ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗುವುದು ಗೃಹಲಕ್ಷ್ಮಿ ಯೋಜನೆಯ ಹಣವು ಬಹುತೇಕ ಎಲ್ಲರ ಖಾತೆಗೂ ಜಮಾ ಆಗಿದೆ ಅರ್ಜಿ ಸಲ್ಲಿಸಿದ ಮಹಿಳೆಯರಲ್ಲಿ ಕೆಲವು ಮಹಿಳೆಯರಿಗೆ ಜಮಾ ಆಗದೇ ಇದೆ .ಇದೇ ಕಾರಣಕ್ಕೆ ಡಿಸೆಂಬರ್ ಅಂತ್ಯದ ಒಳಗಾಗಿ ಪ್ರತಿಯೊಂದು ಮಹಿಳೆಗೆ ಹಣ ಜಮಾ ಆಗಲು ಸಿಎಂ ಸಿದ್ದರಾಮಯ್ಯನವರು ಭರವಸೆಯನ್ನು ಸಹ ನೀಡಿದ್ದಾರೆ.
ಪ್ರಸ್ತುತ ದಿನಮಾನದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ತಾಂತ್ರಿಕ ತೊಂದರೆಗಳು ಇದ್ದರೆ ಅದಕ್ಕೆ ಪರಿಹಾರವನ್ನು ಹಾಗೂ ಕೆಲವು ಸೂಕ್ತ ಕ್ರಮಗಳನ್ನು ಸೂಚಿಸಿದ್ದಾರೆ.
ಈ ಮೂಲಕ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬ ಚಿಂತನೆ ಮಾಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಸರ್ಕಾರಿ ಅಧಿಕಾರಿಗಳು ನಿಮ್ಮ ಮನೆಬಾಗಿಲಿಗೆ ಬಂದು ನಿಮಗೆ ಇರುವ ಸಮಸ್ಯೆಯನ್ನು ಪರಿಹರಿಸಿ ಹಣವು ವರ್ಗಾವಣೆ ಆಗುವಂತೆ ನೋಡಿಕೊಳ್ಳುತ್ತಾರೆ .ಇದಕ್ಕೆ ನಮ್ಮ ರಾಜ್ಯದ ಅಂಗನವಾಡಿ ಸಹಾಯಕಿಯರು ಹಾಗೂ ಗ್ರಾಮ ಪಂಚಾಯಿತಿಯಿಂದ ಅಧಿಕಾರಿ ವರ್ಗಗಳು ನಿಮ್ಮನ್ನು ಭೇಟಿ ಮಾಡಲಿವೆ.
ಇದನ್ನು ಓದಿ : ನಮಗೆ ಅಕ್ಕಿ ಹಣ ಮತ್ತೆ ಅಕೌಂಟಿಗೆ ಬಂತು ನಿಮಗೂ ಹಣ ಬಂತ ನೋಡಿ.!
ಮನೆಬಾಗಲಿಗೆ ಬರಲಿದ್ದಾರೆ ಅಧಿಕಾರಿಗಳು:
ಹೌದು ನಿಮ್ಮ ಮನೆ ಬಾಗಲಿಗೆ ಆಯಾ ಗ್ರಾಮ ಪಂಚಾಯಿತಿಯ ಅಂಗನವಾಡಿ ಸಹಾಯಕಿ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಫಲಾನುಭವಿ ಮಹಿಳೆಯರಿಗೆ ಹಣ ಬಂದಿದೆಯ ಅಥವಾ ಇಲ್ಲವಾ ಎಂಬುದನ್ನು ಪರಿಶೀಲಿಸಿ ತಾವೇ ಸ್ವತಃ ಬ್ಯಾಂಕಿಗೆ ಕರೆದುಕೊಂಡು ಹೋಗಿ ಅವರಿಗೆ ಬ್ಯಾಂಕಿನಲ್ಲಿ ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸುವ ಮೂಲಕ ಮತ್ತಿತರ ದಾಖಲೆಗಳನ್ನು ಸರಿಯಾಗಿ ಹೊಂದಾಣಿಕೆ ಆಗುವಂತೆ ಮಾಡಿಸುತ್ತಾರೆ ಇದಾದ ನಂತರ ನಿಮ್ಮ ಖಾತೆಗೆ ಹಣ ಬರಲಿದೆ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ಸಿಬ್ಬಂದಿಗಳೇ ಬ್ಯಾಂಕ್ ನ ಅಧಿಕಾರಿಗಳೊಂದಿಗೆ ಮಾತನಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ.
