ನಮಸ್ಕಾರ ಸ್ನೇಹಿತರೇ ನಾಲ್ಕನೇ ಅತಿ ದೊಡ್ಡ ರೈಲು ಜಾಲವನ್ನು ವಿಶ್ವದಲ್ಲಿ ಹೊಂದಿರುವ ದೇಶ ಎಂದರೆ ಅದು ಭಾರತ. ಸುಮಾರು 1.2 ಕೋಟಿ ಜನರು ಪ್ರತಿದಿನ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಇಷ್ಟೊಂದು ಜನ ಪ್ರತಿದಿನ ರೈಲಿನ ಮೂಲಕ ಪ್ರಯಾಣ ಬೆಳೆಸುತ್ತಾರೆ ಅಲ್ಲದೆ ಟಿಕೆಟ್ ಅನ್ನು ಪ್ರತಿಯೊಬ್ಬರು ತೆಗೆದುಕೊಂಡು ಪ್ರಯಾಣವನ್ನು ಬೆಳೆಸುವುದು ಕಡ್ಡಾಯವಾಗಿದೆ ಈ ನಿಯಮದ ಹೊರತಾಗಿ ಈಗ ಮತ್ತೊಂದು ಹೊಸ ನಿಯಮವನ್ನು ರೈಲ್ವೆ ಇಲಾಖೆಯು ಜಾರಿಗೊಳಿಸಿದೆ.
ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದು :
ರೈಲಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ಪಡೆದು ಪ್ರಯಾಣಿಸುವುದು ಕಡ್ಡಾಯವಾಗಿದೆ ನೀವು ಎಷ್ಟೇ ದೂರದ ಪ್ರಯಾಣ ಮಾಡಿದರು ಸಹ ನಿಮ್ಮ ಬಳಿ ರೈಲ್ವೆ ಟಿಕೆಟ್ ಇರಬೇಕು. ಟಿಸಿ ರೈಲು ಹತ್ತಿದ ನಂತರ ಮಧ್ಯದಲ್ಲಿ ಟಿಕೆಟ್ ಗಳಿದ್ದಾಗ ಅದನ್ನು ನೀವು ತೋರಿಸಬೇಕು ರೈಲ್ವೆ ಟಿಕೆಟ್ ಆನ್ಲೈನ್ ಮೂಲಕವೂ ಸಹ ಬುಕ್ ಮಾಡಬಹುದಾಗಿತ್ತು ಆಫ್ಲೈನ್ ನಲ್ಲಿಯೂ ಸಹ ಕೌಂಟರ್ ನಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಇಷ್ಟೆಲ್ಲಾ ಅವಕಾಶವಿದ್ದರೂ ಸಹ ಕೆಲವೊಮ್ಮೆ ಟಿಕೆಟ್ ಪಡೆದುಕೊಳ್ಳಲು ನಮ್ಮಿಂದ ಸಾಧ್ಯವಾಗುವುದಿಲ್ಲ ಅಂತಹ ಸಂದರ್ಭದಲ್ಲಿ ನಾವು ರೈಲು ಹತ್ತುವುದು ಅನಿವಾರ್ಯವಾಗಿರುತ್ತದೆ.
ಆದರೆ ಎಲ್ಲರಿಗೂ ಗೊತ್ತಿರುವ ಹಾಗೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಅಪರಾಧ ಒಂದು ವೇಳೆ ನೀವೇನಾದರೂ ರೈಲಿನಲ್ಲಿ ಈ ರೀತಿ ಪ್ರಯಾಣ ಮಾಡುತ್ತಿದ್ದರೆ ಸಿಕ್ಕಿಬಿದ್ದ ಸಂದರ್ಭದಲ್ಲಿ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆದರೆ ಇದೀಗ ರೈಲ್ವೆ ಇಲಾಖೆಯು ಈಗ ಇದಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಬಹುದಾಗಿದೆ.
ಇದನ್ನು ಓದಿ : ಜನರಿಗೆ 40,000 ಹಣ ಜಮಾ ಮಾಡಲಾಗುತ್ತಿದೆ; ಈ ತಿಂಗಳು ನೊಂದಣಿಗೆ ಕೊನೆ ಅವಕಾಶ
ಟಿಟಿಇ ಯನ್ನು ಸಂಪರ್ಕಿಸಬೇಕು :
ನೀವೇನಾದರೂ ಒಂದು ವೇಳೆ ಟ್ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಟಿಕೆಟ್ ಇಲ್ಲದೆ ಇದ್ದರೆ ಅನಿವಾರ್ಯ ಕಾರಣಗಳಿಂದ ರೈಲು ಹತ್ತಿಕೊಂಡರೆ ನಂತರದಲ್ಲಿ ನೀವು ಟಿಟಿಇಯನ್ನು ಸಂಪರ್ಕಿಸಿ ರೈಲಿನಲ್ಲಿ ತಕ್ಷಣ ಟಿಕೆಟ್ ಪಡೆದುಕೊಳ್ಳಬಹುದಾಗಿದೆ. ನೀವು ಟಿಕೆಟ್ ಪಡೆದುಕೊಳ್ಳಬೇಕಾದರೆ ಸರಿಯಾದ ಕಾರಣವನ್ನು ನೀಡಿದಾಗ ಮಾತ್ರ ಟಿಕೆಟ್ ನೀಡಲಾಗುತ್ತದೆ ಇಲ್ಲದಿದ್ದರೆ ನಿಮಗೆ 250ಗಳ ದಂಡವನ್ನು ವಿಧಿಸಲಾಗುತ್ತದೆ ಅದಾದ ನಂತರ ನಿಮಗೆ ಟಿಕೆಟ್ ನೀಡಲಾಗುತ್ತದೆ. ಟಿಟಿಇ ಹತ್ತಿರ ಹ್ಯಾಂಡ್ ಓಲ್ಡ್ ಮಷೀನ್ ಇದ್ದು ಈ ಮಿಷಿನ್ ನ ಸಹಾಯದಿಂದ ನೀವು ಟಿಕೆಟ್ ಪಡೆದುಕೊಳ್ಳಬಹುದು.
ಹೀಗೆ ರೈಲ್ವೆ ಇಲಾಖೆಯ ಹೊಸ ನಿಯಮದ ಪ್ರಕಾರ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ರೈಲಿನಲ್ಲಿಯೇ ಟಿಕೆಟ್ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರಾದ ಸಂಬಂಧಿಕರು ಹೆಚ್ಚಾಗಿ ರೈಲ್ವೆ ಪ್ರಯಾಣ ಮಾಡುತ್ತಿದ್ದರೆ ಅವರಿಗೆ ರೈಲ್ವೆ ಇಲಾಖೆಯ ಈ ಹೊಸ ನಿಯಮದ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತನ ಮಗನನ್ನು ಮದುವೆಯಾಗುವ ವಧುವಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ10% ಮೀಸಲಾತಿ ಜಾರಿಗೆ
- ಮಧ್ಯಂತರ ಬೆಳೆ ವಿಮೆ ರೈತರ ಖಾತೆಗೆ ಜಮಾ : ಯಾರಿಗೆ ಬಂದಿಲ್ಲ ಅವರು ಈ ಲಿಂಕ್ ಬಳಸಿ