ನಮಸ್ಕಾರ ಸ್ನೇಹಿತರೆ ಭಾರತದಲ್ಲಿ ಅಗತ್ಯ ದಾಖಲೆಗಳಲ್ಲಿ ಆಧಾರ್ ಕೂಡ ಒಂದಾಗಿದ್ದು ಸರ್ಕಾರದ ಯಾವುದೇ ರೀತಿಯ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಮಾಹಿತಿಗಳು ಬಹಳ ಮುಖ್ಯವಾಗಿರುತ್ತವೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅನೇಕ ಜನರು ಅನೇಕ ಬಾರಿ ಸ್ಥಳಾಂತರ ಗೊಳ್ಳುತ್ತಾರೆ ಹಾಗಾಗಿ ಆಧಾರ್ ಕಾರ್ಡ್ ನಲ್ಲಿ ನೀಡಿರುವ ವಿಳಾಸವನ್ನು ಇಂತಹ ಪರಿಸ್ಥಿತಿಯಲ್ಲಿ ಬದಲಾಯಿಸಬೇಕಾಗುತ್ತದೆ.
ಆಧಾರ್ ಕಾರ್ಡ್ ವಿಳಾಸ ಬದಲಾವಣೆ :
ಆಧಾರ್ ಕಾರ್ಡ್ ನಲ್ಲಿ ಇರುವಂತಹ ವಿಳಾಸವನ್ನು ಬದಲಾವಣೆ ಮಾಡಲು ರೂ.50 ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮನೆಯಲ್ಲಿಯೇ ಕುಳಿತು ಆಧಾರ್ ಕಾರ್ಡ್ ವಿಳಾಸವನ್ನು ಆನ್ಲೈನ್ ಮೂಲಕ ಬದಲಾಯಿಸಬಹುದಾಗಿದ್ದು,
ಆನ್ಲೈನ್ ಮೂಲಕ ಬದಲಾಯಿಸಲು ಯುಐಡಿಎಐ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://myaadhaar.uidai.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಬೇಕಾಗುತ್ತದೆ. ಇದಾದ ನಂತರ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿಯನ್ನು ಕಳುಹಿಸಲಾಗುತ್ತದೆ ಓಟಿಪಿ ಅನ್ನು ನಮೂದಿಸಿದ ನಂತರ ಲಾಗಿನ್ ಆಗಬೇಕು ನಿಮ್ಮ ಪ್ರಸ್ತುತ ವಿಳಾಸ ಬದಲಾಯಿಸಬಹುದಾಗಿದೆ.
ಇದನ್ನು ಓದಿ : ನಿಮ್ಮ ಖಾತೆಗೆ ಬೆಳೆ ಪರಿಹಾರದ ಹಣ ಬಂದಿದೆಯ ನೋಡಿ ! ಈ ಕೂಡಲೇ ಚೆಕ್ ಮಾಡಿಕೊಳ್ಳಿ
30 ದಿನಗಳಲ್ಲಿ ನವೀಕರಣ :
ವಿಳಾಸವನ್ನು ಬದಲಾಯಿಸಿದ ನಂತರ ಹೊಸ ವಿಳಾಸದ ಪ್ರಮಾಣ ಪತ್ರಕ್ಕಾಗಿ ನೀವು ಪೋಷಕರ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಅದಾದ ನಂತರ ಹೊಸ ವಿಳಾಸವನ್ನು ಅಪ್ಲೋಡ್ ಮಾಡಿ ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿದರೆ ಅದರಲ್ಲಿ ನಿಮಗೆ ಪಾವತಿ ಆಯ್ಕೆ ಬರುತ್ತದೆ ಅದರಲ್ಲಿ ನೀವು ಆನ್ಲೈನ್ ಮೂಲಕ ಇವತ್ತು ರೂಪಾಯಿಗಳ ಹಣವನ್ನು ಪಾವತಿ ಮಾಡಿ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ. 30 ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡನ್ನು ನವೀಕರಿಸಲಾಗುತ್ತದೆ.
ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಬದಲಾಯಿಸುವಾಗ ಸಾಮಾನ್ಯವಾಗಿ ಜನರು ಅವರ ಹೊಸ ವಿಳಾಸದ ಯಾವುದೇ ದಾಖಲೆಗಳನ್ನು ಹೊಂದಿರುವುದಿಲ್ಲ ಆದ್ದರಿಂದ ತಮ್ಮ ವಿಳಾಸವನ್ನು ಹೆಚ್ಚಿಸುವ ಮುಖ್ಯಸ್ಥನ ಆಯ್ಕೆ ಅಡಿಯಲ್ಲಿ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಹೀಗೆ ಆಧಾರ್ ಕಾರ್ಡ್ ನಲ್ಲಿ ಇರುವಂತಹ ವಿಳಾಸವನ್ನು ಆನ್ಲೈನ್ ಮೂಲಕವೇ ಮನೆಯಲ್ಲಿಯೇ ಕುಳಿತು ನೀವೇ ಮಾಡಬಹುದಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಮನೆಯಲ್ಲಿಯೇ ಕುಳಿತು ಇದೀಗ ಆಧಾರ್ ಕಾರ್ಡ್ ನಲ್ಲಿ ಇರುವಂತಹ ವಿಳಾಸವನ್ನು ಬದಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಇನ್ನು ಮುಂದೆ ಆಧಾರ್ ಕೇಂದ್ರಕ್ಕೆ ಹೋಗುವಂತಹ ಅಗತ್ಯವಿರುವುದಿಲ್ಲ. ಹೀಗೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ವಿಳಾಸವನ್ನು ಬದಲಾವಣೆ ಮಾಡಿದ್ದರೆ ಅವರಿಗೂ ತಮ್ಮ ಆಧಾರ್ ಕಾರ್ಡ್ ನಲ್ಲಿರುವ ವಿಳಾಸವನ್ನು ಆನ್ಲೈನ್ ಮೂಲಕ ಮೊಬೈಲ್ ನಲ್ಲಿಯೇ ಕುಳಿತು ಬದಲಾಯಿಸಬಹುದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಉಚಿತ ಹೊಲಿಗೆ ಯಂತ್ರ ವಿತರಣೆ : ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ
- ಡ್ರೈವಿಂಗ್ ಲೈಸೆನ್ಸ್ 10 ನಿಮಿಷದಲ್ಲಿ ಪಡೆಯಿರಿ ಆನ್ಲೈನ್ ಮೂಲಕ ಈಗಲೇ ಅರ್ಜಿ ಸಲ್ಲಿಸಿ !