ಗೃಹಲಕ್ಷ್ಮಿ ಅದಾಲತ್:
ಸರ್ಕಾರವು ಯೋಜನೆಗಳನ್ನು ರೂಪಿಸುವ ಮೂಲಕ ಜನರಿಗೆ ಅನುಕೂಲವಾಗಲು ಹಾಗೂ ಅವರ ಬೇಡಿಕೆ ಹಾಗೂ ಸಮಸ್ಯೆಯನ್ನು ಬಗೆಹರಿಸಲು ಅನೇಕ ರೀತಿಯಾಗಿ ಹಾಕಿಕೊಳ್ಳುತ್ತಿದೆ .ಇದರಲ್ಲಿ ಗೃಹಲಕ್ಷ್ಮಿ ಒಂದಾಗಿದೆ ಈ ಮೂಲಕ ಯಾವ ಮಹಿಳೆಗೆ ಹಣ ಬಂದಿಲ್ಲ .ಆ ಮಹಿಳೆಗೆ ಹಣವು ಬರುವಂತೆ ನೋಡಿಕೊಳ್ಳಲಾಗುವುದು ನಮ್ಮ ರಾಜ್ಯದಲ್ಲಿ 20ರಷ್ಟು ಮಹಿಳೆಯರಿಗೆ ಮಾತ್ರ ಖಾತೆಗೆ ಹಣ ವರ್ಗಾವಣೆ ಇನ್ನೂ ಆಗಿರುವುದಿಲ್ಲ.
ಹಾಗಾಗಿ ಮಹಿಳೆಯರು ಹೆಚ್ಚು ತಲೆ ಕೆಡಿಸಿಕೊಳ್ಳದೆ ನಿಮ್ಮ ಮನೆಬಾಗಲಿಗೆ ಬರುವ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಅಥವಾ ಅಂಗನವಾಡಿ ಕಾರ್ಯಕರ್ತರಿಗೆ ನೀವು ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಸೇವಾ ಕೇಂದ್ರಗಳಲ್ಲಿ ಕೊಡಲಾಗಿದ್ದ ಸ್ವೀಕೃತ ಪ್ರತಿಯನ್ನು ಹಾಗೂ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಇತರೆ ದಾಖಲೆಗಳನ್ನು ನೀವು ಸಿದ್ಧಪಡಿಸಿಕೊಂಡು ಅವರಿಗೆ ನೀಡಿದರೆ ಅವರು ಎಲ್ಲ ಸಮಸ್ಯೆಯನ್ನು ಬಗೆಹರಿಸುತ್ತಾರೆ.
ಈ ಲೇಖನವು ಯಾರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತಹ ಮಹಿಳೆಯರಿಗೆ ಹೆಚ್ಚು ಉಪಯೋಗಕರವಾಗಲಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಚಿನ್ನದ ಬೆಲೆ ಕಡಿಮೆ ಆಗಿದಿಯಾ ಅಥವಾ ಹೆಚ್ಚಾಗಿದ್ಯಾ ನೋಡಿ! ಖರೀದಿಗೆ ಬೆಸ್ಟ್ ಟೈಮ್
ಸಿಮ್ ಖರೀದಿ ಮಾಡುವಾಗ ಎಚ್ಚರಿಕೆ 10 ಲಕ್ಷ ರೂಪಾಯಿ ದಂಡ