ನಮಸ್ಕಾರ ಸ್ನೇಹಿತರೆ, ಸರ್ಕಾರವು ತಮ್ಮ ಹೆಸರಿಗೆ ಜಮೀನನ್ನು ಬಗೆ ಮಾಡುತ್ತಿದ್ದ ರೈತರಿಗೆ ಸಕ್ರಮ ಮಾಡಿಕೊಳ್ಳಲು ಅನುಮತಿ ನೀಡಿದ್ದು, ಸರ್ಕಾರದಲ್ಲಿ ಇದೇ ವಿಚಾರ ಕಳೆದ ಕೆಲವು ತಿಂಗಳಿನಿಂದ ಹೆಚ್ಚು ಚರ್ಚೆಯಾಗುತ್ತಿದ್ದು ಕಂದಾಯ ಇಲಾಖೆ ಸಚಿವರಾದ ಕೃಷ್ಣಭೈರೇಗೌಡ ಅವರು ಅಂತಿಮವಾಗಿ ನಿನ್ನೆ ನಡೆದ ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ ಅರ್ಹ ರೈತರಿಗೆ 8 ತಿಂಗಳೊಳಗೆ ಡಿಜಿಟಲ್ ಹಾಗೂ ಪತ್ರ ಹಸ್ತಾಂತರ ಮಾಡುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಹೊಸ ಸರ್ವೆ ಸಂಖ್ಯೆ :
ಮುಂದಿನ ಎಂಟು ತಿಂಗಳ ಒಳಗೆ ಮೀಸಲು ಅರಣ್ಯ ಸಾಮಾಜಿಕ ಅರಣ್ಯ ಕಿರುಬರಣ್ಯ ಜಾನುವಾರು ಮಹೋತ್ಸವ ಕಂದಾಯ ಗೋಮಾಳ ಕಾಫಿ ಕಾನೂ ಇನಾo ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ಸಿಗಲಿದೆ ಎಂದು ನಿನ್ನೆ ನಡೆದ ಸಭೆಯಲ್ಲಿ ಕಂದಾಯ ಸಚಿವರು ತಿಳಿಸಿದ್ದಾರೆ. ಸರ್ಕಾರವೇ ನೋಂದಾಯಿಸಿ ಪೋಡಿ ಮಾಡಿ ಹೊಸ ಸರ್ವೆ ಸಂಖ್ಯೆಯನ್ನು ಈ ಸಾಗುವಳಿ ಚೀಟಿ ಜೊತೆಗೆ ನೀಡಲು ನಿರ್ಧರಿಸಿದೆ.
1964 ರ ಕರ್ನಾಟಕ ಭೂ ಕಂದಾಯ ಕಾಯ್ದೆ :
ರಾಜ್ಯ ಸರ್ಕಾರವು ಕರ್ನಾಟಕ ಭೂ ಕಂದಾಯ ಕಾಯ್ದೆ 1954 ಅಡಿಯಲ್ಲಿ ಫಾರಂ ನಂಬರ್ 50 1991, ಫಾರ ನಂಬರ್ 53 1999, ಫಾರಂ ನಂಬರ್ 57 2018 ರ ಅಡಿಯಲ್ಲಿ ಅರ್ಹರಹಿತರಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಭೂ ರಹಿತ ರೈತರು ಹಾಗೂ ಕಡಿಮೆ ಇಡುವಳಿ ಹೊಂದಿರುವ ರೈತರಿಂದ ರಾಜ್ಯ ಸರ್ಕಾರವು ಅರ್ಜಿಯನ್ನು ಆಹ್ವಾನಿಸಲಾಗಿತ್ತು ಆದರೆ ಇದೀಗ ಒಟ್ಟು ಒಂಬತ್ತು ಲಕ್ಷದ 56512 ಅರ್ಜಿಗಳು ರಾಜ್ಯದಲ್ಲಿ ಸಲ್ಲಿಕೆಯಾಗಿದೆ ಎಂದು ವರದಿ ನೀಡಿ ಬಂದಿದೆ. 50 ಲಕ್ಷ ಹೆಕ್ಟರ್ ನಷ್ಟು ಭೂಮಿಯನ್ನು ಈ ಎಲ್ಲಾ ಅರ್ಜಿದಾರರಿಗೆ ಭೂಮಿ ಹಂಚಿಕೆ ಮಾಡಬೇಕಾದರೆ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ, ಆದರೆ ಇದರಲ್ಲಿರುವ ಶಾಕಿಂಗ್ ವಿಷಯ ಏನೆಂದರೆ, ಅನರ್ಹರು ಕೂಡ ಅತಿಹೆಚ್ಚಿನ ಸಂಖ್ಯೆಯಲ್ಲಿ ಈ ಅರ್ಜಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಸಂಬಂಧಪಟ್ಟ ಜಿಲ್ಲೆ ತಾಲೂಕುಗಳಿಂದ ಕೂಡ ಕೆಲವರು ಅರ್ಜಿ ಸಲ್ಲಿಸಿದ್ದಾರೆ.
