News

ಲೋಕಸಭಾ ಚುನಾವಣೆಗೆ Online ಮೂಲಕವೇ ಸ್ಮಾರ್ಟ್ ವೋಟರ್ ಐಡಿ ಪಡೆಯಿರಿ

Get Smart Voter ID for Lok Sabha elections online

ನಮಸ್ಕಾರ ಸ್ನೇಹಿತರೆ, 2024ರ ಲೋಕಸಭಾ ಎಲೆಕ್ಷನ್ ಇನ್ನೇನು ಸದ್ಯದಲ್ಲಿಯೇ ನಡೆಯಲಿದ್ದು ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕು ಈ ಹಿನ್ನೆಲೆಯಲ್ಲಿ ಚಲಾಯಿಸಬೇಕು ಎಂಬ ಉದ್ದೇಶದಿಂದ ವೋಟರ್ ಐಡಿ ಇಲ್ಲದಿದ್ದರೆ ಆನ್ಲೈನ್ ಮೂಲಕವೇ ಸುಲಭವಾಗಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

Get Smart Voter ID for Lok Sabha elections online
Get Smart Voter ID for Lok Sabha elections online

ವೋಟರ್ ಐಡಿ :

ಯಾವ ಒಬ್ಬ ವ್ಯಕ್ತಿಯು ಕೂಡ ಗುರುತಿನ ಚೀಟಿ ಇಲ್ಲದಿದ್ದರೆ ಮತದಾನದ ಹಕ್ಕನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ ನಮ್ಮ ಬಳಿ ಆಧಾರ್ ಕಾರ್ಡ್ ಹೇಗೆ ಮುಖ್ಯವಾಗಿರುತ್ತದೆಯೋ ಅದೇ ರೀತಿ ವೋಟರ್ ಐಡಿ ಯು ಸಹ ಮತದಾನ ಮಾಡಲು ಅಗತ್ಯವಾಗಿ ಬೇಕಾದ ದಾಖಲೆಯಾಗಿದೆ. ಇದೀಗ ಯಾವುದೇ ಸರ್ಕಾರಿ ಕಚೇರಿಗೂ ಕೂಡ ಹೊಸದಾಗಿ ವೋಟರ್ ಐಡಿ ಪಡೆದುಕೊಳ್ಳುವವರು ಹೋಗುವ ಅಗತ್ಯವಿಲ್ಲ ಏಕೆಂದರೆ ಪೋಸ್ಟ್ ಮೂಲಕವೇ ವೋಟರ್ ಐಡಿಯನ್ನು ಆನ್ಲೈನಲ್ಲಿ ಅರ್ಜಿ ಸಲ್ಲಿಸಿದವರ ಮನೆಗೆ ಬರುವಂತೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಅಗತ್ಯ ಇರುವ ಬದಲಾವಣೆಗಳನ್ನು ವೋಟರ್ ಐಡಿಯಲ್ಲಿ ಅಥವಾ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಸಹ ಅವಕಾಶವನ್ನು ಸರ್ಕಾರ ನೀಡಿದ್ದು ಇದನ್ನು ಆನ್ಲೈನಲ್ಲಿ ಮಾಡಿಕೊಳ್ಳಬಹುದು.

ಇದನ್ನು ಓದಿ : ಅನ್ನಭಾಗ್ಯ ಹಣ ಬಂದ್! ಪಡಿತರ ವಿತರಕರು ನಿಲ್ಲಿಸಬೇಕು ಎಂದು ಪ್ರತಿಭಟನೆ; ಕಾರಣ ಏನು.?

ವೋಟರ್ ಐಡಿ ಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸುವುದು :

ಮನೆ ಬಾಗಿಲಿಗೆ ಸಂಬಂಧಪಟ್ಟ ಸಿಬ್ಬಂದಿಗಳು ಸಾಮಾನ್ಯವಾಗಿ ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಬಂದು ಯಾರ ವೋಟರ್ ಐಡಿ ಸರಿ ಇರುವುದಿಲ್ಲವೋ ಹಾಗೂ ಯಾರ ಹತ್ತಿರ ವೋಟರ್ ಐಡಿ ಇಲ್ಲ ಎಂಬುದನ್ನು ಪರಿಶೀಲಿಸುವುದರ ಮೂಲಕ ತಕ್ಷಣವೇ ವೋಟರ್ ಐಡಿ ಕಲ್ಪಿಸಲು ವ್ಯವಸ್ಥೆ ಮಾಡಿಕೊಡುತ್ತಾರೆ. ಆದರೆ ಈ ರೀತಿ ವೋಟರ್ ಐಡಿಯನ್ನು ಪಡೆದುಕೊಳ್ಳಲು ಈಗ ಯಾವುದೇ ಎಲೆಕ್ಷನ್ ವರೆಗೂ ಕಾಯುವ ಅಗತ್ಯವಿಲ್ಲ ಕುಳಿತಲ್ಲಿಯ ಯಾವಾಗ ಬೇಕಾದರೂ ಸಹ ವೋಟರ್ ಐಡಿಯನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದು.

ವೋಟರ್ ಐಡಿ ಯಲ್ಲಿ ಏನೆಲ್ಲ ತಿದ್ದುಪಡಿಗಳು ಆಗಬೇಕು ಅವುಗಳನ್ನು ಸಹ ಮಾಡಿಕೊಳ್ಳಬಹುದಾಗಿತ್ತು ಮತದಾರರ ಗುರುತಿನ ಚೀಟಿಯಲ್ಲಿರುವ ಹೆಸರು ಜನ್ಮ ದಿನಾಂಕ ವಿಳಾಸ ಹೀಗೆ ಅಗತ್ಯವಾದ ಅಂತಹ ಮಾಹಿತಿಗಳನ್ನು ಈ ಸಂದರ್ಭದಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು. ತಿದ್ದುಪಡಿ ಮಾಡಿಕೊಳ್ಳಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://voters.eci.gov.in/ಈ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಆನ್ಲೈನ್ನಲ್ಲಿಯೇ ವೋಟರ್ ಐಡಿ ಅರ್ಜಿ ಹಾಕಬಹುದು ಹಾಗೂ ವೋಟರ್ ಐಡಿಯಲ್ಲಿ ಇರಬೇಕಾದಂತಹ ತಿದ್ದುಪಡಿಗಳನ್ನು ಸಹ ಮಾಡಿಕೊಳ್ಳಬಹುದಾಗಿದೆ.


ಹೀಗೆ ಆನ್ಲೈನ್ ಮೂಲಕವೇ ಇನ್ನು ಮುಂದೆ ವೋಟರ್ ಐಡಿ ಪಡೆದುಕೊಳ್ಳಲು ಸರ್ಕಾರವೇ ಅವಕಾಶ ಕಲ್ಪಿಸಿದ್ದು ಇದೊಂದು ಸುಲಭವಾದ ವಿಧಾನವೇ ಎಂದು ಹೇಳಬಹುದು. ಹಾಗಾಗಿ ಆನ್ಲೈನ್ ಮೂಲಕವೇ ಲೋಕಸಭೆ ಚುನಾವಣೆಗೆ ವೋಟರ್ ಐಡಿಯನ್ನು ಪಡೆದುಕೊಳ್ಳಬಹುದು ಎಂಬುದರ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...