ನಮಸ್ಕಾರ ಸ್ನೇಹಿತರೇ ಪ್ರತಿ ಬಸ್ಸಿನಲ್ಲಿ ಪ್ರಯಾಣಿಕರು ಮಹಾಲಕ್ಷ್ಮಿ ಯೋಜನೆ ಜಾರಿಯಾದ ನಂತರ ತುಂಬಿ ತುಳುಕುತ್ತಿರುವುದರಿಂದ ತಮ್ಮ ಬಸ್ಸುಗಳು ಹಾಳಾಗುತ್ತಿವೆ ಎಂದು ಸಾಕಷ್ಟು ಮಾಲೀಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಕಾರಣ ರಸ್ತೆ ಅಪಘಾತಗಳು ಕೂಡ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಯೋಜನೆ :
ಕಾಂಗ್ರೆಸ್ ಸರ್ಕಾರವು ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಉಚಿತ ಬಸ್ ಯೋಜನೆಯನ್ನು ಜಾರಿಗೆ ತಂದಿದೆ ಸಿಎಂ ರೇವಂತ್ ರೆಡ್ಡಿ ಅವರು ಮಹಾಲಕ್ಷ್ಮಿ ಯೋಜನೆಯ ಅಂಗವಾಗಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಡಿಸೆಂಬರ್ 9 ರಂದು ಮುಖ್ಯಮಂತ್ರಿ ರೇವಂತ್ ರವರು ಈ ಯೋಜನೆಗೆ ಚಾಲನೆ ನೀಡಿದರು ಆದರೆ ಮಹಿಳೆಯರು ಈ ಉಚಿತ ಬಸ್ ನಲ್ಲಿ ಪ್ರಯಾಣಿಸಲು ಕೆಲವು ಷರತ್ತುಗಳನ್ನು ಕೂಡ ವಿಧಿಸಲಾಗಿದೆ. ಮಹಿಳೆಯರು ತೆಲಂಗಾಣ ರಾಜ್ಯದ ಮಹಿಳೆಯರಾಗಿದ್ದರೆ ಮಾತ್ರ ನೀವು ಉಚಿತ ಬಸ್ ಪ್ರಯಾಣ ಸೌಲಭ್ಯ ದೊರೆಯಲಿದೆ ಎಂದು ತೆಲಂಗಾಣ ರಾಜ್ಯ ಸರ್ಕಾರವು ಸ್ಪಷ್ಟನೆ ನೀಡಿದೆ.
ಇದನ್ನು ಓದಿ : ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಲು ಗಡುಗು ವಿಸ್ತರಣೆ : ಕೊನೆ ದಿನಾಂಕ ಯಾವಾಗ .?
ತೆಲಂಗಾಣ ರಾಜ್ಯದಲ್ಲಿ ಉಚಿತ ಬಸ್ಸು ಸೌಲಭ್ಯ :
ತೆಲಂಗಾಣ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣದ ಮೂಲಕ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಮಹಿಳೆಯರಿಗೆ ಹೋಗಲು ಸ್ವಾತಂತ್ರ್ಯ ನೀಡಿರುವುದರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ತೆಲಂಗಾಣ ರಾಜ್ಯದಲ್ಲಿ ವ್ಯಕ್ತವಾಗಿದೆ. ಈ ಉಚಿತ ಬಸ್ ಸೌಲಭ್ಯವನ್ನು ಎಲ್ಲಾ ಮಹಿಳೆಯರು ಬಳಸಿಕೊಳ್ಳುತ್ತಿದ್ದಾರೆ ಆದರೆ ಹಲವು ಸಮಸ್ಯೆಗಳನ್ನು ಕೂಡ ಈ ಉಚಿತ ಬಸ್ ಯೋಜನೆಯು ಎದುರಿಸುತ್ತಿದೆ. ಆರ್ ಟಿ ಸಿ ಗೆ ಬಸ್ಗಳನ್ನು ಬಾಡಿಗೆಗೆ ನೀಡುವ ಮಾಲೀಕರು ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆಯಿಂದ ಅಸಮಧಾನಗೊಂಡಿದ್ದಾರೆ. 