ನಮಸ್ಕಾರ ಸ್ನೇಹಿತರೆ ಒಂದೇ ಜಮೀನಿನಲ್ಲಿ 15 ವರ್ಷಗಳಿಂದಲೂ ಸಾಗುವಳಿ ಮಾಡುತ್ತಾ ಬಂದಿರುವ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ ನೀಡಲಾಗಿದೆ. ಯಾರು ಸರ್ಕಾರದ ಜಮೀನಿನಲ್ಲಿ ಕೇವಲ ಎಂಟು ತಿಂಗಳ ಒಳಗೆ ಕಳೆದ 15 ವರ್ಷಗಳಿಂದ ಉಳಿಮೆ ಮಾಡಿಕೊಂಡು ಬರುತ್ತಿದ್ದಾರೆ ಅಂತಹ ರೈತರನ್ನು ರಾಜ್ಯ ಸರ್ಕಾರವು ಗುರುತಿಸಿ, ಅವರ ಅರ್ಜಿಗಳನ್ನು ಮಾನ್ಯ ಮಾಡಿ ಸಾಗುವಳಿ ಚೀಟಿ ವಿತರಣೆ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರದಿಂದ ಜಮೀನು ಸಕ್ರಮಕ್ಕೆ ಆದೇಶ :
ಹದಿನೈದು ವರ್ಷಗಳಿಂದ ಯಾರು ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಬರುತ್ತಿದ್ದಾರೆ ಅಂತಹ ರೈತರನ್ನು ಗುರುತಿಸಿ ಆ ರೈತರ ಅರ್ಜಿಗಳನ್ನು ಮಾನ್ಯ ಮಾಡುವುದರ ಮೂಲಕ ಸಾಗುವಳಿ ಚೀಟಿಯನ್ನು ಆ ರೈತರಿಗೆ ವಿತರಣೆ ಮಾಡುವುದಾಗಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ರಾಜ್ಯದ ಜನತೆಗೆ ತಿಳಿಸಿದ್ದಾರೆ. ಅರ್ಜಿ ಫಾರಂ 57ನ್ನು ಕೃಷಿ ಭೂಮಿಯ ಸಕ್ರಮಕ್ಕೆ ಸಲ್ಲಿಕೆ ಮಾಡಬೇಕು. ಲಕ್ಷಾಂತರ ಅರ್ಜಿಗಳು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಂದಾಯವಾಗಿದ್ದು ಅವುಗಳಲ್ಲಿ ಯಾವುದು ನಕಲಿ ಹಾಗೂ ಯಾವುದು ಅಸಲಿ ಅರ್ಜಿ ಎಂದು ಸರ್ಕಾರಕ್ಕೆ ಗುರುತಿಸುವುದು ದೊಡ್ಡ ಸವಾಲಾಗಿದೆ.
ಬಗರ್ ಹುಕುಂ ಸಮಿತಿ ರಚನೆ :
ಇಲ್ಲಿಯವರಿಗೆ ಸುಮಾರು 15 ಅರ್ಜಿ ಗಿಂತ ಒಬ್ಬನೇ ವ್ಯಕ್ತಿ ಜಾಸ್ತಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರೆ ಅದರಲ್ಲಿಯೂ ಕೃಷಿ ಭೂಮಿಯನ್ನು ಸಾಕಷ್ಟು ಜನ ಹೊಂದಿರದೆ ಇದ್ದರೂ ಕೂಡ ಸಾಗುವಳಿ ಮಾಡುತ್ತಿರುವುದಾಗಿ ಸರ್ಕಾರದ ವರದಿಯ ಪ್ರಕಾರ ನಕಲಿ ದಾಖಲೆಗಳನ್ನು ನೀಡಿದ್ದಾರೆ. ರಾಜ್ಯ ಸರ್ಕಾರವು ಇದೆಲ್ಲವನ್ನು ಗಮನಿಸಿದ್ದು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಬಗರ್ ಹುಕುಂ ಸಮಿತಿ ರಚನೆ ಮಾಡಲು ರಾಜ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಮನವಿ ಬಂದಿದ್ದು.
