ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರವು ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತಂದಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಪಾನ್ ಕಾರ್ಡ್ ಪ್ರಮುಖವಾದ ದಾಖಲೆಯಾಗಿದೆ. ಪ್ಯಾನ್ ಕಾರ್ಡ್ ವೈಯಕ್ತಿಕ ಮಾಹಿತಿಗಳಲ್ಲಿ ಒಂದಾಗಿದ್ದು ಎಲ್ಲರೂ ಅಗತ್ಯವಾಗಿ ಇದನ್ನು ಹೊಂದಿರಬೇಕು. ದೇಶದಲ್ಲಿ ಆಧಾರ್ ಕಾರ್ಡ್ ಎಷ್ಟು ಮುಖ್ಯ ದಾಖಲೆಯಾಗಿದೆ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ.
ಆಧಾರ್ ಕಾರ್ಡ್ ನಷ್ಟೇ ಮುಖ್ಯವಾದ ಪಾನ್ ಕಾರ್ಡ್ :
ಪಾನ್ ಕಾರ್ಡ್ ಆಧಾರ್ ಕಾರ್ಡ್ ನಷ್ಟೇ ಮುಖ್ಯವಾದ ದಾಖಲೆಯಾಗಿದ್ದು ಯಾವುದೇ ಕೆಲಸವನ್ನು ಪೂರ್ಣಗೊಳ್ಳಲು ಪಾನ್ ಕಾರ್ಡ್ ಮಾಹಿತಿಯನ್ನು ನೀಡದಿದ್ದರೆ ಸಾಧ್ಯವಾಗುವುದಿಲ್ಲ. ಅದರಂತೆ ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಸರ್ಕಾರವು ಈಗ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಆ ನಿಯಮ ಏನು ಎಂಬುದನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಅನ್ನು ಒಬ್ಬರು ಬಳಸಬಹುದೆ :
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಪಾನ್ ಕಾರ್ಡ್ ಅನ್ನು ಭಾರತದಲ್ಲಿ ಬಳಸಬಹುದೇ ಎಂಬ ಪ್ರಶ್ನೆಯು ಈಗಾಗಲೇ ಮೂಡಿರುತ್ತದೆ ಪಾನ್ ಕಾರ್ಡ್ ಒಂದು ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿದ್ದು ಪ್ರತಿಯೊಬ್ಬ ವ್ಯಕ್ತಿಗೆ ಸರ್ಕಾರವು ಒಂದೇ ಪಾನ್ ಕಾರ್ಡ್ ಅನ್ನು ನೀಡುತ್ತದೆ ಇನ್ನೊಬ್ಬ ವ್ಯಕ್ತಿಗೆ ಈ ಪಾನ್ ಕಾರ್ಡ್ ಅನ್ನು ವರ್ಗಾಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಕೇವಲ ಒಂದು ಪಾನ್ ಸಂಖ್ಯೆಯನ್ನು ಹೊಂದಿರಬೇಕೆಂದು ಆದಾಯ ತೆರಿಗೆ ಇಲಾಖೆಯ ಪ್ರಕಾರ ತಿಳಿಸಲಾಗಿದ್ದು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಅನ್ನು ಒಬ್ಬ ವ್ಯಕ್ತಿ ಅಥವಾ ಕಂಪನಿಯು ಹೊಂದಿದ್ದರೆ ಅದು ಕಾನೂನುಬಾಹಿರವೆಂದು ಹೇಳಲಾಗುತ್ತಿದೆ. ಆಧಾರ ತೆರಿಗೆ ಇಲಾಖೆ ಕಾನೂನು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಬಹುದು ಎಂದು ಅಥವಾ ಹಣಕಾಸಿನ ದಂಡವನ್ನು ವಿಧಿಸುತ್ತದೆ ಎಂದು ಹೇಳಬಹುದಾಗಿದೆ.
ಇದನ್ನು ಓದಿ : ಮುನ್ಸೂಚನೆ: ನಿಮ್ಮ ಕೆಲಸ ಮುಂದೂಡುವುದು ಒಳ್ಳೆಯದು
ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ ದಂಡ :
ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಅನ್ನು ಒಬ್ಬ ವ್ಯಕ್ತಿಯು ಹೊಂದಿದ್ದರೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 272 ಬಿ ಅಡಿಯಲ್ಲಿ ಕ್ರಮವನ್ನು ಕೈಗೊಳ್ಳುತ್ತದೆ. 10,000 ದಂಡವನ್ನು ಈ ಸೆಕ್ಷನ್ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವ ವ್ಯಕ್ತಿಗೆ ವಿಧಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಗಳನ್ನು ಒಬ್ಬ ವ್ಯಕ್ತಿಯು ಹೊಂದಿದ್ದರೆ ಎರಡನೇ ಪಾನ್ ಕಾರ್ಡ್ ಅನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಸರೆಂಡರ್ ಮಾಡಬೇಕಾಗುತ್ತದೆ.
ಹೀಗೆ ಸರ್ಕಾರವು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವ ವ್ಯಕ್ತಿಗೆ ದಂಡವನ್ನು ವಿಧಿಸಲು ಯೋಚಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಎಲ್ಲರೂ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಒಂದಕ್ಕಿಂತ ಹೆಚ್ಚಿನ ಪಾನ್ ಕಾರ್ಡ್ ಅನ್ನು ಹೊಂದಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ದಂಡವನ್ನು ತೆರಬೇಕಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ರೈತರ ಸಾಲ ಮನ್ನಾ : ಅಧಿಕೃತ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
ಚಿನ್ನದ ಬೆಲೆ ಕಡಿಮೆ ಆಗಿದಿಯಾ ಅಥವಾ ಹೆಚ್ಚಾಗಿದ್ಯಾ ನೋಡಿ! ಖರೀದಿಗೆ ಬೆಸ್ಟ್ ಟೈಮ್