ನಮಸ್ಕಾರ ಸ್ನೇಹಿತರೆ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಜನವರಿ 13ರಂದು ನಡೆಯಲಿದ್ದು ವಸ್ತ್ರ ಸಂಹಿತೆ ಮಾರ್ಗಸೂಚಿಯನ್ನು ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಪ್ರಕಟಿಸಿದೆ. ಬೆಳಿಗ್ಗೆ 10 ರಿಂದ 11 ಮತ್ತು ಮಧ್ಯಾಹ್ನ 12 ರಿಂದ ಎರಡು ಗಂಟೆಯವರೆಗೆ ಜನವರಿ 13ರಂದು ಕೆಸೆಟ್ ಪರೀಕ್ಷೆ ನಡೆಯಲಿದ್ದು ಸರಳ ಉಡುಪು ಧರಿಸಿ ಅಭ್ಯರ್ಥಿಗಳು ಬರುವಂತೆ ಸೂಚನೆ ನೀಡಲಾಗಿದೆ.
ಕೆಸೆಟ್ ಪರೀಕ್ಷೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ :
ಕೆಇಎ ವೆಬ್ಸೈಟ್ ಗೆ ಭೇಟಿ ನೀಡಿ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಪರೀಕ್ಷಾ ಕೇಂದ್ರಕ್ಕೆ ಬರುವಾಗ ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ಆಧಾರ್ ಕಾರ್ಡ್ ಸೇರಿದಂತೆ ಸರ್ಕಾರದ ಯಾವುದೇ ಮಾನ್ಯತೆ ಗುರುತಿನ ಚೀಟಿಯನ್ನು ತರಬೇಕೆಂದು ಆದೇಶಿಸಲಾಗಿದೆ.
ಪುರುಷ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮ :
ಕೆಸೆಟ್ ಪರೀಕ್ಷೆ ಬರೆಯಲು ಪುರುಷ ಅಭ್ಯರ್ಥಿಗಳು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅವುಗಳೆಂದರೆ ಹೆಚ್ಚಿನ ಜೋಬುಗಳಲ್ಲಿ ಇಲ್ಲದ ಸರಳ ಪ್ಯಾಂಟ್ ಧರಿಸುವುದು ಹಾಗೂ ಅರೆ ತೋಡಿದರಿಸುವುದು ಕಡ್ಡಾಯವಾಗಿದೆ. ಬೆಲ್ಟ್ ಶೂಗಳನ್ನು ಪರೀಕ್ಷೆ ವೇಳೆ ನಿಷೇಧಿಸಲಾಗಿದೆ. ಉಂಗುರ ಮತ್ತು ಕೈಗಡಿಯಾರ ಕಿವಿಯೋಲೆ ಕಂಠಾಭರಣ ಹೀಗೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ.
ಇದನ್ನು ಓದಿ : ಅಯೋಧ್ಯೆ ಶ್ರೀರಾಮ ಮಂದಿರದ ಆಸಕ್ತಿದಾಯಕ ವಿಷಯಗಳು ಯಾರಿಗೂ ಗೊತ್ತಿಲ್ಲ? ಇಲ್ಲಿದೆ ನೋಡಿ
ಮಹಿಳಾ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮ :
ಮಹಿಳಾ ಅಭ್ಯರ್ಥಿಗಳು ಕೂಡ ಕೆ ಸೆಟ್ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಅವುಗಳೆಂದರೆ ಹೂವು ಬಟನ್ ತೋಳಿನ ರವಿಕೆ ರಸ್ತೆ ಇರುವ ಉಡುಪು ಮತ್ತು ಚಪ್ಪಲಿ ಜೀನ್ಸ್ ಪ್ಯಾಂಟ್ ಗಳನ್ನು ಧರಿಸಿ ಬರುವಂತಿಲ್ಲ. ಕೈಗಡಿಯಾರ ಮೈಕ್ರೋಫೋನ್ ಪೆನ್ ಡ್ರೈವ್ ಸೇರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಹಿಳಾ ಅಭ್ಯರ್ಥಿಗಳು ತರುವುದಿಲ್ಲ ಆದರೆ ಮಂಗಳಸೂತ್ರ ಹಾಗೂ ಕಾಲುಂಗುರ ಧರಿಸಲು ಮಹಿಳಾ ಅಭ್ಯರ್ಥಿಗಳಿಗೆ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.
ಹೀಗೆ ಕೆಸೆಟ್ ಎಕ್ಸಾಮ್ ಬರೆಯುವ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಬ್ಬರಿಗೂ ಕೂಡ ರಾಜ್ಯ ಸರ್ಕಾರವು ವಸ್ತ್ರಸಂಹಿತೆ ಮಾರ್ಗಸೂಚಿಯನ್ನು ತಿಳಿಸಿದೆ. ಅದರಂತೆ ಎಲ್ಲಾ ಅಭ್ಯರ್ಥಿಗಳು ನಡೆದುಕೊಳ್ಳುವುದು ಮುಖ್ಯವಾಗಿರುತ್ತದೆ ಹಾಗಾಗಿ ಈ ಮಾಹಿತಿಯನ್ನು ಕೆಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು
ಇತರೆ ವಿಷಯಗಳು :
- ರೈತರೇ ಖುದ್ದಾಗಿ ಬೆಳೆ ವಿವರ ದಾಖಲಿಸಿ : ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಿ
- ಲೇಬರ್ ಕಾರ್ಡ್ ಲಿಸ್ಟ್ ಬಿಡುಗಡೆ: ಇದರಲ್ಲಿ ಹೆಸರಿರುವವರ ಕಾರ್ಡ್ ರದ್ದಾಗಲಿದೆ, ಪಟ್ಟಿ ನೋಡಿ