ನಮಸ್ಕಾರ ಸ್ನೇಹಿತರೆ, ಆ ರಾಜ್ಯದ ಕಟ್ಟ ಕಡೆಯ ಪ್ರಜಾ ಅಭಿವೃದ್ಧಿಯು ಒಂದು ಸರ್ಕಾರ ಎಂದ ಮೇಲೆ ಅದರ ಜವಾಬ್ದಾರಿಯು ಆಗಿರುತ್ತದೆ. ಹೀಗಾಗಿ ರೈತರಿಗೆ ಕಾರ್ಮಿಕರಿಗೆ ಹಿಂದುಳಿದ ಸಮಾಜದವರಿಗೆ ಸರ್ಕಾರಗಳು ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡುತ್ತವೆ ಅದರಲ್ಲಿ ಮುಖ್ಯವಾಗಿ ಮಹಿಳೆಯರ ಸಬಲೀಕರಣಕ್ಕೂ ಆದ್ಯತೆ ನೀಡಿ ಸರ್ಕಾರಗಳು ಜಾರಿಗೆ ತರುತ್ತಿವೆ.
ಕಾಲಕ್ಕೆ ತಕ್ಕಂತೆ ಮಹಿಳೆಯರು ಕೂಡ ಆರ್ಥಿಕವಾಗಿ ಸಬಲರಾಗಬೇಕು ಹಾಗೂ ಸ್ವಂತ ಕಾಲಿನಲ್ಲಿ ಅವರು ನಿಂತು ಸಾಮಾಜಿಕವಾಗಿ ಗೌರವ ಪಡೆದುಕೊಳ್ಳಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದ್ದು ಅದಕ್ಕೆ ತಕ್ಕಂತೆ ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಅದರಂತೆ ಇದೀಗ ಮತ್ತೊಂದು ಹೊಸ ಯೋಜನೆಯನ್ನು ಮಹಿಳೆಯರಿಗಾಗಿ ಘೋಷಣೆ ಮಾಡಲಾಗಿದೆ.
ಸರ್ಕಾರದಿಂದ ಮಹಿಳೆಯರಿಗಾಗಿ ಉದ್ಯೋಗಿನಿ ಯೋಜನೆ :
ಸಮಾಜದಲ್ಲಿ ಇಂದು ಪುರುಷರಿಗೆ ಸಮಾನವಾಗಿ ಮಹಿಳೆಯರು ದುಡಿಯುತ್ತಿದ್ದಾರೆ ಹಾಗಾಗಿ ಅವರು ಸಹಸ್ವಾಗಲಂಬಿಗಳಾಗಬೇಕೆನ್ನುವ ಉದ್ದೇಶದಿಂದ ರಾಜ್ಯ ಸರ್ಕಾರವು ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ 3 ಲಕ್ಷ ರೂಪಾಯಿಗಳವರೆಗೆ ಈ ಯೋಜನೆಯ ಅಡಿಯಲ್ಲಿ ಸರ್ಕಾರವು ಧನ ಸಹಾಯ ನೀಡುತ್ತದೆ. ಬ್ಯಾಂಕುಗಳು ಅಥವಾ ವಿವಿಧ ನಿಗಮ ಮಂಡಳಿಗಳ ಮೂಲಕ ಈ ಧನ ಸಹಾಯವನ್ನು ಪಡೆಯಬಹುದಾಗಿದೆ. ಸ್ವಉದ್ಯೋಗವನ್ನು ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾದವರು ಶುರು ಮಾಡಬಹುದಾಗಿದೆ.
