ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಹೊಸ ವರದಿಗೆ ಸ್ವಾಗತ ನಿಮಗೆ ಒಂದು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ .ಅದೇನೆಂದರೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ 6ನೇ ತರಗತಿಯಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ವಸತಿ ಶಾಲೆಗಳಲ್ಲಿ ಪಡೆಯಬಹುದು .ಅದಕ್ಕಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ನೀವು ಸಲ್ಲಿಸಬೇಕು .ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಹೊಸ ಪ್ರವೇಶಾತಿ ಆರಂಭ :
2024 25 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ವಿವಿಧ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಕೆಳಗಿನ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾವ ಯಾವ ಶಾಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಎಂಬುದನ್ನು ತಿಳಿಯೋಣ.
ಈ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದು :
- ಮುರಾರ್ಜಿ ದೇಸಾಯಿ ಶಾಲೆ.
- ಸಂಗೊಳ್ಳಿ ರಾಯಣ್ಣ.
- ಶ್ರೀ ನಾರಾಯಣ ಗುರು ಶಾಲೆ.
- ಶ್ರೀಮತಿ ಇಂದಿರಾ ಗಾಂಧಿ ಶಾಲೆ.
- ಏಕಲವ್ಯ ಮಾದರಿ ಶಾಲೆ.
- ಕಿತ್ತೂರಾಣಿ ಚೆನ್ನಮ್ಮ ಶಾಲೆ.
- ಇನ್ನು ಅನೇಕ ಶಾಲೆಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.
ಅರ್ಹತೆಗಳ ಬಗ್ಗೆ ತಿಳಿಯೋಣ :
ಈ ಶಾಲೆಗಳಿಗೆ ಅರ್ಜಿ ಸಲ್ಲಿಸಲು ನೀವು ಅಂದರೆ ನಿಮ್ಮ ಮಕ್ಕಳು ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಅರ್ಜಿ ಸಲ್ಲಿಸಬಹುದು. ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು ವಯಸ್ಸು 9 ರಿಂದ 13 ವರ್ಷ ದವರಾಗಿರಬೇಕು. ಅರ್ಜಿ ಸಲ್ಲಿಸಿದ ನಂತರ ದಾಖಲೆ ಪರಿಶೀಲನೆ ಸಮಯದಲ್ಲಿ ಐದನೇ ತರಗತಿ ಉತ್ತೀರ್ಣರಾಗಿರುವ ಬಗ್ಗೆ ಮಾಸ್ ಕಾರ್ಡ್ ಇರಬೇಕು ಹಾಗೂ ಮಕ್ಕಳ ಭಾವಚಿತ್ರ ಜೊತೆಗೆ ಜಾತಿ ಆದಾಯ ಪ್ರಮಾಣ ಪತ್ರ ರೇಷನ್ ಕಾರ್ಡ್ ಇನ್ನಿತರೆ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
ಇದನ್ನು ಓದಿ : ದಯವಿಟ್ಟು ಗಮನಿಸಿ : ಸರ್ಕಾರದಿಂದ ಮೊಬೈಲ್ ಬಳಸುವವರಿಗಾಗಿ ಖಡಕ್ ಸೂಚನೆ
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ನಿಮಗೆ ಆರಂಭದ ದಿನಾಂಕ 7-12.2023
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಈ ರೀತಿ ಇದೆ 31.12.2023
- ದಿನಾಂಕ ಈ 18.02.2024 ರಂದು ಪರೀಕ್ಷೆ ನಡೆಯಲಿದೆ
ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ :
- 100 ಅಂಕಗಳಿಗೆ ಪರೀಕ್ಷೆಯನ್ನು ಮಾಡಲಾಗುತ್ತದೆ 120 ನಿಮಿಷಗಳ ಸಮಯವನ್ನು ಮಕ್ಕಳಿಗೆ ಮೀಸಲಿಡಲಾಗಿರುತ್ತೆ.
- ಶಾಲೆಗಳ ಸೀಟು ಹಂಚಿಕೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿರುತ್ತದೆ, ಇದರೊಂದಿಗೆ ಅವರ ಮೀಸಲಾತಿ ಸಹ ಪರಿಗಣಿಸಲಾಗುವುದು.
- ಮಕ್ಕಳು ಬರೆಯುವ ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇರುತ್ತದೆ.
- ಪಠ್ಯಕ್ರಮವೂ ಶೇಕಡ 90ರಷ್ಟು ಇಂದಿನ ತರಗತಿಯ ಪಠ್ಯಗಳನ್ನು ಆಧರಿಸಿರುತ್ತದೆ ಅಂದರೆ ನಾಲ್ಕು ಮತ್ತು ಐದನೇ ತರಗತಿ ಪಠ್ಯಕ್ರಮ.
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕೆಂದು ತಿಳಿಯಿರಿ :
ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಮೇಲ್ಕಂಡ ಮಾಹಿತಿಯು ನಿಮಗೆ ಅಗತ್ಯವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ ಇದೇ ರೀತಿಯ ಹೊಸ ಹೊಸ ವಿಷಯಗಳನ್ನು ತಿಳಿಸಲಾಗುವುದು ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
- ಈ ನಿಯಮ ಉಲ್ಲಂಘನೆ ಮಾಡಿದರೆ 11,000 ದಂಡ ಖಚಿತ : ನಿಮಯ ತಿಳಿದುಕೊಳ್ಳಿ
- ಸುವರ್ಣ ಅವಕಾಶ : ಮಿನಿ ಟ್ರಾಕ್ಟರ್ ಅನ್ನು ಕೇವಲ ಹತ್ತು ಸಾವಿರ ರೂಪಾಯಿಗೆ ಖರೀದಿಸಬಹುದು