ಇದನ್ನು ಓದಿ ; ಗ್ರಾಹಕರ ಜೇಬಿಗೆ ಕತ್ತರಿ :5ನಿಯಮಗಳು ಡಿಸೆಂಬರ್ 1ರಿಂದ ಬದಲಾಗಲಿದೆ
ಜಿಲ್ಲಾಮಟ್ಟದಲ್ಲಿ ಶೀಘ್ರದಲ್ಲಿಯೇ ಈ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಸಂಪೂರ್ಣವಾಗಿ ಈ ಸಮಿತಿಯಲ್ಲಿ ನಡೆಯುವ ಸಭೆ ಡಿಜಿಟಲೀಕರಣ ಗೊಳಿಸಲಾಗುತ್ತದೆ. ಸಚಿವರು ಪ್ರತಿಯೊಂದು ಸಭೆಯ ರೆಕಾರ್ಡ್ ಇಡಲು ತಿಳಿಸಿದ್ದು ಇದಷ್ಟೇ ಅಲ್ಲದೆ ಸದಸ್ಯರ ಬಯೋಮೆಟ್ರಿಕ್ ದಾಖಲೆಯೂ ಸಹ ಆಗಬೇಕೆಂದು ಈ ಮೂಲಕ ಸರಿಯಾಗಿ ರೈತರು ಸದಸ್ಯರನ್ನು ಪರಿಶೀಲಿಸಿ ಅಗತ್ಯ ಇರುವವರಿಗೆ ಮಾತ್ರ ಸಾಗುವಳಿ ಚೀಟಿ ನೀಡುವಂತೆ ಸರ್ಕಾರವು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. 980 ರ ಹಿಂದೆ ಎಲ್ಲಾ ದಾಖಲೆಗಳನ್ನು ಡಿಜಿಟಲ್ಲಿಕರಿಸುವುದು ಜನ ಕೃಷಿ ಭೂಮಿ ಇಲ್ಲದೆ ಕಷ್ಟಪಡುತ್ತಿದ್ದರು ಇಂತಹ ಸಂದರ್ಭದಲ್ಲಿ ಎರಡು ಎಕರೆ ಜಮೀನನ್ನು ಸರ್ಕಾರ ನೀಡಿತ್ತು. ಅದಾದ ನಂತರ ಯಾವುದೇ ಕ್ರಮವನ್ನು ಅಕ್ರಮ ಸಕ್ರಮಕ್ಕಾಗಿ ಸರ್ಕಾರವು ಕೈಗೊಂಡಿರಲಿಲ್ಲ.
ಹೀಗೆ ಕಂದಾಯ ಇಲಾಖೆಯಲ್ಲಿರುವ ಎಲ್ಲಾ ಭೂಮಿಗೆ ಸಂಬಂಧಪಟ್ಟ ದಾಖಲೆಗಳನ್ನು ರೈತರು ನೀಡುವ ಮೂಲಕ ಸಕ್ರಮ ಭೂಮಿಯನ್ನು ಪಡೆದುಕೊಳ್ಳಬಹುದಾಗಿದೆ ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ 15 ವರ್ಷಗಳಿಂದ ಉಳುಮೆ ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಕ್ರಮಸಕ್ರಮ ಜಮೀನು ರೈತರಿಗೆ ರಾಜ್ಯ ಸರ್ಕಾರವು ವಿತರಣೆ ಮಾಡಲು ನಿರ್ಧರಿಸಿದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು
ಇತರೆ ವಿಷಯಗಳು :
ಕ್ರೆಡಿಟ್ ಕಾರ್ಡ್ ಬಳಸುವವರಿಗೆ EMI ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
ಲಕ್ಷಾಂತರ ರೈಲ್ವೆ ಪ್ರಯಾಣಿಕರಿಗೆ :ಉಚಿತ ಆಹಾರ, ಹೊಸ ನಿಯಮ