ಉದ್ಯೋಗಿನಿ ಯೋಜನೆಗೆ ಇರುವ ಅರ್ಹತೆಗಳು :
ಮಹಿಳೆಯರು ಉದ್ಯೋಗಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕುಟುಂಬದ ವಾರ್ಷಿಕ ಆದಾಯವು 1.5 ಲಕ್ಷ ರೂಪಾಯಿ ಕಡಿಮೆ ಇರಬೇಕು. 18 ರಿಂದ 55 ವರ್ಷದ ಒಳಗಿನ ಮಹಿಳೆಯರು ಉದ್ಯೋಗಿನಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಬಡ್ಡಿ ರಹಿತ ಸಾಲವಾಗಿ ಮೂರು ಲಕ್ಷ ರೂಪಾಯಿಗಳನ್ನು ಪಡೆಯಬಹುದಾಗಿತ್ತು ಯಾವ ಉದ್ಯಮವನ್ನು ಮಹಿಳೆಯರು ಆರಂಭಿಸಲು ಇಚ್ಛಿಸುತ್ತಾರೋ ಅದರ ಬಗ್ಗೆ ಮಾಹಿತಿ ನೀಡಿ ಸಾಲವನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಅನ್ನಭಾಗ್ಯ ಯೋಜನೆ ಮಹತ್ವದ ನಿರ್ಧಾರ.! ಧಿಢೀರ್ ಬದಲಾವಣೆಯಾಯ್ತು ಈ ನಿಯಮ
ಈ ಉದ್ಯೋಗಗಳಿಗೆ ಸಾಲ ಪಡೆಯಬಹುದು :
ಟೈಲರಿಂಗ್ ಸಣ್ಣ ಟೀ ಅಂಗಡಿ ತರಕಾರಿ ಹಣ್ಣಿನ ವ್ಯಾಪಾರ ಹೂವಿನ ವ್ಯಾಪಾರ ಹೀಗೆ ಸಣ್ಣ ವ್ಯಾಪಾರ ಇಲ್ಲವೇ ಕೌಶಲ್ಯ ಪೂರ್ಣವಾದ ಸಣ್ಣಪುಟ್ಟ ಉದ್ಯಮವನ್ನು ಈ ಯೋಜನೆಯ ಅಡಿಯಲ್ಲಿ ಸಾಲ ಪಡೆದು ಮಹಿಳೆಯರು ಆರಂಭಿಸಿ ಆರ್ಥಿಕವಾಗಿ ಜೀವನದಲ್ಲಿ ಅಭಿವೃದ್ಧಿ ಹೊಂದಬಹುದಾಗಿದೆ. ಅಲ್ಲದೆ ಸಮಾಜದಲ್ಲಿ ಈ ಮೂಲಕ ಗೌರವ ಸಂಪಾದಿಸಿ ಉತ್ತಮ ಬದುಕು ಕಟ್ಟಿಕೊಳ್ಳಬಹುದಾಗಿದೆ.
ಹೇಗೆ ಸಾಲ ಪಡೆಯಬಹುದು :
ಯಾವುದೇ ಬ್ಯಾಂಕುಗಳಿಗೆ ಸಾಲಕ್ಕಾಗಿ ಅಲೆದಾಡುವ ಸ್ಥಿತಿ ಇರುವುದಿಲ್ಲ ಬಡ್ಡಿ ರಹಿತವಾಗಿ ನೀಡುವುದರಿಂದ ಸುಲಭವಾಗಿ ಸಾಲ ಮರುಪಾವತಿಯು ಸಹ ಮಾಡಬಹುದಾಗಿದೆ. ಮೂರು ಆರು ದಿನಗಳ ಈ ಡಿಪಿ ತರಬೇತಿಯನ್ನು ಸಾಲ ಮಂಜೂರಾತಿಗೆ ಮುನ್ನ ಮಹಿಳೆಯರಿಗೆ ನೀಡಲಾಗುತ್ತದೆ. ಉದ್ಯಮ ಶುರು ಮಾಡುವ ಸಲುವಾಗಿ ಮಹಿಳೆಯರು ಹೆಚ್ಚಿನ ಬಡ್ಡಿ ದರದ ಸಾಲ ಪಡೆಯಬಹುದಾಗಿದೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಸ್ವಂತ ಉದ್ಯೋಗವನ್ನು ಮಾಡಲು 3 ಲಕ್ಷ ರೂಪಾಯಿಗಳ ವರೆಗೆ ಸಹಾಯಧನವನ್ನು ರಾಜ್ಯ ಸರ್ಕಾರದಿಂದ ಪಡೆಯಬಹುದಾಗಿದೆ. ಪ್ರತಿಯೊಂದು ಮಹಿಳೆಯರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಆರ್ಥಿಕ ವರ್ಷದ ಆರಂಭದೊಳಗೆ ಈ 5 ಕೆಲಸಗಳನ್ನು ಮಾಡಿ ಮುಗಿಸಿ! ಇಲ್ಲದಿದ್ದರೆ ಭಾರಿ ದಂಡ ಕಟ್ಬೇಕು
- ಸಾಲಕ್ಕಾಗಿ ಕಾಯುತ್ತಿದ್ದೀರಾ? ಇಲ್ಲಿ ಡಾಕ್ಯುಮೆಂಟ್ ಇಲ್ಲದೆ ಸಿಗಲಿದೆ ಸಾಲ; ಇಲ್ಲಿದೆ ಕಂಪ್ಲೀಟ್ ಅಪ್ಡೇಟ್