ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳಲ್ಲಿ ಕೊನೆಯ ಯೋಜನೆಯದ ಯುವನಿಧಿ ಯೋಜನೆಯನ್ನು ಜಾರಿಗೊಳಿಸಿದ ನಂತರ ಸಾವಿರಾರು ಜನರು ಅರ್ಜಿಯನ್ನು ಯುವನಿಧಿ ಯೋಜನೆಗೆ ಸಲ್ಲಿಸಿದ್ದಾರೆ ಎಂದು ಹೇಳಬಹುದು. ಈಗಾಗಲೇ ಸರ್ಕಾರವೂ ಕೂಡ ಹಣ ಜಮಾ ಮಾಡುವ ದಿನಾಂಕವನ್ನು ಕೂಡ ಘೋಷಣೆ ಮಾಡಿದ್ದು ಇನ್ನೇನು ಈ ಯೋಜನೆಯ ಹಣವು ಕೆಲವೇ ದಿನಗಳಲ್ಲಿ ನಿರುದ್ಯೋಗಿಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ಹೇಳಿದರೆ ತಪ್ಪಾಗಲಾರದು.
ಡಿಸೆಂಬರ್ 26 ರಿಂದ ಯೋಜನೆಗೆ ಅರ್ಜಿ ಸಲ್ಲಿಕೆ :
ಜನವರಿಯಲ್ಲಿ ರಾಜ್ಯ ಸರ್ಕಾರವು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಂಡಿದ್ದು ಅರ್ಹ ಫಲಾನುಭವಿಗಳಿಗೆ ಡಿಸೆಂಬರ್ 26ರಿಂದ ರಾಜ್ಯ ಸರ್ಕಾರ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಈಗಾಗಲೇ ನಿರುದ್ಯೋಗ ಯುವಕ ಯುವತಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. 2022 23ನೇ ಸಾಲಿನಲ್ಲಿ ಸರ್ಕಾರವು ಉತ್ತೀರ್ಣರಾಗಿ ಆರು ತಿಂಗಳ ಉದ್ಯೋಗ ಇಲ್ಲದವರಿಗೆ ಈ ಯೋಜನೆಯ ಲಾಭ ನೀಡಲು ನಿರ್ಧರಿಸಿದೆ ಈ ಯೋಜನೆಯ ಅಡಿಯಲ್ಲಿ ಕೇವಲ ಎರಡು ವರ್ಷಗಳು ಮಾತ್ರ ನಿರುದ್ಯೋಗ ವೆಚ್ಚ ಸಿಗಲಿದ್ದು ಇನ್ನೂ ಉದ್ಯೋಗ ದೊರೆತರೆ ಎರಡು ವರ್ಷಗಳ ಒಳಗಾಗಿ ಮಾಸಿಕ ಹಣವನ್ನು ಸ್ಥಗಿತಗೊಳಿಸಲಾಗುತ್ತದೆ.
ಇದನ್ನು ಓದಿ : ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಲು ಗಡುಗು ವಿಸ್ತರಣೆ : ಕೊನೆ ದಿನಾಂಕ ಯಾವಾಗ .?
ಉದ್ಯಮಶೀಲತೆ ತರಬೇತಿ :
ರಾಜ್ಯ ಸರ್ಕಾರವು ರಾಜ್ಯದ ನಿರುದ್ಯೋಗ ಯುವಕ ಯುವತಿಯರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ನಿರುದ್ಯೋಗ ಬಚ್ಚೆಯನ್ನು ನೀಡಲು ನಿರ್ಧರಿಸಿತ್ತು ಅದರಂತೆ ಇದೀಗ ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಉದ್ಯಮಶೀಲತೆ ತರಬೇತಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೇವಲ ಹಣವನ್ನು ನಿರುದ್ಯೋಗಿಗಳಿಗೆ ನೀಡುವುದಷ್ಟೇ ಅಲ್ಲದೆ ಬದಲಾಗಿ ಉದ್ಯಮಶೀಲತೆ ಕಲ್ಪಿಸಿ ಉದ್ಯಮ ನೀಡುವುದು ನಮ್ಮ ಗುರಿಯಾಗಿದೆ ಎಂದು ಸಚಿವರಾದ ಪ್ರಿಯಾಂಕ ಖರ್ಗೆ ಅವರು ರಾಜ್ಯದ ಜನತೆಗೆ ತಿಳಿಸಿದ್ದಾರೆ.
ಹೀಗೆ ರಾಜ್ಯ ಸರ್ಕಾರವು ಯುವ ನಿಧಿ ಯೋಜನೆಯ ಬೆನ್ನಲ್ಲೇ ಇದೀಗ ಉದ್ಯಮಶೀಲತೆ ತರಬೇತಿಯನ್ನು ನೀಡುತ್ತಿದ್ದು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಯುವಕ ಯುವತಿಯರು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು ;
- ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ : ಈ ವಿಷಯ ಮಹಿಳೆಯರಿಗೆ ತಿಳಿದಿರಲಿ
- ನಿಮ್ಮ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಇಲ್ವಾ….? ಚಿಂತಿಸಬೇಡಿ ಕೇವಲ 10 ನಿಮಿಷದಲ್ಲಿ ಸಿಗುತ್ತೆ