ನಮಸ್ಕಾರ ಸ್ನೇಹಿತರೆ ಮಹಿಳೆಯರಿಗೆ ಪ್ರತಿ ತಿಂಗಳ ಖರ್ಚು ನಿಭಾಯಿಸಲು ರಾಜ್ಯ ಸರ್ಕಾರವು ಮಹಿಳೆಯರ ಬ್ಯಾಂಕ್ ಖಾತೆಗೆ 2ಸಾವಿರ ರೂಪಾಯಿಗಳನ್ನು ಜಮಾ ಮಾಡುತ್ತಿತ್ತು ಇದರ ಲಾಭವನ್ನು ಕೋಟ್ಯಂತರ ಮಹಿಳೆಯರು ಕೂಡ ಪಡೆದುಕೊಳ್ಳುತ್ತಿದ್ದಾರೆ. ಕೆಲವು ಜಿಲ್ಲೆಗಳಿಗೆ ಈಗಾಗಲೇ ನಾಲ್ಕನೇ ಕಂತಿನ ಹಣವು ಕೂಡ ತಲುಪಿದ್ದು ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಯನ್ನು ಹಂತ ಹಂತವಾಗಿ ಹಣವು ತಲುಪಲಿದೆ.
ಸಾಕಷ್ಟು ಜನರ ಖಾತೆಯನ್ನು ಗೃಹಲಕ್ಷ್ಮಿ ಯೋಜನೆಯ ಹಣ ಸೇರಿದರು ಕೂಡ ಕೆಲವೊಂದು ಮಹಿಳೆಯರು ಸರ್ಕಾರದ ಈ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಹೇಳಬಹುದು ಆದರೆ ಖಾತೆಯಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ಹಣ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.
ಮೂರು ದಿನಗಳ ಶಿಬಿರ :
ಈಗಾಗಲೇ ಗೃಹಲಕ್ಷ್ಮಿಯರಿಗೆ ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ಮೂರು ದಿನಗಳ ಶಿಬಿರವನ್ನು ಕೂಡ ರಾಜ್ಯ ಸರ್ಕಾರವು ಆಯೋಜನೆ ಮಾಡಿದ್ದು ಈ ಮೂಲಕ ತಮ್ಮ ಖಾತೆಯಲ್ಲಿ ಇರುವಂತಹ ಸಮಸ್ಯೆಗಳನ್ನು ಮಹಿಳೆಯರು ಪರಿಹರಿಸಿಕೊಳ್ಳುವುದಕ್ಕೆ ಮಾರ್ಗದರ್ಶನವನ್ನು ನೀಡಲಾಗಿದೆ. ಸರ್ಕಾರ ಈಗಾಗಲೇ ತಿಳಿಸಿರುವಂತೆ ತಮ್ಮ ಬ್ಯಾಂಕ್ ಖಾತೆಗೆ ಮಹಿಳೆಯರು ಆಧಾರ್ ಲಿಂಕ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು ಒಂದು ವೇಳೆ ಈ ಕೆಲಸ ಏನಾದರೂ ಆಗದೆ ಇದ್ದರೆ ತಕ್ಷಣವೇ ಬ್ಯಾಂಕಿಗೆ ತೆರಳಿ ಲಿಂಕ್ ಮಾಡಿಸುವುದು ಮುಖ್ಯವಾಗಿರುತ್ತದೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಮಂಜೂರಾಗುತ್ತದೆ.
ಸಿಡಿಪಿಓ ಕಚೇರಿ ಭೇಟಿ ನೀಡಬಹುದು :
ನಿಮ್ಮ ಖಾತೆಯಲ್ಲಿ ಯಾವುದೇ ದೋಷವಿದ್ದರೂ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದರೆ ಆ ಅಧಿಕಾರಿಗಳು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಪರಿಹಾರವನ್ನು ಸೂಚಿಸುತ್ತಾರೆ ಹಾಗಾಗಿ ಸ್ಥಳೀಯ ಸಿಡಿಪಿಓ ಕಚೇರಿಗಳಿಗೆ ಗೃಹಲಕ್ಷ್ಮಿಯರು ಭೇಟಿ ನೀಡಿ ಗೃಹಲಕ್ಷ್ಮಿ ಅರ್ಜಿ ಪರಿಶೀಲಿಸಿಕೊಳ್ಳಬಹುದಾಗಿದೆ.
ಇದನ್ನು ಓದಿ : ಜನವರಿ ತಿಂಗಳ ಗೃಹಲಕ್ಷ್ಮಿ ಹಣ ಅಕೌಂಟ್ ಗೆ ಬಂತೂ ನೋಡಿ ,ಈ ಲಿಂಕ್ ನಲ್ಲಿ ನೀವು ಪರಿಶೀಲಿಸಿ
ನಾಲ್ಕನೇ ಕಂತಿನ ಹಣ ಬಿಡುಗಡೆ :
ರಾಜ್ಯ ಸರ್ಕಾರವು ಬ್ಯಾಂಕುಗಳಿಗೆ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣವನ್ನು ಕೂಡ ವರ್ಗಾವಣೆ ಮಾಡಿದ್ದು ನಿಮ್ಮ ಖಾತೆ ಸರಿಯಾಗಿದ್ದರೆ ಬ್ಯಾಂಕುಗಳಲ್ಲಿ ಅಂದರೆ ಆಧಾರ್ ಸೀಲಿಂಗ್ ಆಗಿದ್ದರೆ ಹಾಗೂ ಬ್ಯಾಂಕ್ ಖಾತೆ ಸಕ್ರಿಯವಾಗಿದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ತಕ್ಷಣವೇ ಖಾತೆಯನ್ನು ತಲುಪಲಿದೆ. ನಾಲ್ಕನೇ ಕಂತಿನ ಹಣ ಸುಮಾರು 15 ಜಿಲ್ಲೆಗಳಲ್ಲಿ ಜಮಾ ಆಗಿದೆ ಪ್ರತಿಯೊಂದು ಜಿಲ್ಲೆಗೂ ಕೂಡ ರಾಜ್ಯ ಸರ್ಕಾರವು ಹಂತ ಹಂತವಾಗಿ ಹಣವನ್ನು ತಲುಪಿಸಲಿದೆ. ಅಲ್ಲದೆ ಗೃಹಲಕ್ಷ್ಮಿ ಯೋಜನೆಯ ಒಂದೇ ಒಂದು ಕಂತಿನ ಹಣವನ್ನು ಇದುವರೆಗೂ ಯಾರು ಸ್ವೀಕರಿಸಿಲ್ಲ ಅವರಿಗೆ ಒಟ್ಟಿಗೆ 8 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.
ಹೀಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ಗಳನ್ನು ಮಹಿಳೆಯರಿಗೆ ತಿಳಿಸುತ್ತಿದ್ದು ಇದುವರೆಗೂ ಯಾರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದಿಲ್ಲವ ಅವರು ಒಂದೇ ಬಾರಿಗೆ 8000 ಹಣವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಎಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು :
- ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಗೃಹಲಕ್ಷ್ಮಿ ಹಣ ಇನ್ನು ಮುಂದೆ ಸಿಗುತ್ತದೆ : ಇಲ್ಲದಿದ್ದರೆ 2000 ಬರುವುದಿಲ್ಲ
- ರೈತರೇ ಖುದ್ದಾಗಿ ಬೆಳೆ ವಿವರ ದಾಖಲಿಸಿ : ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಿ