ನಮಸ್ಕಾರ ಸ್ನೇಹಿತರೇ ಆಯುಷ್ಮಾನ್ ಭಾರತ್ ಯೋಜನೆಯು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂದು ಸಹ ಕರೆಯಲಾಗುತ್ತಿದ್ದು ಅನುದಾನಿತ ಆರೋಗ್ಯ ರಕ್ಷಣಾ ಕಾರ್ಯಕ್ರಮ ಭಾರತ ಸರ್ಕಾರದಿಂದ ಪ್ರಾರಂಭಿಸಲಾಗಿದೆ.
ಆರೋಗ್ಯ ರಕ್ಷಣೆಯನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಒದಗಿಸಲು 2018 ರಲ್ಲಿ ಕೇಂದ್ರ ಸರ್ಕಾರವು ಇದನ್ನು ಪ್ರಾರಂಭಿಸಿತು ಪ್ರತಿ ಕುಟುಂಬಕ್ಕೆ ಪ್ರತಿ ವರ್ಷ ದ್ವಿತೀಯ ಮತ್ತು ತೃತೀಯ ಹಾರೈಕೆ ಆಸ್ಪತ್ರೆಗಳಿಗೆ ಈ ಯೋಜನೆ 5 ಲಕ್ಷದವರೆಗೆ ಆರೋಗ್ಯ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ.
ಪ್ರಧಾನಮಂತ್ರಿಯ ಆರೋಗ್ಯ ಯೋಜನೆ :
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಥವಾ ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರದಿಂದ ಪ್ರಾರಂಭಿಸಲಾಗಿದ್ದು ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಐದು ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲು ಮುಂದಾಗಿದೆ.
ಈ ಯೋಜನೆ ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಐ ಆಮ್ ಎಲಿಜಿಬಲ್ ಮೇಲೆ ಪ್ರಧಾನಮಂತ್ರಿ ಜನ ಆರೋಗ್ಯ ಪೋರ್ಟಲ್ ಗೆ ಭೇಟಿ ನೀಡಿ ಕ್ಲಿಕ್ ಮಾಡಬೇಕಾಗುತ್ತದೆ. ಅದಾದ ನಂತರ ಮೊಬೈಲ್ ನಂಬರ್ ಹಾಗೂ ಕ್ಯಾಪ್ಚರ್ ಕೋಡ್ ನಮೂದಿಸಬೇಕಾಗುತ್ತದೆ. ಜನರೇಟ್ ಓ ಟಿ ಪಿ ಎಂಬುದರ ಮೇಲೆ ಕ್ಲಿಕ್ ಮಾಡಿ ತಮ್ಮ ರಾಜ್ಯ ಆಯ್ಕೆ ಮಾಡಿ ತಮ್ಮ ಹೆಸರು ನಂಬರ್ ಹಾಗೂ ಮೊಬೈಲ್ ನಂಬರ್ ಅನ್ನು ಹಾಕಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಓದಿ : UPI ಪೇಮೆಂಟ್ ಮಾಡುವವರಿಗೆ ಹೊಸ ನಿಯಮ : RBI ನಿಂದ ಹೊಸ ನಿಯಮ ಜಾರಿ!
ಆಯುಷ್ಮಾನ್ ಭಾರತ್ ಯೋಜನೆಗೆ ದಾಖಲೆಗಳು :
ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಗುರುತಿನ ಪುರಾವೆ ಹಾಗೂ ವಯಸ್ಸಿನ ಪುರಾವೆಯಾಗಿ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್, ಸಂಪರ್ಕ ವಿವರಗಳಿಗೆ ಸಂಬಂಧಿಸಿದಂತೆ ವಿಳಾಸ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ಹೊಂದಿರಬೇಕು, ಈಡಬ್ಲ್ಯೂಎಸ್ ವರ್ಗಕ್ಕೆ ಸೇರಿದಂತಹ ಅಭ್ಯರ್ಥಿಗಳು ಹಾಗೂ ಕಾಯಂ ಅಲ್ಲದ ನಿವಾಸಿಗಳು ಜೊತೆಗೆ ಕಡಿಮೆ ಆದಾಯದ ವರ್ಗ ಹೊಂದಿರುವವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ಯೋಜನೆಯ ಪ್ರಯೋಜನಗಳನ್ನು ಸ್ಥಳ ಮತ್ತು ವೈಯಕ್ತಿಕ ಸಂದರ್ಭಗಳಿಗೆ ಅನುಗುಣವಾಗಿ ಬದಲಾಗುತ್ತವೆ.
ಒಟ್ಟಾರೆ ಕೇಂದ್ರ ಸರ್ಕಾರದ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಆರೋಗ್ಯ ರಕ್ಷಣೆಯನ್ನು ಮಾಡಬೇಕೆಂದು ಉದ್ದೇಶದಿಂದ ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯ ಮೂಲಕ ಸುಮಾರು 5 ಲಕ್ಷದವರೆಗೆ ಉಚಿತ ಆರೋಗ್ಯ ಸೌಲಭ್ಯವನ್ನು ಪಡೆಯಬಹುದಾಗಿದೆ ಹಾಗಾಗಿ ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಬಡವರ್ಗದ ಜನರಾಗಿದ್ದರೆ ಹಾಗೂ ಆರ್ಥಿಕ ಹಿಂದುಳಿದ ವರ್ಗದವರಾಗಿದ್ದರೆ ಈ ಯೋಜನೆಯ ಪ್ರಯೋಜನವನ್ನು ಅವರು ಪಡೆದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದಿಂದ ಗೃಹಜ್ಯೋತಿ ಯೋಜನೆಗೆ ಹೊಸ ಆದೇಶ : ನಿಯಮದಲ್ಲಿ ಹೊಸ ಬದಲಾವಣೆ
- ಹೆಚ್ಚಿನ ಸೌಲಭ್ಯ ರೇಷನ್ ಕಾರ್ಡ್ ಹೊಂದಿರುವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