ನಮಸ್ಕಾರ ಸ್ನೇಹಿತರೆ ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರವಾಗಿಸುವ ಅತ್ಯುತ್ತಮ ಯೋಜನೆ ಎಂದರೆ ಅದು ಸುಖನ್ಯ ಸಮೃದ್ಧಿ ಯೋಜನೆ ಯಾಗಿದೆ. ಈ ಯೋಜನೆಯಲ್ಲಿ ಅತಿ ಕಡಿಮೆ ಹಣದಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಹಣವನ್ನು ಗಳಿಕೆ ಮಾಡುವಂತಹ ಯೋಜನೆ ಇದಾಗಿದ್ದು ಮಕ್ಕಳ ಭವಿಷ್ಯದ ಸಲುವಾಗಿ ಪಾಲಕರು ಹಣ ಉಳಿತಾಯ ಮಾಡುವಂತಹ ಕೇಂದ್ರ ಸರ್ಕಾರ ಉತ್ತಮ ಯೋಜನೆಗಳನ್ನು ಪರಿಚಯಿಸುತ್ತದೆ ಅಂತಹ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯು ಕೂಡ ಒಂದಾಗಿದ್ದು ಈ ಯೋಜನೆಯ ಪ್ರಯೋಜನವನ್ನು ಈಗಾಗಲೇ ಕೋಟ್ಯಂತರ ಜನರು ಪಡೆದಿದ್ದಾರೆ.
ಹೆಣ್ಣು ಮಗುವಿಗಾಗಿ ಕೇಂದ್ರ ಸರ್ಕಾರದ ಯೋಜನೆ :
ಹೆಣ್ಣು ಮಕ್ಕಳಿಗಾಗಿಯೇ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರವು ಆರಂಭಿಸಿದ್ದು 10 ವರ್ಷ ವಯಸ್ಸಿನ ಒಳಗೆ ಹೆಣ್ಣು ಮಗು ಏನಾದರೂ ಇದ್ದರೆ ಆ ಮಗುವಿನ ಹೆಸರಿನಲ್ಲಿ ಒಂದು ಉಳಿತಾಯ ಖಾತೆಯನ್ನು ಪ್ರಾರಂಭಿಸಬಹುದಾಗಿದೆ. ಕೇವಲ ನಾಲ್ಕು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಉಳಿತಾಯ ಮಾಡಿದರೆ 22 ಲಕ್ಷದವರೆಗೆ ಲಾಭವನ್ನು ಪಡೆಯಬಹುದಾಗಿದೆ.
ಸಮೃದ್ಧಿ ಯೋಜನೆಯ ಬಡ್ಡಿದರ ಹಾಗೂ ಹೂಡಿಕೆಯ ಮೊತ್ತ :
ಕೇಂದ್ರ ಸರ್ಕಾರವು ಇದೀಗ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಬಡ್ಡಿ ದರವನ್ನು ಹೆಚ್ಚಳ ಮಾಡಿದ್ದು ಈ ಹಿಂದೆ ಶೇಕಡ 8% ರಷ್ಟು ಬಡ್ಡಿದರವನ್ನು ನೀಡಲಾಗುತ್ತಿತ್ತು ಆದರೆ ಇದೀಗ ಶೇಕಡ 8.2ರಷ್ಟು ಬಡ್ಡಿದರವನ್ನು ಹೆಚ್ಚಿಸಿದೆ. ಈ ಯೋಜನೆಯಲ್ಲಿ ಕನಿಷ್ಠ 250 ರೂಪಾಯಿಗಳನ್ನು ಹೂಡಿಕೆ ಮಾಡಬಹುದಾಗಿತ್ತು ನಂತರದ ದಿನಗಳಲ್ಲಿ ನೂರು ರೂಪಾಯಿಗಳಂತೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಂದುವರೆ ಲಕ್ಷ ರೂಪಾಯಿಗಳು ಗರಿಷ್ಠ ಹೂಡಿಕೆಯ ಮೊತ್ತವಾಗಿದ್ದು ಕನಿಷ್ಠ 250 ರೂಪಾಯಿಗಳನ್ನಾದರೂ ಒಂದು ವರ್ಷದಲ್ಲಿ ಠೇವಣಿ ಇಡಬೇಕಾಗುತ್ತದೆ ಇಲ್ಲದಿದ್ದರೆ ದಂಡವನ್ನು ಪಾವತಿಸಬೇಕು.
ಇದನ್ನು ಓದಿ : ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಲು ಗಡುಗು ವಿಸ್ತರಣೆ : ಕೊನೆ ದಿನಾಂಕ ಯಾವಾಗ .?
ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಬಡವರು ಕೂಡ ತಮ್ಮ ಮಕ್ಕಳ ಹೆಸರಿನಲ್ಲಿ ಕೇಂದ್ರ ಸರ್ಕಾರದ ಸುಕನ್ಯ ಸಮೃದ್ಧಿ ಯೋಜನೆಯ ಅಡಿಯಲ್ಲಿ ಅವರ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಅತ್ಯುತ್ತಮ ಯೋಜನೆ ಯಾಗಿದ್ದು ಈ ಯೋಜನೆಯ ಮೂಲಕ ತಮ್ಮ ಮೊದಲ ಹಾಗೂ ಎರಡನೇ ಮಗುವಿನ ಹೆಸರಿನಲ್ಲಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಅಲ್ಲದೆ ಈ ಯೋಜನೆಯ ಪ್ರಯೋಜನವನ್ನು ಸುಲಭವಾಗಿ ಪಡೆದುಕೊಳ್ಳಬೇಕಾದರೆ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಈ ಯೋಜನೆಯನ್ನು ಪ್ರಾರಂಭಿಸಲು ಅಗ್ನಿ ಫಾರಂ ಭರ್ತಿ ಮಾಡಿ ಹೂಡಿಕೆಯನ್ನು ಪೋಸ್ಟ್ ಆಫೀಸ್ ಮೂಲಕ ಪ್ರಾರಂಭಿಸಬಹುದಾಗಿದೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಈ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ನಿಮಗೆ ತಿಳಿದಿರುವ ಹೆಣ್ಣು ಮಗುವಿನ ಪೋಷಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ : ಈ ವಿಷಯ ಮಹಿಳೆಯರಿಗೆ ತಿಳಿದಿರಲಿ
- ನಿಮ್ಮ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಇಲ್ವಾ….? ಚಿಂತಿಸಬೇಡಿ ಕೇವಲ 10 ನಿಮಿಷದಲ್ಲಿ ಸಿಗುತ್ತೆ