News

ಶಾಲೆಗಳಿಗೆ 14 ದಿನಗಳು ರಜೆ ಘೋಷಣೆ : ಯಾಕೆ ಇಷ್ಟು ದಿನ ರಜೆ ನೀಡಲಾಗಿದೆ

14 days holiday announced for schools

ನಮಸ್ಕಾರ ಸ್ನೇಹಿತರೆ ಇನ್ನೇನು ಹೊಸ ವರ್ಷ ಪ್ರಾರಂಭವಾಗಿದೆ ಮತ್ತು ತಾಪಮಾನದಲ್ಲಿಯೂ ಕೂಡ ಹೊಸ ವರ್ಷದ ಆಗಮನದೊಂದಿಗೆ ಸಾಕಷ್ಟು ಬದಲಾವಣೆಯಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ತೀವ್ರ ಚಳಿಯ ಜೊತೆಗೆ ಅಕಾಲಿಕ ಮಳೆಯಾಗುತ್ತಿದ್ದು ಶಾಲಾ ವಿದ್ಯಾರ್ಥಿಗಳಿಗೆ ಇದರಿಂದ ಕಷ್ಟವಾಗುತ್ತಿದೆ ಹಾಗಾಗಿ ಶಾಲಾ ಮಕ್ಕಳಿಗೆ ಇಲಾಖೆಯೂ ರಜೆಯನ್ನು ಘೋಷಣೆ ಮಾಡಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇದೀಗ ನೀವು ನೋಡಬಹುದು.

14 days holiday announced for schools
14 days holiday announced for schools

ಶಾಲಾ ಮಕ್ಕಳಿಗೆ ಚಳಿಗಾಲದ ರಜಾ ದಿನ ಘೋಷಣೆ :

ಬಹುತೇಕ ದೇಶದ ರಾಜ್ಯಗಳಲ್ಲಿ ಮೊದಲಿಗಿಂತ ಚಳಿಯು ಗಣನೀಯವಾಗಿ ಹೆಚ್ಚಾಗಿದೆ ಅಂತಹ ಪರಿಸ್ಥಿತಿ ಉಂಟಾಗಿರುವ ಕಾರಣ ಮಂಜಿನಿಂದಾಗಿ ಸಾಕಷ್ಟು ಕಡೆ ಜನರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರಗಳು ಪ್ರತಿ ವರ್ಷ ಚಳಿಗಾಲದಲ್ಲಿ ಚಳಿಗಾಲದ ರಜೆ ನೀಡುವುದರಿಂದ ಶಾಲಾ ಮಕ್ಕಳ ಆರೋಗ್ಯ ಹದಗಿಡಬಾರದು ಹಾಗೂ ಚೆನ್ನಾಗಿ ರಜೆಯನ್ನು ಕಳೆಯಬಹುದು ಎಂಬ ಉದ್ದೇಶದಿಂದ ಚಳಿಯ ರಜೆಯನ್ನು ಸರ್ಕಾರಗಳು ನೀಡುತ್ತಿವೆ.

ಇದನ್ನು ಓದಿ : ಆಧಾರ್ ಲಿಂಕ್ ಆಸ್ತಿ ಮತ್ತು ಭೂ ದಾಖಲೆಗಳಿಗೆ ಕಡ್ಡಾಯವಾಗಿದೆ : ಏನೆಲ್ಲ ಲಾಭ ಪಡೆಯಬಹುದು ನೋಡಿ

ಜನವರಿಯಲ್ಲಿ ರಜೆ ದಿನಗಳು :

ಹಲವಾರು ದಿನಗಳವರೆಗೆ ಶಾಲೆಗಳು ಚಳಿಗಾಲದ ರಜೆಯ ಸಮಯದಲ್ಲಿ ಮುಚ್ಚಲ್ಪಡುತ್ತವೆ ಶಾಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ತಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಅನೇಕ ಸ್ಥಳಗಳಲ್ಲಿ ಚಳಿಗಾಲದ ರಜಾ ದಿನಗಳನ್ನು ರಾಜ್ಯ ಸರ್ಕಾರವು ಘೋಷಣೆ ಮಾಡಿದ್ದು ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಜನವರಿ ತಿಂಗಳಿನಲ್ಲಿ ಮೊದಲ ವಾರದಲ್ಲಿ ರಜೆ ಸಿಗುತ್ತಿದೆ.


ಜನವರಿ ಒಂದರಿಂದ ಜನವರಿ ಆರರವರೆಗೆ ಅನೇಕ ರಾಜ್ಯಗಳಲ್ಲಿ ಹೊಸ ವರ್ಷದಲ್ಲಿ ರಜಾ ದಿನಗಳನ್ನು ಘೋಷಣೆ ಮಾಡಲಾಗಿದೆ. ಹವಾಮಾನ ಬದಲಾದರೆ ಎರಡನೇ ವಾರದೊಳಗೆ ಮತ್ತು ಎಲ್ಲಾ ಪರಿಸ್ಥಿತಿಗಳು ಸಾಮಾನ್ಯವಾಗಿದ್ದರೆ ಶಾಲೆಗಳು ಜನವರಿ ಆರ ನಂತರ ತೆರೆಯಲ್ಪಡುತ್ತವೆ. ಆದರೆ ತಾಪಮಾನವು ಒಂದೇ ರೀತಿ ಇದ್ದರೆ ಹಾಗೂ ಮೊದಲಿಗಿಂತ ಚಳಿಯು ಹೆಚ್ಚಾಗಿದ್ದರೆ ಜನವರಿ 14ರವರೆಗೆ ರಜಾ ದಿನಗಳು ಮುಂದುವರಿಯುತ್ತವೆ.

ಹೀಗೆ ಕೆಲವೊಂದು ರಾಜ್ಯಗಳಲ್ಲಿ ಚಳಿಯ ಪ್ರಭಾವ ಹೆಚ್ಚಾಗಿರುವ ಕಾರಣ ಶಾಲಾ ಮಕ್ಕಳ ಆರೋಗ್ಯದಲ್ಲಿ ಯಾವುದೇ ಪರಿಣಾಮ ಬೀರಬಾರದು ಎನ್ನುವ ಉದ್ದೇಶದಿಂದ ರಜೆಯನ್ನು ಘೋಷಣೆ ಮಾಡಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ಶಾಲಾ ಮಕ್ಕಳ ಪೋಷಕರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...