ನಮಸ್ಕಾರ ಸ್ನೇಹಿತರೆ ಆಡು ಕುರಿ ಹೈನುಗಾರಿಕೆ ಸೇರಿದಂತೆ ವಿವಿಧ ಉಚಿತ ತರಬೇತಿಗಳನ್ನು ಈ ಸಂಸ್ಥೆಯ ಮೂಲಕ ನೀಡಲಾಗುತ್ತಿದ್ದು ಆಸಕ್ತರು ತಮ್ಮ ಹೆಸರನ್ನು ಮೊಬೈಲ್ ನಲ್ಲಿ ಏನು ನೋಂದಾಯಿಸಿಕೊಳ್ಳಬಹುದಾಗಿದೆ. ರೈತರು ರೈತ ಮಕ್ಕಳು ಹಾಗೂ ಕೃಷಿ ಪಾಶು ಪಾಲನೆಯಲ್ಲಿ ಆಸಕ್ತಿಯುಳ್ಳವರಿಗಾಗಿ ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರವು ಆಡು ಕುರಿ ಹೈನುಗಾರಿಕೆ ಸೇರಿದಂತೆ ವಿವಿಧ ಉಚಿತ ತರಬೇತಿಗಳನ್ನು ಆಯೋಜಿಸಲಾಗಿದೆ.
ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ :
ಆಡು ಕುರಿ ಹೈನುಗಾರಿಕೆ ಸೇರಿದಂತೆ ವಿವಿಧ ಉಚಿತ ತರಬೇತಿಗಳನ್ನು ರೈತರು ಮತ್ತು ರೈತ ಮಕ್ಕಳು ಹಾಗೂ ಕೃಷಿ ಪಶುಪಾಲನೆಯಲ್ಲಿ ಆಸಕ್ತಿಯುಳ್ಳವರಿಗೆ ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರವು ಆಯೋಜಿಸಿದೆ. ಇದೊಂದು ಉತ್ತರ ಕರ್ನಾಟಕದ ಅಭ್ಯರ್ಥಿಗಳಿಗೆ ಒಳ್ಳೆಯ ಅವಕಾಶವಾಗಿದ್ದು ಕೃಷಿ ತೋಟಗಾರಿಕೆ ಪಶುಪಾಲನೆಯ ತಜ್ಞರಿಂದ ವಸತಿ ಉಟ್ಟೋಪಚಾರದೊಂದಿಗೆ ತರಬೇತಿ ಪಡೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
ಮೂರು ದಿನಗಳವರೆಗೆ ಉಚಿತ ತರಬೇತಿ :
ವಿವಿಧ ಪ್ರಾಯೋಜಕರ ನೆರವಿನಿಂದ ಗ್ರಾಮೀಣ ಸಮುದಾಯದಲ್ಲಿ ಉದ್ಯಮಶೀಲ ಸಂಸ್ಕೃತಿ ಬೆಳೆಸುವ ಸ್ವ ಸಹಾಯ ಸಂಸ್ಕೃತಿ ಬೆಳೆಸುವ ಹಾಗೂ ಆರೋಗ್ಯಕರ ಬ್ಯಾಂಕಿಂಗ್ ಸಂಸ್ಕೃತಿ ಬಳಸುವ ಉದ್ದೇಶದಿಂದ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಕಾರ್ಯರಂಭ ಮಾಡಿದ್ದು ಮೂರು ದಿನಗಳ ಉಚಿತ ತರಬೇತಿಯನ್ನು ಈ ಉದ್ದೇಶಗಳ ಸಾಧನೆಗಾಗಿ ಸಂಸ್ಥೆಯು ನೀಡುತ್ತಿದೆ.
ಇದನ್ನು ಓದಿ ; ಮಕ್ಕಳಿಗೆ ತಾಯಿಯ ತವರು ಮನೆಯಿಂದ ಆಸ್ತಿ ಸಿಗುತ್ತದೆಯಾ ? ಕಾನೂನು ಏನು ಹೇಳುತ್ತದೆ ?
