ನಮಸ್ಕಾರ ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಮತ್ತೊಂದು ಕಂತಿನ ಹಣ ಬಿಡುಗಡೆಯಾಗಿದೆ ಅಂದರೆ ಅನ್ನಭಾಗ್ಯ ಯೋಜನೆಯ ನಾಲ್ಕನೇ ಕಂತಿನ ಹಣವನ್ನು ಸಹ ಬಿಡುಗಡೆ ಮಾಡಲಾಗಿದ್ದು ಈ ಹಣ ನಿಮ್ಮ ಖಾತೆಗೆ ಬಂದಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

ಹೊಸ ಖಾತೆ ತೆರೆಯಿರಿ :
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ರಾಜ್ಯ ಸರ್ಕಾರವು ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಯುವನಿಧಿ ಯೋಜನೆ 5ನೇ ಗ್ಯಾರಂಟಿ ಯೋಜನೆಯಾಗಿದ್ದು ಈ ಯೋಜನೆ ಸಹಜಾರಿಗೆ ಬರುವ ನಿರೀಕ್ಷೆ ಇದೆ. ಅದರಂತೆ ನೀವು ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿಯ ಹಣವನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಹೊಸದಾಗಿ ಬ್ಯಾಂಕ್ ಖಾತೆಯನ್ನು ತೆರೆಯಬಹುದಾಗಿದೆ.
ಕೆಲವು ಜಿಲ್ಲೆಗಳಲ್ಲಿ ಹಳೆಯ ಖಾತೆಯಲ್ಲಿ ಈಗಾಗಲೇ ಸಮಸ್ಯೆ ಇರುವ ಕಾರಣ ಹೊಸ ಖಾತೆಯನ್ನು ಗೃಹಣಿಯರು ತೆರೆದು ಆ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಆಧಾರ್ ಕಾರ್ಡ್ ಅನ್ನು ಹೊಸ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಂಡರೆ ಸರ್ಕಾರದ ಯೋಜನೆಯ ಪ್ರಯೋಜನಗಳನ್ನು ಕೇವಲ ಕೆಲವು ಗಂಟೆಗಳಲ್ಲಿ ಪಡೆದುಕೊಳ್ಳಬಹುದಾಗಿದೆ.
ಇದನ್ನು ಓದಿ : ಗ್ರಾಹಕರ ಜೇಬಿಗೆ ಕತ್ತರಿ :5ನಿಯಮಗಳು ಡಿಸೆಂಬರ್ 1ರಿಂದ ಬದಲಾಗಲಿದೆ
ಈಗಾಗಲೇ ಅಂಚೆಕಛೇರಿಯಲ್ಲಿ ನೀವು ಖಾತೆಯನ್ನು ಹೊಂದಿದ್ದರೆ ಸರ್ಕಾರದ ಯೋಜನೆಯ ಹಣವನ್ನು ಯಾವ ಸಮಸ್ಯೆ ಇಲ್ಲದೆ ಪಡೆಯಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಹಾಗಾಗಿ ಆದಷ್ಟು ಬೇಗ ಹಳೆಯದಾಗಿರುವ ಖಾತೆಯನ್ನು ಮಹಿಳೆಯರು ಬಿಟ್ಟು ಹಂಚಿಕಛೇರಿಯಲ್ಲಿ ಹೊಸದಾಗಿ ಖಾತೆಯನ್ನು ತೆರೆಯುವ ಮೂಲಕ ಸರ್ಕಾರದ ಯೋಜನೆಯ ಹಣವನ್ನು ಬರುವಂತೆ ಮಾಡಿಕೊಳ್ಳಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಜನತೆಗೆ ತಿಳಿಸಿದ್ದಾರೆ.
ಸ್ಟೇಟಸ್ ಚೆಕ್ ಮಾಡಿಕೊಳ್ಳಿ :
ಈಗಾಗಲೇ ಮಹಿಳಾ ಮತ್ತು ಮಕ್ಕಳ ಸಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದುವುದರ ಮೂಲಕ ಯಾವುದೇ ಸಮಸ್ಯೆ ಇಲ್ಲದೆ ಸರ್ಕಾರದ ಯೋಜನೆ ಹಣವನ್ನು ಪಡೆಯಬಹುದು ಎಂಬ ಮಾಹಿತಿಯನ್ನು ತಿಳಿಸಿದ್ದು ಅದನ್ನು ಹೇಗೆ ಚೆಕ್ ಮಾಡಬೇಕು ಎಂಬುದನ್ನು ನೋಡುವುದಾದರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://ahara.kar.nic.in/lpg/ಈ ವೆಬ್ ಸೈಟಿಗೆ ಭೇಟಿ ನೀಡಿ ಅನ್ನ ಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ಕೆಲವೊಂದು ಹಂತಗಳನ್ನು ಪೂರ್ಣಗೊಳಿಸುವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರದಿಂದ ಸಚಿವರು ತಿಳಿಸಿರುವಂತೆ ಮಹಿಳೆಯರು ಹಂಚಕಛೇರಿಯಲ್ಲಿ ಹೊಸ ಖಾತೆಯನ್ನು ತೆರೆಯುವುದರ ಮೂಲಕ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಕ್ರೆಡಿಟ್ ಕಾರ್ಡ್ ಬಳಸುವವರಿಗೆ EMI ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
ಲಕ್ಷಾಂತರ ರೈಲ್ವೆ ಪ್ರಯಾಣಿಕರಿಗೆ :ಉಚಿತ ಆಹಾರ, ಹೊಸ ನಿಯಮ