News

ಜನವರಿ 22ರಂದೇ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಲು ಮುಖ್ಯ ಕಾರಣ.?

On January 22, Ayodhya Ram Mandir will be inaugurated

ನಮಸ್ಕಾರ ಸ್ನೇಹಿತರೆ ಜನವರಿ 22ರಂದು ಅಯೋಧ್ಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿದೆ. ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಇದೇ ದಿನವೇ ಏಕೆ? ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದಕ್ಕೆ ಕೆಲವೊಂದು ಕಾರಣಗಳು ತಿಳಿಸಲಾಗಿದೆ. ಹಾಗಾದರೆ ಆ ಕಾರಣಗಳು ಯಾವುವು ಎಂದು ನೋಡುವುದಾದರೆ,

On January 22, Ayodhya Ram Mandir will be inaugurated
On January 22, Ayodhya Ram Mandir will be inaugurated

ಜನವರಿ 22 ರಂದೇ ಪ್ರಾಣ ಪ್ರತಿಷ್ಠಾಪನೆ ಮಾಡಲು ಕಾರಣಗಳು :

ಜನವರಿ 22 ಶ್ರೀ ರಾಮನ ಭಕ್ತರು ಈ ದಿನ ಬೇಗ ಬರಲೆಂದು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಬರೋಬ್ಬರಿ 500 ವರ್ಷಗಳಿಗೂ ಇದ್ದರೂ ಹೆಚ್ಚು ಸಂಘರ್ಷ ಅಂತ್ಯಗೊಂಡು ಇದೀಗ ಮತ್ತೆ ಅಯೋಧ್ಯೆಯಲ್ಲಿ ಭವ್ಯರಾಮ ಮಂದಿರ ನಿರ್ಮಾಣಗೊಂಡಿದೆ. ರಾಮ ಮಂದಿರದ ಉದ್ಘಾಟನೆಗೆ ಈಗಾಗಲೇ ಸಮಯ ಶುರುವಾಗಿದ್ದು ಮಧ್ಯಾಹ್ನ 12ರ ವೇಳೆಗೆ ಜನವರಿ 22ರಂದು ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಮೂಲಕ ಲೋಕಾರ್ಪಣೆಗೊಳ್ಳಲಿದೆ. ಪ್ರಾಣ ಪ್ರತಿಷ್ಠಾಪನೆ ಶ್ರೀರಾಮ ಹುಟ್ಟಿದ ಸಮಯದಲ್ಲಿಯೇ ಹಿಂದೂ ಪೌರಾಣಿಕ ಕಥೆಯ ಪ್ರಕಾರ ಅಭಿಜತ್ ಮುಹೂರ್ತದಲ್ಲಿ ಶ್ರೀರಾಮನು ಜನಿಸಿದ. ಬೆಳಗ್ಗೆ 11:51 ರಿಂದ ಮಧ್ಯಾಹ್ನ 12:30 ಮೂರರವರೆಗೆ ಜನವರಿ 22ರಂದು ಅಭಿಜಿತ್ ಮುಹೂರ್ತ ಇರುವುದರಿಂದ ಆ ದಿನದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲು ಮುಖ್ಯ ಕಾರಣವಾಗಿದೆ.

ಇದನ್ನು ಓದಿ : ಅಯೋಧ್ಯೆ ಶ್ರೀರಾಮ ಮಂದಿರದ ಆಸಕ್ತಿದಾಯಕ ವಿಷಯಗಳು ಯಾರಿಗೂ ಗೊತ್ತಿಲ್ಲ? ಇಲ್ಲಿದೆ ನೋಡಿ

ಇನ್ನು ಕೆಲವು ಕಾರಣಗಳು :

ಬೆಳಿಗ್ಗೆ 3: 52 ಕ್ಕೆ ಮಂಗಳಕರವಾದ ಮೃಗಶಿರ ನಕ್ಷತ್ರ ಜನವರಿ 22 ಸೋಮವಾರ ದಂದು ಶುರುವಾಗುತ್ತದೆ. ಜೊತೆಗೆ ಬೆಳಿಗ್ಗೆ ನಾಲ್ಕು ಐವತ್ತೆಂಟರವರೆಗೆ ಜನವರಿ 23ರ ಮಂಗಳವಾರದವರೆಗೆ ಮೃಗಶಿರ ನಕ್ಷತ್ರ ಇರಲಿದ್ದು ಈ ದಿನವೂ ಕೂಡ ಅತ್ಯಂತ ಶುಭ ಸಮಯವಾಗಿದೆ ಎಂದು ಹೇಳಬಹುದು ಏಕೆಂದರೆ ಮೃಗಶಿರ ನಕ್ಷತ್ರ ಅತ್ಯಂತ ಶುಭ ಎಂದು ಹಿಂದೂ ಪಂಚಾಂಗ ಪ್ರಕಾರ ಪರಿಗಣಿಸಲಾಗುತ್ತದೆ. ಆದ್ದರಿಂದ ಅತ್ಯಂತ ಮಂಗಳಕರ ನಕ್ಷತ್ರ ಮೃಗಶಿರ ಹಿಂದೆ ಪರಿಗಣಿಸಲಾಗಿದ್ದು ಈ ಶುಭ ಘಳಿಗೆಯಲ್ಲಿ ಯಾವುದೇ ಕಾರ್ಯವನ್ನು ಮಾಡಿದರೆ ಅದರಲ್ಲಿ ಶುಭ ಕಾಣಲಾಗುತ್ತದೆ ಎಂಬ ನಂಬಿಕೆ ಎಲ್ಲರಲ್ಲಿಯೂ ಇದೆ.


ಹೀಗೆ ಕೆಲವೊಂದು ಕಾರಣಗಳು ಜನವರಿ 22 ರಂದು ಇರುವ ಕಾರಣ ಆ ದಿನದಂದೆ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ ಪ್ರತಿಯೊಬ್ಬ ಹಿಂದೂಗೂ ಕೂಡ ಜನವರಿ 22ರಂದು ಶ್ರೀ ರಾಮನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...