2700 ಬಾಡಿಗೆ ಬಸುಗಳನ್ನು ಟಿಎಸ್ಆರ್ಟಿಸಿ ತೆಲಂಗಾಣದಾದ್ಯಂತ ಹೊಂದಿದೆ. ಎಲ್ಲ ಮಾಲೀಕರು ಉಚಿತ ಬಸ್ ಯೋಜನೆಯಿಂದ ಬಸ್ ಗಳು ಹಾಳಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಚಿತ ಬಸ್ ಯೋಜನೆಯಿಂದ ಕೆಲವು ಸಮಸ್ಯೆಗಳು :
ಟಿಎಸ್ಆರ್ ಟಿಸಿಯಲ್ಲಿ ಉಚಿತ ಬಸ್ ಯೋಜನೆ ಯಶಸ್ವಿಯಾಗಿ ನಡೆಯುತ್ತಿರುವ ಹೊತ್ತಿನಲ್ಲಿ ಮುಷ್ಕರದ ಸೈರನ್ ಮೊಳಗುತ್ತಿದೆ ಸರ್ಕಾರವು ತಮ್ಮ ಸಮಸ್ಯೆಗಳನ್ನು ಬಗೆಹರಿಸದೇ ಇದ್ದಲ್ಲಿ ಬಸ್ ಮಾಲೀಕರು ಇದೆ ಐದರಿಂದ ಬಂದ್ ಗೆ ಕರೆ ನೀಡಿದ್ದಾರೆ. ಆದರೆ ಬಾಡಿಗೆ ಬಸ್ಗಳ ಮಾಲೀಕರೊಂದಿಗೆ ಟಿ ಎಸ್ ಆರ್ ಟಿ ಸಿ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಈ ನಿಟ್ಟಿನಲ್ಲಿ ಬಾಡಿಗೆ ಬಸ್ ಮಾಲೀಕರನ್ನು ಚರ್ಚೆಗೆ ಆಹ್ವಾನಿಸಿದ್ದು ಈ ಮಾತುಕತೆ ಏನಾದರೂ ವಿಫಲವಾದರೆ ತೆಲಂಗಾಣದಲ್ಲಿ ಬಾಸ್ ಬಾಡಿಗೆಗೆ ನಾಳೆಯಿಂದ ನಿಷೇಧ ಹೇರಲಾಗುತ್ತದೆ.
ಒಟ್ಟಾರಿಯಾಗಿ ಕರ್ನಾಟಕ ರಾಜ್ಯದ ಇರುವಂತೆ ತೆಲಂಗಾಣ ರಾಜ್ಯದಲ್ಲಿಯೂ ಕೂಡ ಉಚಿತ ಬಸ್ ಸೌಲಭ್ಯ ಲಭ್ಯವಿದ್ದು ಇದರಿಂದ ಸಾಕಷ್ಟು ಸಮಸ್ಯೆಗಳು ತೆಲಂಗಾಣ ರಾಜ್ಯದಲ್ಲಿ ಉಂಟಾಗುತ್ತಿವೆ ಎಂಬುದರ ಬಗ್ಗೆ ಕೇಳಿ ಬರುತ್ತಿದೆ. ಹಾಗಾಗಿ ತೆಲಂಗಾಣ ರಾಜ್ಯದಲ್ಲಿ ಉಚಿತ ಬಸ್ಸು ಸೇವೆಯಿಂದ ಕೆಲವೊಂದು ಸಮಸ್ಯೆಗಳು ಉಂಟಾಗುತ್ತಿದೆ ಎಂಬುದರ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು
ಇತರೆ ವಿಷಯಗಳು :
- ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ : ಈ ವಿಷಯ ಮಹಿಳೆಯರಿಗೆ ತಿಳಿದಿರಲಿ
- ನಿಮ್ಮ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಇಲ್ವಾ….? ಚಿಂತಿಸಬೇಡಿ ಕೇವಲ 10 ನಿಮಿಷದಲ್ಲಿ ಸಿಗುತ್ತೆ