News

ಈ ಬಾರಿಯ ಬಿಗ್ ಬಾಸ್ ನಲ್ಲಿ ಒಂದೇ ದಿನ ಇಬ್ಬರು ವಿಜೇತರು, ಎರಡು ಟ್ರೋಫಿ ಇದು ಡಬ್ಬಲ್ ಧಮಾಕಾ

kannada bigg boss winners

ನಮಸ್ಕಾರ ಸೇಹಿತರೇ ಈ ವಾರ ಬಿಗ್ ಬಾಸ್ ಕನ್ನಡ 10 ಶೋನ ಫಿನಾಲೆ ನಡೆಯಲಿದೆ, ಅದರಂತೆ ಹಿಂದಿಯಲ್ಲಿ ಕೂಡ ಬಿಗ್ ಬಾಸ್ 17 ಶೋನ ಫಿನಾಲೆ ನಡೆಯಲಿದೆ. ಕಿಚ್ಚ ಸುದೀಪ್ ಇಂಡಿಯಲ್ಲಿ ಸಲ್ಮಾನ್ ಖಾನ್ ಅವರು ನಿರೂಪಣೆ ಸಾರಥ್ಯ ಉಳಿಸಿರುವ ಬಿಗ್ ಬಾಸ್ ಶೋಗಳಿಗೆ ತೆರೆ ಬೀಳಲಿದೆ ಶೋ ಗಳಲ್ಲಿ ಸ್ಪರ್ಧೆ ಜೋರಿದ್ದು ಯಾರು ವಿಜೇಯಾರಾಗಲಿದ್ದಾರೆ ಎಂಬ ಕುತೂಹಲ ಜೋರಾಗಿದೆ.

kannada bigg boss winners
kannada bigg boss winners

ಪ್ರಮುಖ ಮಾಹಿತಿಗಳು :

  • ಬಿಗ್ ಬಾಸ್ ಕನ್ನಡ 10 ಶೋ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ.
  • ಒಂದು ದಿನ ಬಿಗ್ ಬಾಸ್ ಕನ್ನಡ 10ಶೋ ಹಾಗೂ ಬಿಗ್ ಬಾಸ್ ಹಿಂದಿ 17 ಶೋ ನ ಫಿನಾಲೆ ನಡೆಯಲಿದೆ.
  • ಸದ್ಯ ಯಾರಿ ಗೆಲ್ಲುತ್ತಾರೆ ಎಂಬ ಕುತೂಹಲ ಜೋರಾಗಿದೆ.

‘ಬಿಗ್ ಬಾಸ್ ಕನ್ನಡ 10’ ಶೋ ಗ್ರಾಂಡ್ ಫಿನಾಲೆ, ಇಂದು ಮತ್ತು ನಾಳೆ ನಡೆಯಲಿದೆ. ಈ ಶೋನಿಂದ ಇಬ್ಬರು ವಿಜೇತರಾಗಿ ಹೊರಗಡೆ ಬರುತ್ತಾರೆ. ಜನವರಿ 28 ರಂದು ಇನ್ನೊoದು ಬಿಗ್ ಬಾಸ್ ಶೋನ ಫಿನಾಲೆ ಕೂಡ ನಡೆಯಲಿದೆ.

ಈ ಬಾರಿ ಬಿಗ್ ಬಾಸ್ ಗೆ ಅತಿ ಹೆಚ್ಚು TRP ಬರಲಿದೆ.:

ಹೌದು, ಜನವರಿ 28ರಂದು ‘ಬಿಗ್ ಬಿಗ್ 10′,’ ಬಿಗ್ ಬಾಸ್ ಹಿಂದಿ 17′ ಗ್ರಾಂಡ್ ಫಿನಾಲೆ ನಡೆಯಲಿದೆ. ಹಿಂದಿ, ಕನ್ನಡದ ಬಿಗ್ ಬಾಸ್ ಶೋಗಳ ಫಿನಾಲೆ ಒಂದೇ ದಿನ ನಡೆಯಲಿದೆ. ಹಿಂದಿ ಬಿಗ್ ಬಾಸ್ ಕೂಡ ದೊಡ್ಡ ಮಟ್ಟದ ಟಿ ಆರ್ ಪಿ ಪಡೆದಿದೆ. ಈ ಬಾರಿಯ ಕನ್ನಡ ಬಿಗ್ ಬಾಸ್ ಹಿಂದಿನ ಸೀಸನ್ ಗಳಿಗಿಂತ ಅತಿ ಹೆಚ್ಚು ಜನಪ್ರಿಯತೆಯನ್ನು ಒಳಗೊಂಡು ಹೆಚ್ಚಿನ ಟಿ ಆರ್ ಪಿ ಪಡೆದಿದೆ. ಒಟ್ಟಿನಲ್ಲಿ ಎರಡು ರಿಯಾಲಿಟಿ ಶೋಗಳ ಗ್ರಾಂಡ್ ಫಿನಾಲೆ ಒಂದೇ ದಿನ ನಡೆಯಲಿದ್ದು ಭಾರಿ ಕುತೂಹಲ ಸೃಷ್ಟಿ ಮಾಡಿದೆ.

