ನಮಸ್ಕಾರ ಸ್ನೇಹಿತರೇ ಹಲವಾರು ಸಮಸ್ಯೆಗಳನ್ನು ರಾಜ್ಯದ ರೈತರು ಎದುರಿಸುತ್ತಿದ್ದಾರೆ ರೈತರು ರಾಜ್ಯದಲ್ಲಿ ಬರದಿಂದ ಅನೇಕ ನಷ್ಟ ಅನುಭವಿಸುತ್ತಿದ್ದು ಸರ್ಕಾರವು ಅವರಿಗಾಗಿ ಹಲವು ಯೋಜನೆಗಳನ್ನು ಹಾಗೂ ಸಾಲ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಇದೀಗ 105 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರವು ಬೆಳೆ ಹಾನಿ ಪರಿಹಾರ ಯೋಜನೆಯಲ್ಲಿ ಬಿಡುಗಡೆ ಮಾಡಿದೆ. ಹಲವಾರು ರೈತರು ಈ ಒಂದು ಯೋಜನೆಯನ್ನು ಪಡೆದುಕೊಂಡಿದ್ದಾರೆ ಪರಿಹಾರ ಧನ ಕೆಲವೊಂದು ರೈತರಿಗೆ ಸಿಗುತ್ತಿಲ್ಲ. ಹಾಗಾದರೆ ಇದಕ್ಕೆ ಮುಖ್ಯ ಕಾರಣ ಏನು ಎಂಬುದನ್ನು ನೋಡುವುದಾದರೆ,
ಸರ್ಕಾರದಿಂದ ರೈತರ ಪಟ್ಟಿ ಬಿಡುಗಡೆ :
ಹಲವಾರು ರೈತರು ಸರ್ಕಾರದಿಂದ ಜಾರಿಗೊಳಿಸಲಾದ ಬೆಳೆಹಾನಿ ಪರಿಹಾರದ ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ರೈತರ ಪಟ್ಟಿಯಲ್ಲಿ ಕೆಲವು ರೈತರ ಹೆಸರು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಹಾಗೆಯೇ ಕೆಲವು ರೈತರ ಹೆಸರು ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಇರುವುದಿಲ್ಲ ಈ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಈ ಕೆಳಗಿನ ಲಿಂಕ್ ನ ಮೂಲಕ ಚೆಕ್ ಮಾಡಬಹುದಾಗಿದೆ.
ಸರ್ಕಾರದಿಂದ ಸಬ್ಸಿಡಿ :
ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬೆಳೆ ಪರಿಹಾರ ಕುರಿತಂತೆ ನಡವಳಿಯನ್ನು ಈಗಾಗಲೇ ಹೊರಡಿಸಿದ್ದಾರೆ. ಎನ್ ಡಿ ಆರ್ ಎಸ್ ಅನುದಾನವನ್ನು ಕೇಂದ್ರ ಸರ್ಕಾರದಿಂದ ಬರ ನಿರ್ವಹಣೆಗಾಗಿ ನಿರೀಕ್ಷಿಸಿ ದಿನಾಂಕ 17-07-2023 ರಲ್ಲಿ ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು ಹೊರಡಿಸಿರುವ ಅನ್ವಯ ಬರ ಪರಿಸ್ಥಿತಿಯಿಂದ ಅರ್ಹ ರೈತರಿಗೆ ಶೇಕಡ 33 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗಿರುವ ಬೆಳೆ ಹಾನಿಗೆ ಇನ್ಪುಟ್ ಸಬ್ಸಿಡಿ ಎಂದು ಗರಿಷ್ಠ ಎರಡು ಹೆಕ್ಟೇರಿಯ ಸೀಮಿತಗೊಳಿಸಿ ನಿಗದಿಪಡಿಸಲಾಗಿದೆ.
ಇದನ್ನು ಓದಿ : ಪ್ರತಿದಿನ Phone Pay ಹಾಗು Google Pay ಮೂಲಕ ಎಷ್ಟು ಹಣ ಕಳಿಸಬಹುದು ನೋಡಿ ,ಹೊಸ ನಿಯಮ
ಬೆಳೆ ಪರಿಹಾರದ ಮೊತ್ತ :
ಪ್ರತಿ ಹೆಕ್ಟರ್ ಗಳಿಗೆ ಮಳೆಯ ಕ್ಷೇತ್ರ ಬೆಳೆ ನಷ್ಟಕ್ಕೆ ರೂ.8500 ಗಳನ್ನು ನಿಗದಿಪಡಿಸಲಾಗಿದೆ. 17000 ನೀರಾವರಿ ಬೆಳಗ್ಗೆ ಹಾಗೂ 22500 ಬಹು ವಾರ್ಷಿಕ ಬೆಳೆ ನಷ್ಟ ಪರಿಹಾರಕ್ಕೆ ನಿಗದಿ ಮಾಡಲಾಗಿದೆ. ಒಟ್ಟು 105 ಕೋಟಿಯನ್ನು ರಾಜ್ಯ ಸರ್ಕಾರವು ಆಯುಕ್ತರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬೆಂಗಳೂರು ಇವರಿಗೆ ಬಿಡುಗಡೆ ಮಾಡಿದೆ.
ಬೆಳೆ ಹಾನಿ ಪಟ್ಟಿಯಲ್ಲಿ ಹೆಸರು ಚೆಕ್ ಮಾಡುವ ವಿಧಾನ :
ಬೆಳೆ ಹಾನಿ ಪಟ್ಟಿಯಲ್ಲಿ ಆಧಾರ್ ಲಿಂಕ್ ಆಗದೆ ಇರುವ ರೈತರ ಹೆಸರನ್ನು ಚೆಕ್ ಮಾಡುವ ವಿಧಾನ https://parihara.karnataka.gov.in/service87/ ಈ ವೆಬ್ ಸೈಟ್ ಗೆ ಭೇಟಿ ನೀಡಿ ಸುಲಭವಾಗಿ ನೋಡಬಹುದಾಗಿದೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಆಧಾರ್ ಲಿಂಕ್ ಮಾಡದೆ ಇರುವವರ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಕೂಡಲೇ ರೈತರು ತಮ್ಮ ಖಾತೆಗೆ ಮಾಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.