News

ಗೃಹಲಕ್ಷ್ಮಿ ಹಣ ಕೊನೆಗೂ ಸಿಗದಿದ್ದರೆ ಗಂಡನ ಖಾತೆಗೆ ಬರುವಂತೆ ಮಾಡಿಕೊಳ್ಳಬಹುದು

Gruhalkshmi can make the money go to the husband's account

ನಮಸ್ಕಾರ ಸ್ನೇಹಿತರೆ ಗೃಹಿಣಿಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಹಣವನ್ನು ಎಲ್ಲಾ ಫಲಾನುಭವಿಗಳಿಗೆ ಜಮಾ ಮಾಡುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದ್ದು ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯ ಖಾತೆಗೆ ಒಂದು ವೇಳೆ ಜಮಾ ಮಾಡಲು ಸಾಧ್ಯವಾಗದೇ ಇದ್ದರೆ ಆ ಕುಟುಂಬದ ಪುರುಷ ಸದಸ್ಯನ ಅಥವಾ ಆಕೆಯ ಗಂಡನ ಖಾತೆಗೆ ವರ್ಗಾವಣೆ ಮಾಡಲು ರಾಜ್ಯ ಸರ್ಕಾರವು ಹೊಸ ಕ್ರಮವನ್ನು ಕೈಗೊಂಡಿದೆ.

Gruhalkshmi can make the money go to the husband's account
Gruhalkshmi can make the money go to the husband’s account

ಸಚಿವ ಸಂಪುಟ ಸಭೆಯಲ್ಲಿ ಚರ್ಚೆ :

ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚರ್ಚೆಯನ್ನು ನಡೆಸಿದ್ದು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಾಗೂ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಇರುವಂತಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾವಣೆ ಮಾಡುವ ಕುರಿತು ಸಾಕಷ್ಟು ಚರ್ಚೆಯನ್ನು ನಡೆಸಿದ್ದಾರೆ. ಅಲ್ಲದೆ ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಹಣವು ಏಕೆ ವರ್ಗಾವಣೆಯಾಗುತ್ತಿಲ್ಲ ಎನ್ನುವ ಬಗ್ಗೆ ಸರ್ಕಾರವು ತಲೆಕೆಡಿಸಿಕೊಂಡಿದ್ದು ಕೊನೆಗೆ ಒಂದು ಪರಿಹಾರವನ್ನು ಈ ಯೋಜನೆಗೆ ಸಂಬಂಧಿಸಿ ದಂತೆ ಸೂಚಿಸಿದೆ.

ಇದನ್ನು ಓದಿ : ಪಿಎಂ ಕಿಸಾನ್ ಫಲಾನುಭವಿಗಳಿಗೆ ಗುಡ್‌ ನ್ಯೂಸ್:‌ ಈ ಯೋಜನೆಯಲ್ಲಿ ಹೊಸ ಟ್ವಿಸ್ಟ್ ತಂದ ಕೇಂದ್ರ..!!

ಮಹಿಳಾ ಮತ್ತು ಮಕ್ಕಳ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾಹಿತಿ :

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಚಿವ ಸಂಪುಟ ಸಭೆಯಲ್ಲಿ ನಡೆದ ವಿಚಾರದ ಕುರಿತು ಮಾಹಿತಿಯನ್ನು ನೀಡಿದ್ದು ಗೃಹಲಕ್ಷ್ಮಿ ಯೋಜನೆಯ ಆರಂಭವಾಗಿರುವುದು ಮನೆಯ ಹಿರಿಯ ಮಹಿಳಾ ಸದಸ್ಯರ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಉದ್ದೇಶದಿಂದ ಆದ್ದರಿಂದ ಇಲ್ಲಿ ಅತ್ತೆಯಂದಿರು ಅಥವಾ ತಾಯಂದಿರು ಫಲಾನುಭವಿಗಳಾಗಿರುತ್ತಾರೆ. ಆದರೆ ಅಂಥವರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲು ಸಾಧ್ಯವಾಗುತ್ತಿಲ್ಲ.

ಹಲವು ಮಹಿಳೆಯರ ಖಾತೆಯಲ್ಲಿ ಸಮಸ್ಯೆಗಳಿದ್ದು ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವುದಿಲ್ಲ ಇದಕ್ಕೆ ಹಲವಾರು ಕಾರಣಗಳನ್ನು ನೀಡಿದ್ದು ಹಣವು ಸರ್ಕಾರದಿಂದ ಜಮಾ ಆಗಿದ್ದರು ಕೂಡ ಇಂಥವರ ಖಾತೆಗೆ ಮಾತ್ರ ಹಣ ಬಂದು ತಲುಪುತ್ತಿಲ್ಲ ಎಂದು ತಿಳಿಸಿದರು ಇಂತಹ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಈಗ ಮತ್ತೊಂದು ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಒಂದು ವೇಳೆ ಕುಟುಂಬದ ಮೊದಲ ಮಹಿಳಾ ಸದಸ್ಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗದೇ ಇದ್ದರೆ ಈ ಹಣವನ್ನು ಎರಡನೇ ಹಿರಿಯ ಸದಸ್ಯರ ಖಾತೆಗೆ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಲಾಗಿದೆ.


ಪುರುಷರ ಸದಸ್ಯರ ಖಾತೆಗೆ ಏಕಾಏಕಿ ಹಣವನ್ನು ಜಮಾ ಮಾಡಲು ಸಾಧ್ಯವಿಲ್ಲ ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿರುವ ಮತ್ತೊಬ್ಬ ಮಹಿಳೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಇಲ್ಲದೆ ಇದ್ದರೆ ಮಾತ್ರ ಮನೆಯ ಯಜಮಾನನ ಅಥವಾ ಹಿರಿಯ ಪುರುಷನ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಒಟ್ಟಿನಲ್ಲಿ ಮೂರು ಕಂತಿನ ಹಣವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಪ್ರತಿಯೊಬ್ಬರ ಫಲಾನುಭವಿ ಖಾತೆಗೆ ಜಮಾ ಆಗಬೇಕೆನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದು ಇದೀಗ ನಾಲ್ಕನೇ ಕಂತಿನ ಹಣವಾದರೂ ಸಹ ಎಲ್ಲರ ಖಾತೆಗೆ ಜಮಾ ಆಗುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಇಲ್ಲದೆ ಪ್ರತಿಯೊಬ್ಬರೂ ಸಹ ಸರ್ಕಾರದ ವರಲಕ್ಷ್ಮಿ ಯೋಜನೆಯ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆಯಬೇಕು ಎಂದು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...