ಇದನ್ನು ಓದಿ : ರೈತರಿಗೆ ರೂ.2000 ಆರ್ಥಿಕ ನೆರವು : ಬೆಳೆ ಪರಿಹಾರವಾಗಿ ಮೊದಲ ಕಂತಿನ ಹಣ ನಿಮಗೆ ಬಂದಿಯಾ ಚೆಕ್ ಮಾಡಿ
ಕೆಲವೊಂದು ನಿಯಮಗಳು :
ಭೂಮಿಯನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರವು ಅರ್ಜಿಯನ್ನು ಆಹ್ವಾನಿಸಿದ್ದು ಆ ಭೂಮಿಯಲ್ಲಿ ಇನ್ನೂ ಕೆಲವರು ಕೃಷಿ ಚಟುವಟಿಕೆಯನ್ನು ನಡೆಸಿಲ್ಲದಿದ್ದರೂ ಸಹ ಅರ್ಜಿ ಸಲ್ಲಿಸಿದ್ದಾರೆ ಹಾಗೂ ಅರ್ಜಿ ಸಲ್ಲಿಸಲು 18 ವರ್ಷ ತುಂಬಿದ ರೈತರು ಮಾತ್ರ ಸಲ್ಲಿಸಬೇಕೆಂದು ನಿಯಮವಿದ್ದರೂ ಸಹ 18 ವರ್ಷ ತುಂಬದವರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ 25 ಅರ್ಜಿಗಳನ್ನು ಒಬ್ಬನೇ ವ್ಯಕ್ತಿ ಸಲ್ಲಿಸಿರುವುದು ಮತ್ತು ಅರ್ಜಿಯನ್ನು ಈಗಾಗಲು ಭೂಮಿ ಹೊಂದಿರುವವರು ಸಲ್ಲಿಸಿರುವುದು ಕಂಡುಬಂದಿದೆ. ಹಾಗಾಗಿ ರಾಜ್ಯ ಸರ್ಕಾರವು ಬದಲು ಕಮಿಟಿಯು ಕೂಲಂಕುಶವಾಗಿ ಪರಿಶೀಲನೆ ಮಾಡುವುದರ ಮೂಲಕ 8 ತಿಂಗಳು ಒಳಗೆ ಪರಿಶೀಲನೆ ಮುಗಿದು ರೈತರಿಗೆ ಭೂಮಿಯನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಲಾಗುತ್ತಿದೆ
ಹೀಗೆ ರಾಜ್ಯ ಸರ್ಕಾರವು ಬಗರ್ ಯೋಜನೆಯ ಅಡಿಯಲ್ಲಿ ಸಕ್ರಮ ಭೂಮಿಗಳನ್ನು ನಿರ್ವಹಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು ಇನ್ನೇನು ಎಂಟು ತಿಂಗಳಲ್ಲಿ ಅರ್ಹ ರೈತರು ತಮ್ಮ ಭೂಮಿಯನ್ನು ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು ಈ ಲೇಖನವನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಇನ್ನೇನು ಎಂಟು ತಿಂಗಳ ಒಳಗಾಗಿ ನಿಮ್ಮ ಭೂಮಿ ನಿಮಗೆ ಸಿಗುತ್ತಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
25,000 ರೂ ಎಲ್ಲಾ ರೈತರ ಖಾತೆಗೆ : ಈ ಕೂಡಲೇ ರೈತರು ಪಟ್ಟಿಯನ್ನು ಪರಿಶೀಲಿಸಿ
ರೇಷನ್ ಕಾರ್ಡ್ ಇಲ್ಲದಿದ್ದರೂ ಜನರಿಗೆ ಉಚಿತ ರೇಷನ್ : ಲೋಕಸಭೆ ಚುನಾವಣೆ ಪ್ರಭಾವ