ್ಯಾ ರಾಶಿಯವರಿಗೆ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಪರಿಹಾರ ಎಂದು ಎರಡು ರೀತಿಯ ಪರಿಹಾರವಿರುತ್ತದೆ. ಪ್ರಕೃತಿಯನ್ನು ಹಾಳು ಮಾಡುವ ಯಾವುದೇ ಕೆಲಸವನ್ನು ಕನ್ಯಾ ರಾಶಿಯವರು ಮಾಡಬಾರದು ಮರ-ಗಿಡಗಳನ್ನು ಬೆಳೆಸಬೇಕು ಕನ್ಯಾ ರಾಶಿಯವರಿಗೆ ಇದರಿಂದ ದೇವರು ಆಶೀರ್ವಾದ ಮಾಡುತ್ತಾನೆ ಹಾಗಾಗಿ ಇದನ್ನು ಸಾಮಾಜಿಕ ಪರಿಹಾರ ಎಂದು ಕರೆಯಲಾಗುತ್ತದೆ. ಉತ್ತರ ನಕ್ಷತ್ರದಲ್ಲಿ ಕನ್ಯಾ ರಾಶಿಯವರು ಜನಿಸಿದರೆ ಪಂಚಮುಖ ಹನುಮಂತ್ ಕವಚಸ್ತೋತ್ರವನ್ನು ಪಠಿಸಬೇಕು. ಶಿವನಾಮ ಸ್ತೋತ್ರ ಶತಕಂ ಪಠಣ ಹಸ್ತ ನಕ್ಷತ್ರದಲ್ಲಿ ಜನಿಸಿದವರು ಮಾಡಬೇಕು. ಮುಕುಂದ ಮಾಲಾ ಸ್ತೋತ್ರದ ಪಠಣವನ್ನು ಚಿತ್ತ ನಕ್ಷತ್ರದಲ್ಲಿ ಜನಿಸಿದವರು ಮಾಡಬೇಕು ಇದರಿಂದ ದೇವರ ಅನುಗ್ರಹ ಕನ್ಯಾ ರಾಶಿಯವರಿಗೆ ದೊರೆತು ಒಳ್ಳೆಯದಾಗುತ್ತದೆ.
ಹೀಗೆ ಸಾಕಷ್ಟು ಜನರು ತಮ್ಮ ರಾಶಿಯ ಬಗ್ಗೆ ಈ ವರ್ಷದಲ್ಲಿ ಹೇಗಿದೆ ಎಂಬುದನ್ನು ನೋಡಲು ಬಯಸುತ್ತಿರುತ್ತಾರೆ ಅಂತವರಿಗಾಗಿ ಇವತ್ತಿನ ಲೇಖನದಲ್ಲಿ ಕನ್ಯಾ ರಾಶಿಯ ಬಗ್ಗೆ ತಿಳಿಸಲಾಗಿದ್ದು ಕನ್ಯಾ ರಾಶಿ ಹೊಂದಿರುವ ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ 2024ರಲ್ಲಿ ಅವರ ಜೀವನ ಸುಖಮಯವಾಗಲಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರಿಗೆ ಸಿಹಿ ಸುದ್ದಿ : 8000 ರೈತರ ಖಾತೆಗೆ ಜಮಾ ಆಗುತ್ತದೆ ಕೂಡಲೇ ಲಿಂಕ್ ಬಳಸಿ
- ಗೃಹಲಕ್ಷ್ಮಿಯರಿಗಾಗಿ ಮತ್ತೊಂದು ಹೊಸ ಯೋಜನೆ : 90 ಸಾವಿರ ಮಹಿಳೆಯರಿಗೆ ಸಿಗಲಿದೆ ಲಾಭ