ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ದಾವಣಗೆರೆ ರೈತ ಮುಖಂಡರು ಸರ್ಕಾರಕ್ಕೆ ಕೆಲವೊಂದು ಬೇಡಿಕೆಗಳನ್ನು ಇಟ್ಟಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಈ ಬಾರಿಯ ಬೇಸಿಗೆ ಹಂಗಾಮಿಗೆ ಭದ್ರಾ ಜಲಾಶಯದಿಂದ ಪ್ರತಿ ತಿಂಗಳು 20 ದಿನ ಫೆಬ್ರವರಿ ಇಂದ ಏಪ್ರಿಲ್ ವರೆಗೆ ನೀರು ಹರಿಸಬೇಕೆಂದು ದಾವಣಗೆರೆ ರೈತ ಮುಖಂಡರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ದಾವಣಗೆರೆ ರೈತರಿಂದ ಒತ್ತಾಯ :
ಭದ್ರಾ ಅಚ್ಚುಕಟ್ಟು ಪ್ರದೇಶದ 2023 24ನೇ ಸಾಲಿನ ಬೇಸಿಗೆ ಹಂಗಾಮಿಗೆ ನಗರದ ನೀರಾವರಿ ಇಲಾಖೆ ವಿಭಾಗ ಕಚೇರಿಯಲ್ಲಿ ನೀರು ಹರಿಸುವ ಸಭೆಯಲ್ಲಿ ದಾವಣಗೆರೆ ರೈತ ಮುಖಂಡರು ಒತ್ತಾಯಿಸಿದರು. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಜನವರಿ 6ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ರೈತರ ಸಭೆಯನ್ನು ಆಯೋಜಿಸಿತ್ತು ಈ ಸಭೆಯಲ್ಲಿ ರೈತ ಮುಖಂಡರು ಆಗ್ರಹಿಸಿದರು. ಅಚ್ಚು ಕಟ್ಟು ಪ್ರದೇಶ ಶೇಕಡ 70ರಷ್ಟು ಹೊಂದಿರುವುದು ದಾವಣಗೆರೆಯಲ್ಲಿಯೇ ಹಾಗಾಗಿ ದಾವಣಗೆರೆಯಲ್ಲಿಯೇ ಇನ್ನು ಮುಂದೆ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕೆಂದು ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಗೆ ಒತ್ತಯಿಸಿದರು.
ಇದನ್ನು ಓದಿ : ಸರ್ಕಾರದಿಂದ ತಿಂಗಳಿಗೆ 3000 ಪಡೆಯಬಹುದು : ಸಂಪೂರ್ಣವಾಗಿ ತಿಳಿದು ಅರ್ಜಿ ಸಲ್ಲಿಸಿ
20 ದಿನಗಳ ಕಾಲ ಪ್ರತಿ ತಿಂಗಳು ನೀರು ಬಿಡಬೇಕು :
151 ಪಾಯಿಂಟ್ 14 ಅಡಿ ಜಲಾಶಯದ ನೀರಿನ ಮಟ್ಟ ಇದ್ದು 21.54 ಟಿಎಂಸಿ ಲಭ್ಯತೆಯ ನೀರಿನ ಪ್ರಮಾಣ ನೀರಿದೆ. 72 ದಿನ ಈ ಪ್ರಮಾಣದ ನೀರನ್ನು ಹರಿಸಬಹುದಾಗಿದ್ದು 20 ದಿನ ಫೆಬ್ರವರಿ ಒಂದರಿಂದ ನೀರು ಬಿಡಬೇಕು. ಹತ್ತು ದಿನ ನೀರನ್ನು ನಿಲ್ಲಿಸಿ ಮತ್ತೆ 20 ದಿನ ಮಾರ್ಚ್ ನಲ್ಲಿ ನೀರನ್ನು ಬಿಡಬೇಕು. ಏಪ್ರಿಲ್ ನಲ್ಲಿಯೂ ಸಹ 20 ದಿನ ನೀರು ಬಿಟ್ಟು ಹತ್ತು ದಿನ ನೀರು ನಿಲ್ಲಿಸಬೇಕು ಅದರಂತೆ ಉಳಿದ ನೀರು ಮೇ ತಿಂಗಳಿನಲ್ಲಿ ಬಿಡಬೇಕೆಂದು ಒತ್ತಾಯಿಸಿದರು.
35 ಪಾಯಿಂಟ್ 25 ಟಿಎಂಸಿ ಡೆಡ್ ಸ್ಟೋರೇಜ್ ತೆಗೆದರೆ ಕುಡಿಯುವ ನೀರಾಗಿ 21.4 ಟಿಎಂಸಿ ನೀರನ್ನು ಬಳಸಬಹುದು ಹಾಗೂ 6.9 ಟಿಎಂಸಿ ಕೈಗಾರಿಕೆಗೆ ಬೇಕಾಗುತ್ತದೆ ಅಲ್ಲದೇ 2.5 tmc ನೀರು ಆವಿಯಾಗುತ್ತದೆ. ಉಳಿದಂತೆ 12.11 ಟಿಎಂಸಿ ನೀರು ನೀರಾವರಿ ಇದ್ದು ಭದ್ರಾ ಎಡ ಮತ್ತು ಜಲದಂಡೆಗೆ ಅದನ್ನು ಹರಿಸಿದರೆ ನಾಲಿಗೆ 47 ದಿನಗಳ ಕಾಲ ನೀರು ಹರಿಸಬಹುದಾಗಿದೆ ಎಂದು ತಿಳಿಸಿದರು. ಹೀಗೆ ದಾವಣಗೆರೆ ರೈತರು ಭದ್ರಾ ಜಲಾಶಯದಿಂದ ರೈತರಿಗೆ ನೀರು ಬಿಡಬೇಕೆಂದು ಒತ್ತಾಯಿಸಿದರು.
ಒಟ್ಟಾರಿಯಾಗಿ ರೈತ ಮುಖಂಡರು ಶಿವಮೊಗ್ಗದಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಯುವ ಹಿನ್ನೆಲೆಯಲ್ಲಿ ಇಲಾಖೆಯು ಆಯೋಜಿಸಿದ್ದ ರೈತರ ಸಭೆಯಲ್ಲಿ ದಾವಣಗೆರೆ ರೈತ ಮುಖಂಡರು ಈ ಬಗ್ಗೆ ಸರ್ಕಾರಕ್ಕೆ ತಿಳಿಸಿದರು. ಹಾಗಾಗಿ ರೈತರ ಈ ಬೇಡಿಕೆಯ ಬಗ್ಗೆ ನಿಮಗೆ ತಿಳಿದಿರುವ ಶಿವಮೊಗ್ಗ ಹಾಗೂ ದಾವಣಗೆರೆ ರೈತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಫ್ರೀ ಕರೆಂಟ್ ಖುಷಿಯಲ್ಲಿದ್ದವರಿಗೆ ಬೇಸರದ ಸುದ್ದಿ : ನೀವು ಹೆಚ್ಚಿನ ಹಣ ಕಟ್ಟಬೇಕು ನೋಡಿ
- ನೌಕರರ ಮಕ್ಕಳಿಗು ಕೂಡ ಪಿಂಚಣಿ ಸೌಲಭ್ಯ : ಮಕ್ಕಳಿಗೂ ಕೂಡ ಪಿಂಚಣಿಯ ಹಕ್ಕು ಇದೆ