News

ಗೃಹಲಕ್ಷ್ಮಿಯರಿಗೆ ಹೊಸ ರೂಲ್ಸ್ ಕಡ್ಡಾಯ : ಪಾಲಿಸಿದರೆ ಮಾತ್ರ ಹಣ ಜಮಾ ಆಗುತ್ತೆ

New rules are mandatory for home seekers

ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 5ನೇ ತಂತಿನ ಹಣಕ್ಕಾಗಿ ಈ ಕೆಲಸ ಮಾಡುವುದು ಕಡ್ಡಾಯವಾಗಿದ್ದು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 4ನೇ ಕoತಿನ ಹಣವನ್ನು ಫಲಾನುಭವಿಗಳು ಪಡೆದಿದ್ದಾರೆ ಆದರೆ ಇದೀಗ ಐದನೇ ಕಂತಿನ ಹಣವನ್ನು ಪಡೆಯಬೇಕಾದರೆ ಒಂದು ಪ್ರಮುಖ ಕಾರ್ಯವನ್ನು ಮಹಿಳೆಯರು ಮಾಡಬೇಕಾಗಿದೆ.

New rules are mandatory for home seekers
New rules are mandatory for home seekers

ಆರ್ಥಿಕ ಸ್ವಾವಲಂಬನೆಗಾಗಿ ಯೋಜನೆ :

ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಅದರಲ್ಲಿಯೂ ಮುಖ್ಯವಾಗಿ ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆ ಯಾಗಿದೆ. ಕುಟುಂಬದ ಯಜಮಾನಿಯಾಗಿರುವ ಮಹಿಳೆಯರಿಗೆ ಪ್ರತಿ ತಿಂಗಳು 2000 ನಗದು ನೆರವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಈ ಯೋಜನೆಯ ನೆರವಿನಿಂದ ತಮ್ಮ ಕುಟುಂಬದ ನಿರ್ವಹಣೆ ಮಕ್ಕಳ ಶಿಕ್ಷಣ ಆರೋಗ್ಯ ಸೇವೆಗಳು ಸೇರಿದಂತೆ ವಿವಿಧ ಖರ್ಚುಗಳನ್ನು ಮಹಿಳೆಯರು ಬರಿಸಲು ಸಾಧ್ಯವಾಗುತ್ತದೆ. ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬನೆಯನ್ನು ಸಾಧಿಸಲು ಇದು ಸಹಾಯ ಮಾಡುತ್ತದೆ.

ಈಕೆ ವೈ ಸಿ ಕಡ್ಡಾಯ :

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚಿನ ನವೀಕರಣದಲ್ಲಿ ಗೃಹಲಕ್ಷ್ಮಿ ಯೋಜನೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ತಿಂಗಳ ಅಂತ್ಯದೊಳಗೆ ಸರ್ಕಾರವು ನವೀನ ನಿಯಮಗಳನ್ನು ಜಾರಿಗೆ ತರುತ್ತಿದೆ. ಗುರು ಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಮುನ್ನ ಸರ್ಕಾರವು ಅರ್ಹ ಫಿಲಾನುಭವಿಗಳಿಗೆ ಹೊರಡಿಸಿರುವ ಮಹತ್ವದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಸರ್ಕಾರವು ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದು ಮಹಿಳೆಯ ಹೆಸರಿನಲ್ಲಿರುವ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಪ್ರತಿ ಮತ್ತು ಈ ಕೆ ವೈ ಸಿ ಆಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ಅರ್ಜಿ ಸಲ್ಲಿಸಲು ಮಹಿಳೆಯರು ಹತ್ತಿರದ ಸೇವ ಕೇಂದ್ರಕ್ಕೆ ಸಲ್ಲಿಸಬಹುದಾಗಿದೆ.

ಇದನ್ನು ಓದಿ : ಆರ್ಥಿಕ ವರ್ಷದ ಆರಂಭದೊಳಗೆ ಈ 5 ಕೆಲಸಗಳನ್ನು ಮಾಡಿ ಮುಗಿಸಿ! ಇಲ್ಲದಿದ್ದರೆ ಭಾರಿ ದಂಡ ಕಟ್ಬೇಕು

ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರು ಅಥವಾ ಆ ಕುಟುಂಬದ ಸದಸ್ಯರು ಹಾಗೂ ತೆರಿಗೆ ಪಾವತಿ ಮಾಡುವವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಗಳ ಮೂಲಕ ರಾಜ್ಯ ಸರ್ಕಾರವು ರಾಜ್ಯದ ಬಡ ಮತ್ತು ಅಸಹಾಯಕ ಕುಟುಂಬಗಳಿಗೆ ಆಹಾರ ಮತ್ತು ಆರ್ಥಿಕ ಸಹಾಯವನ್ನು ನೀಡುತ್ತಿದೆ. ಬ್ಯಾಂಕ್ ಖಾತೆಗೆ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಈ ಕೆವೈಸಿ ಆಗಿರುವುದು ಕಡ್ಡಾಯವಾಗಿದೆ ಅದೇ ರೀತಿ ಈ ನಿಯಮವನ್ನು ಗೃಹಲಕ್ಷ್ಮಿ ಯೋಜನೆ ತರಲಾಗಿದೆ.


ಹೀಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಈ ಕೆವೈಸಿ ಯನ್ನು ಕಡ್ಡಾಯ ಮಾಡಿದ್ದು ಇದನ್ನು ಮಾಡಿಸದೆ ಇದ್ದರೆ ಹಣ ಜಮಾ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ ಹಾಗಾಗಿ ಈ ಕೆವೈಸಿ ಮಾಡಿಸದೆ ಇರುವವರು ಕೂಡಲೇ ಈಕೆವೈಸಿಯನ್ನು ಮಾಡಿಸಿ ಯೋಜನೆಯ ಹಣ ಬರುವಂತೆ ಮಾಡಿಕೊಳ್ಳಬಹುದಾಗಿದೆ ಹಾಗಾಗಿ ಮಾಹಿತಿಯನ್ನು ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...