ನಮಸ್ಕಾರ ಸ್ನೇಹಿತರೇ ಮುಂಗಾರು ಮಳೆ ಈ ಬಾರಿ ರಾಜ್ಯದಲ್ಲಿ ಸಂಪೂರ್ಣವಾಗಿ ಕೈಕೊಟ್ಟಿದ್ದು ರೈತರು ರಾಜ್ಯದಲ್ಲಿ ಬಿತ್ತಿದ ಬೆಳೆ ಹಾನಿಯಾಗಿದೆ. ಅದರಂತೆ ರಾಜ್ಯ ಸರ್ಕಾರವು ಸಹ ರಾಜ್ಯದ 220ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು ಈ ಬರಪೀಡಿತ ಪ್ರದೇಶಗಳಲ್ಲಿ ಬರ ಪರಿಹಾರ ನೀಡಲು ಕೇಂದ್ರ ಅಧ್ಯಯನ ತಂಡ ಬಂದು ಹೋಗಿದ್ದು ಇನ್ನೇನು ರೈತರಿಗೆ ಬರ ಪರಿಹಾರವನ್ನು ನೀಡಬೇಕಾಗಿದೆ. ಸರ್ಕಾರವು ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿಯನ್ನು ಪ್ರಕಟಿಸಿದ್ದು ಈ ಲಿಸ್ಟ್ ನಲ್ಲಿ ಹೆಸರಿರುವವರಿಗೆ ಮಾತ್ರ ಬರ ಪರಿಹಾರದ ಹಣ ಸಿಗಲಿದೆ. ಸರ್ಕಾರವು ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ನಿಮ್ಮ ಹೆಸರು ಇದೆ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಪರಿಹಾರದ ಲಿಸ್ಟ್ ನಲ್ಲಿ ಹೆಸರನ್ನು ಚೆಕ್ ಮಾಡುವ ವಿಧಾನ :
ರಾಜ್ಯ ಸರ್ಕಾರವು ರೈತರ ಅರ್ಹ ಪಟ್ಟಿಯನ್ನು ಪ್ರಕಟಿಸಿದ್ದು ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಚೆಕ್ ಮಾಡಿಕೊಳ್ಳಿ. https://fruitspmk.karnataka.gov.in/MISReport/GetDetailsByAadhaar.aspx ಅದರಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ ಆಗ ಅವರ ಹೆಸರು ಮತ್ತು ಗುರುತಿನ ಚೀಟಿಯು ಬರುತ್ತದೆ ನಿಮ್ಮ ಖಾತೆಗೆ ರಾಜ್ಯ ಸರ್ಕಾರದಿಂದ ನೇರವಾಗಿ ಹಣ ಜಮಾ ಆಗಲಿದೆ.
ಇದನ್ನು ಓದಿ : ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ 35,000 ರೂ ಪ್ರೋತ್ಸಾಹ ಧನ ಎಲ್ಲರಿಗೂ ನೀಡಲಾಗುವುದು
ಫ್ರೂಟ್ ತಂತ್ರಾಂಶಕ್ಕೆ ನೋಂದಾಯಿಸುವುದು :
ಬರ ಪರಿಹಾರವನ್ನು 202324ನೇ ಸಾಲಿನಲ್ಲಿ ಪಡೆಯಲು ರೈತರು ಪ್ರತಿ ತಾಲೂಕಿನ ರೈತರು ಫ್ರೂಟ್ಸ್ ತಂತ್ರಾಂಶಕ್ಕೆ ತಮ್ಮ ಎಲ್ಲ ಪಹಣಿಗಳನ್ನು ನೋಂದಾಯಿಸಿ ಎಫ್ಐ ಡಿ ಪಡೆಯಬೇಕಾಗುತ್ತದೆ. ಎಫ್ ಐ ಡಿ ಸಂಖ್ಯೆಯ ಬೆಳೆ ಸಾಲ ಬೆಳೆ ವಿಮೆ ಬೆಂಬಲ ಬೆಲೆ ಯೋಜನೆಗಳಿಗೂ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಲಭ್ಯವಿರುವ ಎಲ್ಲ ಯೋಜನೆಗಳ ಪ್ರಯೋಜನಗಳನ್ನು ರೈತರು ಇದರಿಂದ ಪಡೆಯಬಹುದಾಗಿದೆ.
ಹೊಸದಾಗಿ ಐಡಿ ಮಾಡಿಕೊಳ್ಳಲು ಅಗತ್ಯವಿರುವ ದಾಖಲೆಗಳು :
ಪಹಣಿಗಳನ್ನು ಸೇರ್ಪಡೆ ಮಾಡಿಸಿಕೊಳ್ಳಲು ಹಾಗೂ ಹೊಸದಾಗಿ ಐಡಿಯನ್ನು ಮಾಡಿಸಿಕೊಳ್ಳಲು ತಮ್ಮ ಎಲ್ಲಾ ಪಹಣಿಗಳು ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಕೆಲವೊಂದು ಅಗತ್ಯ ದಾಖಲೆಗಳನ್ನು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ತೋಟಗಾರಿಕಾ ಹಾಗೂ ಗ್ರಾಮ ಆಡಳಿತಾಧಿಕಾರಿ ಕಚೇರಿಗಳನ್ನು ಸಂಪರ್ಕಿಸುವುದರ ಮೂಲಕ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ರಾಜ್ಯ ಸರ್ಕಾರವು ಬರ ಪರಿಹಾರವನ್ನು ಪಡೆಯುವುದಕ್ಕಾಗಿ ಫ್ರೂಟ್ ಐಡಿಯಲ್ಲಿ ಸೂಕ್ತ ಮಾಹಿತಿಗಳನ್ನು ರೈತರು ದಾಖಲಿಸಲು ಕಡ್ಡಾಯಗೊಳಿಸಿದೆ.
ಹೀಗೆ ರಾಜ್ಯ ಸರ್ಕಾರವು ಫ್ರೂಟ್ಸ್ ತಂತ್ರಾಂಶದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಬರ ಪರಿಹಾರದ ಹಣವನ್ನು ಪಡೆದುಕೊಳ್ಳಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ರೈತ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ : ಯಾವ ದಿನಾಂಕದಂದು ನಡಿಯಲಿದೆ ಗೊತ್ತಾ?
ಇನ್ನು ಮುಂದೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ : ಈ ರೀತಿ ತಪ್ಪು ಮಾಡಬೇಡಿ