News

ಕೃಷಿ ನವೋದ್ಯಮ ಯೋಜನೆ : ತರಬೇತಿಗೆ ಹಾಗೂ ನೋಂದಣಿ ಉಚಿತ

Agricultural Innovation Scheme Free for training and registration

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕರ್ನಾಟಕ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲು ಹೊರಟಿರುವ ಯುವಕ ಯುವತಿಯರಿಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಅದರಂತೆ ಕರ್ನಾಟಕ ಸರ್ಕಾರವು ಯಾವ ಯೋಜನೆಯ ಅಡಿಯಲ್ಲಿ ಈ ಸಾಲ ಸೌಲಭ್ಯವನ್ನು ನೀಡುತ್ತಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

Agricultural Innovation Scheme Free for training and registration
Agricultural Innovation Scheme Free for training and registration

ಕೃಷಿ ನವೋದ್ಯಮ ಯೋಜನೆ :

ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬೀ ಮುದಗಲ್ ಅವರು ರೈತರು ಕೃಷಿ ನವೋದ್ಯಮ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮೇರು ಕಟ್ಟೆಗೆ ಸಂಬಂಧಿಸಿದಂತೆ ನಾವಿನ್ಯತೆಯನ್ನು ವಲಯಗಳಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡುವ ಸಲುವಾಗಿ 2023 24ರ ಆಯವ್ಯಯ ಭಾಷಣದಲ್ಲಿ ನವೋದಯ ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆಯ ಮುಖ್ಯ ಗುಡಿ ಏನೆಂದರೆ ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಸಲುವಾಗಿ ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಕೃಷಿಯಲ್ಲಿ ಉದ್ಯೋಗ ಸೃಜನಗಾಗಿ ನೂತನ ತಾಂತ್ರಿಕತೆಗಳನ್ನು ಉತ್ತೇಜಿಸಲು ಈ ಯೋಜನೆಯನ್ನು ಆಯೋಜಿಸಲಾಗಿದೆ.

ಇದನ್ನು ಓದಿ : ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು

ಶೇಕಡ 50ರಷ್ಟು ಧನ ಸಹಾಯ :

ಕೃಷಿ ಕ್ಷೇತ್ರದಲ್ಲಿ ಹೊಸ ಕೃಷಿ ನವೋದ್ಯಮಗಳಿಗೆ ನೂತನ ಪರಿಕಲ್ಪನೆ ಯೊಂದಿಗೆ ಹೊಸ ಕೃಷಿ ನವೋದ್ಯಮಿಗಳಿಗೆ ಆರಂಭಿಸುವ ಅನುಮೋದಿತ ಯೋಜನಾ ವರದಿಯ ಪ್ರಕಾರ ರೈತರಿಗೆ ಶೇಕಡ 50ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಈ ಸಹಾಯಧನವನ್ನು ಬ್ಯಾಂಕ್ ಸಾಲದ ಮುಖಾಂತರ ನೀಡಲಾಗುತ್ತದೆ. ಕೃಷಿ ನವೋದ್ಯಮ ಯೋಜನೆಗೆ ಸಂಬಂಧಿಸಿದಂತೆ ನವೋದ್ಯಮಿಗಳ ಸಾಮರ್ಥ್ಯದ ಅಭಿವೃದ್ಧಿಗೆ ಐಸಿಎಆರ್, ಜಿ ಎಫ್ ಟಿ ಆರ್ ಐ ಹೀಗೆ ಇತರೆ ಸಂಶೋಧನಾ ಸಂಸ್ಥೆಗಳ ಮೂಲಕ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನದ ಇಲಾಖೆಯ ಅಡಿಯಲ್ಲಿ ಸ್ಥಾಪಿತವಾಗುವ ಕೃಷಿ ನಾವಿನ್ಯತೆಗಾಗಿ ಶ್ರೇಷ್ಠತೆಯ ಕೇಂದ್ರಗಳ ಮೂಲಕ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.


ತರಬೇತಿಗೆ ನೋಂದಣಿ ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಕೃಷಿ ನವೋದಯ ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ನಮೂನೆ ಹಾಗೂ ಇತರೆ ಸಂಬಂಧಿತ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ ಬಿ ಮಹಮದ್ ಹಾರೂನ್ ರಶೀದ್ ರವರನ್ನು ಸಂಪರ್ಕಿಸಬಹುದಾಗಿದೆ ಅವರ ಮೊಬೈಲ್ ನಂಬರ್ 8277929662 ಈ ಸಂಖ್ಯೆಗೆ ಕರೆ ಮಾಡಿ ಕರ್ನಾಟಕ ಸರ್ಕಾರದ ಈ ಹೊಸ ಯೋಜನೆಯ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ಹೀಗೆ ಕರ್ನಾಟಕ ಸರ್ಕಾರವು ಕೃಷಿಯಲ್ಲಿ ತಂತ್ರಜ್ಞಾನ ನಾವಿನ್ಯತೆಯನ್ನು ಹೆಚ್ಚಿಸುವ ಸಲುವಾಗಿ ಕೃಷಿ ನವೋದಯ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಬ್ಯಾಂಕುಗಳಿಂದ ಶೇಕಡ 50ರಷ್ಟು ಸಹ ಆರ್ಥಿಕ ನೆರವನ್ನು ನೀಡಲು ನಿರ್ಧರಿಸಿದೆ. ಹಾಗಾಗಿ ಕರ್ನಾಟಕ ಸರ್ಕಾರದ ಈ ಹೊಸ ಯೋಜನೆಯ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಕೃಷಿಯಲ್ಲಿ ಹೆಚ್ಚು ಸಾಧನೆಯನ್ನು ಮಾಡಲು ಹೊರಟಿದ್ದರೆ ಅವರಿಗೆ ಶೇಕಡ 50ರಷ್ಟು ಸಹಾಯಧನ ಈ ಯೋಜನೆಯಡಿಯಲ್ಲಿ ಲಭ್ಯವಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...