ಈ ಸಂಸ್ಥೆಯಲ್ಲಿ ತರಬೇತಿ ನೀಡುವ ಬಗ್ಗೆ ಮಾಹಿತಿ :
ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡುತ್ತಿದ್ದು ಆಡು ಮತ್ತು ಕುರಿ ಸಾಕಣೆ ಕೋಳಿ ಸಾಕಣೆ ಹಣ್ಣು ಬೆಳೆಗಳ ಕೃಷಿ ಹೈನುಗಾರಿಕೆ ಪುಷ್ಪ ತರಕಾರಿ ಬೆಳೆಗಳ ಕೃಷಿ ಸಾವಯುವ ಕೃಷಿ ಜೇನು ಕೃಷಿ ಸಮಗ್ರ ಕೃಷಿ ರೇಷ್ಮೆ ಕೃಷಿ ಹಾಗೂ ರೈತರ ಬೇಡಿಕೆಗಳಿಗೆ ಅನುಗುಣವಾಗಿ ಇತರ ತರಬೇತಿಗಳನ್ನು ಕೂಡ ಈ ಕೇಂದ್ರದಲ್ಲಿ ಆಯೋಜಿಸಲಾಗುತ್ತದೆ.
ಹೆಸರನ್ನು ನೋಂದಾಯಿಸುವ ವಿಧಾನ :
ಈ ತರಬೇತಿಗಾಗಿ ಆಸಕ್ತರು ಹೆಸರನ್ನು ನೋಂದಾಯಿಸಬೇಕಾದರೆ 18 ವರ್ಷ ಮೇಲ್ಪಟ್ಟವರು ಹಾಗೂ 55 ವರ್ಷದೊಳಗಿರುವ ರೈತರ ರಜಾ ದಿನಗಳು ಈ ಕೆಳಕಂಡ ಫೋನ್ ನಂಬರ್ಗಳಿಗೆ ಅಂದರೆ ಎರಡನೇ ಶನಿವಾರ ಮತ್ತು ನಾಲ್ಕನೆಯ ಶನಿವಾರವನ್ನು ಹೊರತುಪಡಿಸಿ ಕೆಲಸದ ದಿನಗಳಲ್ಲಿ ಆಫೀಸ್ ವೇಳೆಯಲ್ಲಿ ತರಬೇತಿಯ ಬಗೆಗೆ ತಿಳಿಸಿ ತಮ್ಮ ಹೆಸರು ಹಾಗೂ ಮೊಬೈಲ್ ನಂಬರ್ ಅನ್ನು ಆಸಕ್ತರು ನೋಂದಾಯಿಸಬಹುದಾಗಿದೆ. ವಿವಿಧ ತರಬೇತಿ ಕಾರ್ಯಕ್ರಮಗಳನ್ನು ರೈತರ ಬೇಡಿಕೆಗೆ ಅನುಗುಣವಾಗಿ ಆಯೋಜಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ :
ಬಾಗಲಕೋಟೆ ಜಿಲ್ಲೆಯಲ್ಲಿ ಆಯೋಜಿಸಿರುವ ಇತರ ರೀತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಅಭ್ಯರ್ಥಿಗಳು ದೂರವಾಣಿ ಸಂಖ್ಯೆಯಾದ 08354-244048 ಈ ಸಂಖ್ಯೆಗೆ ಮೊಬೈಲ್ ನಂಬರ್ 9482630790 ಈ ಸಂಖ್ಯೆಗೆ ಕರೆ ಮಾಡಬಹುದು ಹಾಗೂ ವಿಳಾಸ
ಬಿವಿವಿ ಸಂಘದ ಸ್ಪಿನ್ನಿಂಗ್ ಸ್ಮಿಲ್ ಆವರಣ
ಗದ್ದನಕೇರಿ ರೋಡ್
ಬಾಗಲಕೋಟೆ -587102
ಈ ವಿಳಾಸಕ್ಕೆ ಭೇಟಿ ನೀಡಬಹುದಾಗಿದೆ.
ಒಟ್ಟಾರೆಯಾಗಿ ರೈತರಿಗೆ ತರಬೇತಿ ನೀಡುವ ಉದ್ದೇಶದಿಂದ ಬಾಗಲಕೋಟೆ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಉಚಿತ ತರಬೇತಿಗಳನ್ನು ನೀಡುತ್ತಿದ್ದು ಈ ಬಗ್ಗೆ ನಿಮಗೆ ತಿಳಿದಿರುವ ಎಲ್ಲ ರೈತರಿಗೆ ಶೇರ್ ಮಾಡುವ ಮೂಲಕ ಬಾಗಲಕೋಟೆಯಲ್ಲಿ ಉಚಿತ ತರಬೇತಿ ಲಭ್ಯವಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ನಿಮ್ಮ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಇಲ್ವಾ….? ಚಿಂತಿಸಬೇಡಿ ಕೇವಲ 10 ನಿಮಿಷದಲ್ಲಿ ಸಿಗುತ್ತೆ
- ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಲು ಗಡುಗು ವಿಸ್ತರಣೆ : ಕೊನೆ ದಿನಾಂಕ ಯಾವಾಗ .?