ಹಿಂದಿ ಬಿಗ್ ಬಾಸ್ ಶುರುವಾಗಿ ಎಷ್ಟು ದಿನ ಆಯ್ತು..?

ಹಿಂದಿ ಬಿಗ್ ಬಾಸ್ 17 ಶೋವನ್ನು ಸಲ್ಮಾನ್ ಖಾನ್ ಅವರ ನಿರೂಪಣೆ ಮಾಡುತ್ತಿದ್ದಾರೆ. ದಿ ಬಿಗ್ ಬಾಸ್ ಶುರುವಾಗಿ 107 ದಿನಗಳು ಪೂರ್ಣಗೊಂಡಿದೆ. ಈ ಬಾರಿ ನೀಲ್ ಬಟ್ ಐಶ್ವರ್ಯ ಶರ್ಮಾ ಅಂಕಿತ ಲೋಕಂಡೆ ವಿಕ್ಕಿ ಜೈನ್ ಅವರು ಈ ಶೋ ಗೆ ರಿಯಲ್ ದಂಪತಿಗಳಾಗಿ ಎಂಟ್ರಿ ಕೊಟ್ಟಿದ್ದರು. ಸ್ಪರ್ಧಿಗಳಾದ ಅಭಿಷೇಕ್, ಈಶಾ ಸಮರ್ಥ ನಡುವೆ ತ್ರಿಕೋನ ಪ್ರೇಮಕಥೆ ನಡೆದಿದೆ. ಇನ್ನು ಅಂಕಿತಾ ವಿಕ್ಕಿ ಲೋಖಂಡೆ ಮನೆಯ ಸಂಸಾರದ ಜಗಳ ಬೀದಿಗೆ ಬಂದಿದೆ.

ಇದನ್ನು ಓದಿ : ಪಶು ಪಾಲಕರಿಗೆ ಆರ್ಥಿಕ ನೆರವು : ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಪಡೆಯಿರಿ


ಕನ್ನಡ ಬಿಗ್ ಬಾಸ್ ಗ್ರಾಂಡ್ ಫಿನಾಲೆ :

ಬಿಗ್ ಬಾಸ್ ಕನ್ನಡ ಸೀಸನ್ 10 ಶೋವನ್ನು ಆರಂಭದಲ್ಲಿ ಆಯೋಜಕರು ಹ್ಯಾಪಿ ಬಿಗ್ ಬಾಸ್ ಎಂದು ಹೇಳಿದ್ದರು. ಅದರಂತೆ ಈ ಹಿಂದೆ ನಡೆದ ಒಂಬತ್ತು ಬಿಗ್ ಬಾಸ್ ಶೋಗಳಿಗಿಂತ ಹೆಚ್ಚು ಟಿ ಆರ್ ಪಿ ಬಂದಿದೆ. ಇನ್ನೂ 19 ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟಿದ್ದರು. ಬಿಗ್ ಬಾಸ್ ಮನೆಯೊಳಗಡೆ ಹೋಗುವ ಆಯ್ಕೆ ಪ್ರತಿಕ್ರಿಯೆ ಭಿನ್ನವಾಗಿತ್ತು. ಹೆಚ್ಚು ಅತಿಥಿಗಳು ಮನಗೆ ಎಂಟ್ರಿ ಕೊಟ್ಟಿದ್ದರು. ಹಾಲಿ ಚಿಕ್ಕಬಳ್ಳಾಪುರ ಎಂಎಲ್ಎ ಪ್ರದೀಪ್ ಈಶ್ವರ್ ಅವರು ಅತಿಥಿಯಾಗಿ ದೊಡ್ಮನೆಗೆ ಹೋಗಿರುವುದು ವಿಶೇಷ.

ಜನವರಿ 27, 28ರಂದು ‘ಬಿಗ್ ಬಾಸ್ ಕನ್ನಡ 10’ ಫಿನಾಲೆ ಸಂಜೆ 7:30 ರಿಂದ ಆರಂಭವಾಗುವುದು. ತುಕಾಲಿ ಸ್ಟಾರ್ ಸಂತೋಷ್, ಸಂಗೀತ ಶೃಂಗೇರಿ, ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್, ವರ್ತೂರ್ ಸಂತೋಷ್, ವಿನಯ್ ಗೌಡ ರವರು ಫಿನಾಲೆಯಲ್ಲಿದ್ದು, ಯಾರು ಟ್ರೋಫಿ ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.

ಇತರೆ ವಿಷಯಗಳು :

Treading

Load More...